ವಿದ್ಯುತ್ ಕದ್ದವರಿಗೆ ನೈತಿಕತೆ ಇದೆಯೇ?: ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ
ಕುಮಾರಸ್ವಾಮಿಗೆ ನನ್ನ ಬಗ್ಗೆ ದ್ವೇಷ, ಅಸೂಯೆ ಇದೆ. ಹಾಗಾಗಿ ನನ್ನ ಬಗ್ಗೆ ಸುಖಾಸುಮ್ಮನೆ ಮಾತನಾಡುತ್ತಿದ್ದಾರೆ. ಯತೀಂದ್ರ ಬಗ್ಗೆ ಆರೋಪ ಮಾಡುವವರ ಬಳಿ ದಾಖಲೆ ಇದೆಯೇ? ಅವರೇನು ದುಡ್ಡು ಕದ್ದಿದ್ದಾರಾ? ಯತೀಂದ್ರ ದುಡ್ಡಿನ ವ್ಯವಹಾರ ಮಾಡಿದ್ದಾರಾ? ಅವರು ಸಿಎಸ್ಆರ್ ಫಂಡ್ ಬಗ್ಗೆ ಮಾತನಾಡಿದ್ದಾರೆ. ಹಿಂದೆ ಕುಮಾರಸ್ವಾಮಿ ಅವರೇ ವರ್ಗಾವಣೆ ದಂಧೆ ಮಾಡಿದ್ದು ಇಡೀ ಜಗತ್ತಿಗೆ ಗೊತ್ತಿದೆ: ಸಿಎಂ ಸಿದ್ದರಾಮಯ್ಯ

ಕೊಪ್ಪಳ(ನ.21): ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರು ವಿದ್ಯುತ್ ಕದ್ದು ದಂಡ ಕಟ್ಟಿದವರು. ನಮ್ಮ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ತಾಲೂಕಿನ ಬಸಾಪುರ ಬಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ನನ್ನ ಬಗ್ಗೆ ದ್ವೇಷ, ಅಸೂಯೆ ಇದೆ. ಹಾಗಾಗಿ ನನ್ನ ಬಗ್ಗೆ ಸುಖಾಸುಮ್ಮನೆ ಮಾತನಾಡುತ್ತಿದ್ದಾರೆ. ಯತೀಂದ್ರ ಬಗ್ಗೆ ಆರೋಪ ಮಾಡುವವರ ಬಳಿ ದಾಖಲೆ ಇದೆಯೇ? ಅವರೇನು ದುಡ್ಡು ಕದ್ದಿದ್ದಾರಾ? ಯತೀಂದ್ರ ದುಡ್ಡಿನ ವ್ಯವಹಾರ ಮಾಡಿದ್ದಾರಾ? ಅವರು ಸಿಎಸ್ಆರ್ ಫಂಡ್ ಬಗ್ಗೆ ಮಾತನಾಡಿದ್ದಾರೆ. ಹಿಂದೆ ಕುಮಾರಸ್ವಾಮಿ ಅವರೇ ವರ್ಗಾವಣೆ ದಂಧೆ ಮಾಡಿದ್ದು ಇಡೀ ಜಗತ್ತಿಗೆ ಗೊತ್ತಿದೆ ಎಂದರು.
ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ: ಒಬ್ಬಳನ್ನು ಒಬ್ಬನೇ ವ್ಯಕ್ತಿ ರೇಪ್ ಮಾಡೋಕೆ ಅಸಾಧ್ಯವೆಂದ ಮಾಜಿ ಶಾಸಕ ಬಯ್ಯಾಪುರ
ಗ್ಯಾರಂಟಿ ಮಾದರಿ ಅನುಸರಿಸುವ ಮೋದಿ:
ಪ್ರಧಾನಿ ನರೇಂದ್ರ ಮೋದಿ ಎಂದೂ ನುಡಿದಂತೆ ನಡೆದುಕೊಂಡಿಲ್ಲ. ಗ್ಯಾರಂಟಿಗಳನ್ನು ಟೀಕಿಸುತ್ತಾ ಬಂದಿದ್ದಾರೆ. ಸದ್ಯ ನಮ್ಮ ಮಾದರಿಯಲ್ಲಿ ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ. ಗ್ಯಾರಂಟಿಗಳನ್ನುಯಾರು ವಿರೋಧ ಮಾಡಿದ್ದರೋ ಈಗ ಅವರೇ ಇಂದು ಗ್ಯಾರಂಟಿ ಮಾದರಿ ಅನುಸರಿಸುತ್ತಿದ್ದಾರೆ. ಈ ದೇಶದ ಪ್ರಧಾನಿ ಅವರೇ ಗ್ಯಾರಂಟಿಗಳನ್ನು ನೀಡಲು ಹೊರಟಿದ್ದಾರೆ. ಬಿಜೆಪಿ ಸರ್ಕಾರ ಇರುವ ಕಡೆಗಳಲ್ಲೂ ಚುನಾವಣೆಯಲ್ಲಿ ಗ್ಯಾರಂಟಿ ಘೋಷಿಸುತ್ತಿದೆ. ಎಲ್ಲೆಲ್ಲಿ ಚುನಾವಣೆಗಳಿವೆಯೋ ಅಲ್ಲೆಲ್ಲ ಬಿಜೆಪಿ ಗ್ಯಾರಂಟಿ ಘೋಷಣೆ ಮಾಡುತ್ತಿದೆ ಎಂದರು.
ಮಧ್ಯಪ್ರದೇಶದಲ್ಲಿ ಬಹಳ ವರ್ಷದಿಂದ ಅಧಿಕಾರದಲ್ಲಿದ್ದಾಗ ಯಾವ ಗ್ಯಾರಂಟಿ ಯೋಜನೆಗಳನ್ನೂ ಘೋಷಿಸಿಲ್ಲ. ಚುನಾವಣೆ ಸಮೀಪಿಸುತ್ತಿದ್ದಾಗ ಇಂಥದೆಲ್ಲ ಮಾಡ್ತಿದಾರೆ ಎಂದರು. ಇತ್ತೀಚಿಗೆ ಶ್ರೀರಾಮುಲು ತಮ್ಮನ್ನು ಭೇಟಿಯಾದ ವಿಷಯ ಪ್ರಸ್ತಾಪಿಸಿದಾಗ ಅವರು, ತಮ್ಮ ಮಗಳ ಮದುವೆ ಕಾರ್ಡ್ ಕೊಡಲು ಬಂದಿದ್ದಾರೆ ಅಷ್ಟೇ ಎಂದರು.