ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದು ಬಿಜೆಪಿ, ಜೆಡಿಎಸ್‌ಗೆ ಸೇರಲ್ಲ: ಸಿಎಂ ಸಿದ್ದರಾಮಯ್ಯ
ಅಸಾಧ್ಯವಾದ ಗ್ಯಾರಂಟಿ ಕಾರ್ಯಕ್ರಮ ನೀಡಿದ್ದಾರೆ ಅಂತಾ ಬಿಜೆಪಿ, ಜೆಡಿಎಸ್ ಹೇಳಿತ್ತು. ಮೊದಲ ಕ್ಯಾಬಿನೆಟ್‌ನಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ನಿರ್ಧರಿಸಿದ್ವಿ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನ ನಮ್ಮ ಸರ್ಕಾರ ಈಡೇರಿಸಿದೆ. ಬಿಜೆಪಿ 600 ಭರವಸೆ ನೀಡಿತ್ತು, 10 ಪರ್ಸೆಂಟ್ ಈಡೇರಿಸಿಲ್ಲ: ಸಿಎಂ ಸಿದ್ದರಾಮಯ್ಯ
ಗದಗ(ಡಿ.15): ಸಿರಿ ಧಾನ್ಯ ಉತ್ತೇಚನ ನೀಡುವ ಉದ್ದೇಶದಿಂದ ಸಿರಿಧಾನ್ಯ ಕಾರ್ಯಕ್ರಮ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದ ಮೇಲೆ ಅಭಿವೃದ್ಧಿಗೆ ಹಣ ಇಲ್ಲ ಅಂತಾರೆ. ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದು ಬಿಜೆಪಿ, ಜೆಡಿಎಸ್‌ಗೆ ಸೇರಲ್ಲ. ಅಸಮಾನತೆ ತೊಲಗಬಾರದು, ಸಮಸಮಾಜ ನಿರ್ಮಾಣಕ್ಕೆ ಬಿಜೆಪಿ ವಿರೋಧವಿದೆ ಎಂದು ವಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಇಂದು(ಭಾನುವಾರ) ಜಿಲ್ಲೆಯ ರೋಣ ಮತಕ್ಷೇತ್ರದಲ್ಲಿ ಸುಮಾರು 200 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೋಣ ಕ್ಷೇತ್ರದ ಅಭಿವೃದ್ಧಿಗೆ 200 ಕೋಟಿ ರೂ. ನೀಡಲಾಗಿದೆ. 1 ಲಕ್ಷ ಕೋಟಿ ಅಭಿವೃದ್ಧಿಗೆ, 52 ಸಾವಿರ ರೂಪಾಯಿಯನ್ನ ಗ್ಯಾರಂಟಿಗೆ ಇಟ್ಟಿದ್ದೇವೆ. 150 ಕೋಟಿ ಹಣವನ್ನ ಬರೀ ಅಭಿವೃದ್ಧಿಗೆ ಇಟ್ಟಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಅಂತಾ ಹೇಳುವವರು ಇದನ್ನು ಗಮನಿಸಬೇಕು. ರಚನಾತ್ಮಕ ಟೀಕೆಯನ್ನ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
150 ಕೋಟಿ ಆಮಿಷವೊಡ್ಡಿದ ವಿಜಯೇಂದ್ರ ಮೇಲೆ ಪ್ರಧಾನಿ ಸಿಬಿಐ ತನಿಖೆ ಮಾಡಿಸ್ಲಿ: ಸಿದ್ದರಾಮಯ್ಯ
ಅಸಾಧ್ಯವಾದ ಗ್ಯಾರಂಟಿ ಕಾರ್ಯಕ್ರಮ ನೀಡಿದ್ದಾರೆ ಅಂತಾ ಬಿಜೆಪಿ, ಜೆಡಿಎಸ್ ಹೇಳಿತ್ತು. ಮೊದಲ ಕ್ಯಾಬಿನೆಟ್‌ನಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ನಿರ್ಧರಿಸಿದ್ವಿ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನ ನಮ್ಮ ಸರ್ಕಾರ ಈಡೇರಿಸಿದೆ. ಬಿಜೆಪಿ 600 ಭರವಸೆ ನೀಡಿತ್ತು, 10 ಪರ್ಸೆಂಟ್ ಈಡೇರಿಸಿಲ್ಲ. ಸಾಲ ಮನ್ನಾ ಮಾಡಿ ಅಂದ್ರೆ, ಹಣ ಪ್ರಿಂಟ್ ಮಾಡುವ ಮಷಿನ್ ಇಲ್ಲ ಅಂದ್ರು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಕಾಂಗ್ರೆಸ್‌ನಿಂದಲೇ ಅನ್ವರ್ ಮಾಣಿಪ್ಪಾಡಿಗೆ ಆಫರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರದಲ್ಲಿ ಅವ್ರದ್ದೇ ಸರ್ಕಾರ ಇದೆ, ಸಿಬಿಐ ತನಿಖೆಗೆ ಕೊಡಲಿ. ವಿಡಿಯೋ ರೆಕಾರ್ಡ್ ನಲ್ಲಿ ಇದೆಯಲ್ಲ. ವೀಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಅವರೇ ಪ್ರಧಾನಿ ಹಾಗೂ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಈಗ ಗೊತ್ತಿಲ್ಲ, ಯಾಕೇ ಬದಲಾವಣೆ ಮಾಡಿಕೊಂಡಿದ್ದಾರಂತೆ ನೋಡುತ್ತೇನೆ. ಬದಲಾವಣೆ ಮಾಡಿಕೊಂಡು ಅವರು ಹೇಳಿಸರಬಹುದು ಎಂದಿದ್ದಾರೆ.
ಸಿಬಿಐ ತನಿಖೆಗೆ ಕೊಟ್ರೆ ಕಾಂಗ್ರೆಸ್ ನವರು ಸಿಕ್ಕಾಕಿಕೊಳ್ತಾರೆ ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರದಲ್ಲಿ ಅವರ ಸರ್ಕಾರ ಇದೆ. ಸಿಬಿಐಗೆ ಕೊಡ್ಲಿ ಎಂದಷ್ಟೇ ಹೇಳಿದ್ದಾರೆ.
ಅಭಿವೃದ್ಧಿಯೇ ನಮ್ಮ ತಾಯಿ, ಗ್ಯಾರಂಟಿಯೇ ನಮ್ಮ ಬಂಧು ಬಳಗ: ಡಿ.ಕೆ. ಶಿವಕುಮಾರ್
ರೋಣ ಮತ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಬಳಿಕ ಭಾಷಣ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಭಿವೃದ್ಧಿಯೇ ನಮ್ಮ ತಾಯಿ, ಗ್ಯಾರಂಟಿಯೇ ನಮ್ಮ ಬಂಧು ಬಳಗ. ಅಭಿವೃದ್ಧಿ ಕಡೆಗೆ ಸರ್ಕಾರವನ್ನ ಕೊಡೊಯ್ಯಲಾಗ್ತಿದೆ. 138 ಆಫೀಷಿಯಲ್ ನಂಬರ್, ಇಬ್ಬರು ಪಕ್ಷೇತರರು ನಮ್ಮ ಬಳಿ ಇದ್ದಾರೆ. ಇನ್ನುಳಿದಂತೆ ಅನೇಕರು ನಮ್ಮ ಜೊತೆಗಿದ್ದಾರೆ. ಆ ಮಾತು ಬೇರೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ: ಸಿಎಂ ಸಿದ್ದರಾಮಯ್ಯ
ಅನ್ನಭಾಗ್ಯದಲ್ಲಿ ದಾಸೋಹವನ್ನ ಸರ್ಕಾರ ಕಂಡಿದೆ. 350 ಕೋಟಿ ಟಿಕೆಟ್ ಕೊಡುವ ಮೂಲಕ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಶಕ್ತಿ ಯೋಜನೆ, ಗೃಹ ಜ್ಯೋತಿ ಮೂಲಕ ಜನರ ಬದುಕು ಬದಲಾವಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತೇವೆ. ಮಹದಾಯಿ ಟೆಂಡರ್ ಕರೆದಿದ್ದೇವೆ. ಆದಷ್ಟು ಬೇಗ ಮಹದಾಯಿ ಯೋಜನೆ ಬರುತ್ತದೆ. ಕೇಂದ್ರ ಅರಣ್ಯ ಇಲಾಖೆಯ ಕ್ಲಿಯರನ್ಸ್ ಸಿಕ್ಕ ಕೂಡ್ಲೆ ಕೆಲಸ ಆರಂಭ ಆಗುತ್ತೆ. ಈ ಭಾಗರದ ಜನರ ಪರವಾಗಿ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅನ್ವರ್ ಮಾಣಿಪ್ಪಾಡಿ ವಿಡಿಯೋ ಹೇಳಿಕೆ ಕುರಿತು ಡಿಬೇಟ್ ನಡೆಯಲಿ. 150 ಕೋಟಿ ವಿಚಾರವನ್ನು ನಾವು ಹೇಳಿಲ್ಲ. ಮಾಣಿಪ್ಪಾಡಿ ಅವರೇ ವಿಡಿಯೋ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ಚರ್ಚೆಯಾಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.