Asianet Suvarna News Asianet Suvarna News

ಬಿಜೆಪಿಗರು ದೇಶಪ್ರೇಮಿಗಳಲ್ಲ, ದ್ವೇಷ ಪ್ರೇಮಿಗಳು: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಪಕ್ಷ ಸ್ವಾತಂತ್ರ್ಯ ತಂದು ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿಯವರಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿದ್ದಾಗ ಬಿಜೆಪಿಯ ಕಡೆಯವರು ಬ್ರಿಟಿಷರ ಜೊತೆ ಶಾಮೀಲಾಗಿದ್ದರು. ನಿಮಗೆ ಯಾವುದೇ ನೈತಿಕತೆ ಇಲ್ಲ. ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಿರಾ. ದಾಡಿ ಬಿಟ್ಟವರು, ಟೋಪಿ, ಬುರ್ಖಾ ಧರಿಸಿದವರನ್ನು ಬರಬೇಡಿ ಎನ್ನುತ್ತೀರಾ ಎಂದು ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

CM Siddaramaiah slams BJP Leaders grg
Author
First Published Mar 1, 2024, 5:19 AM IST

ಬೆಂಗಳೂರು(ಮಾ.01):  ಬಡವರ ವಿರೋಧಿಯಾಗಿರುವ ಬಿಜೆಪಿಯೇ ದೇಶದ್ರೋಹಿ, ಬಡವರ ದ್ರೋಹಿ ಮತ್ತು ಸಾಮಾಜಿಕ ನ್ಯಾಯದ ವಿರೋಧಿ ಪಕ್ಷ. ನೀವು ದೇಶ ಪ್ರೇಮಿಗಳಲ್ಲ. ದ್ವೇಷದ ಪ್ರೇಮಿಗಳು ಎಂದು ಬಿಜೆಪಿ ಸದಸ್ಯರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. 

ಗುರುವಾರ ವಿಧಾನ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಉತ್ತರ ನೀಡಲು ಮುಖ್ಯಮಂತ್ರಿಯವರು ಮುಂದಾದಾಗ, ಪಾಕ್ ಪರ ಘೋಷಣೆ ಘಟನೆಯ ಕುರಿತು ಉತ್ತರ ನೀಡಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಆರೋಪಿಗಳನ್ನು 48 ತಾಸುಗಳಾದರೂ ಬಂಧಿಸಿಲ್ಲ. ಸರ್ಕಾರವೇ ಪಾಕಿಸ್ತಾನದ ಪರವಾಗಿದ್ದು, ದೇಶದ್ರೋಹಿಗಳನ್ನು ರಕ್ಷಣೆ ಮಾಡುತ್ತಿದೆ. ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದು ಘೋಷಣೆ ಕೂಗಿದರು. ನಿಮ್ಮ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದ ಸಿದ್ದರಾಮಯ್ಯ ಅವರು, ಕೆಲ ನಿಮಿಷ ಬಜೆಟ್ ಬಗ್ಗೆ ಮಾತನಾಡಿದರು. ಬಿಜೆಪಿ ಸದಸ್ಯರು ಘೋಷಣೆ ಮುಂದುವರೆಸಿದ ಹಿನ್ನೆಲೆಯಲ್ಲಿ ವಾಗ್ದಾಳಿ ಆರಂಭಿಸಿದರು.

ಕೇಂದ್ರದ ಪರಿಸರ ಮಂಡಳಿ ಅನುಮತಿ ನೀಡಿದ್ರೆ ನಾಳೆಯಿಂದಲೇ ಕಳಸಾ ಬಂಡೂರಿ ಕಾಮಗಾರಿ ಆರಂಭ: ಸಿಎಂ ಸಿದ್ದು

ಕಾಂಗ್ರೆಸ್‌ ಪಕ್ಷ ಸ್ವಾತಂತ್ರ್ಯ ತಂದು ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿಯವರಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿದ್ದಾಗ ಬಿಜೆಪಿಯ ಕಡೆಯವರು ಬ್ರಿಟಿಷರ ಜೊತೆ ಶಾಮೀಲಾಗಿದ್ದರು. ನಿಮಗೆ ಯಾವುದೇ ನೈತಿಕತೆ ಇಲ್ಲ. ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಿರಾ. ದಾಡಿ ಬಿಟ್ಟವರು, ಟೋಪಿ, ಬುರ್ಖಾ ಧರಿಸಿದವರನ್ನು ಬರಬೇಡಿ ಎನ್ನುತ್ತೀರಾ ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.

ಸುಳ್ಳು ಹೇಳಲು ಇತಿ ಮಿತಿ ಇಲ್ಲ. ಸುಳ್ಳೇ ನಿಮ್ಮನೆ ದೇವ್ರು. ನಿಮಗೆ ಒಮ್ಮೆಯು ರಾಜ್ಯದ ಜನ ಆಶೀರ್ವಾದ ಮಾಡಿಲ್ಲ. ಅಡ್ಡದಾರಿಯಿಂದ ಸರ್ಕಾರ ರಚನೆ ಮಾಡಿದ್ದಿರಾ. ಇನ್ನು ಮುಂದೆಯು ನಿಮಗೆ ಇದೆ ಗತಿಯಾಗುತ್ತದೆ. ನಿಮ್ಮದು ಕಾಂಗ್ರೆಸ್ ಮುಕ್ತಗೊಳಿಸುವ ಕನಸಾದರೇ, ನಮ್ಮದು ರಾಜ್ಯವನ್ನು ಹಸಿವು ಮುಕ್ತ ಮಾಡುವ ಧ್ಯೇಯ ಎಂದು ಬಿಜೆಪಿ ಸದಸ್ಯರ ವಿರುದ್ಧ ಕಿಡಿ ಕಾರಿದರು.

ಗದ್ದಲದ ನಡುವೆ ವಿಧೇಯಕ ಅಂಗೀಕಾರ:

ವಿಧಾನ ಪರಿಷತ್ತಿನಲ್ಲಿ ಕಳೆದ ವಾರ ತಿರಸ್ಕೃತಗೊಂಡಿದ್ದ ಬಹು ಚರ್ಚಿತ ‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ತಿದ್ದುಪಡಿ ವಿಧೇಯಕ’ಕ್ಕೆ ಪರಿಷತ್ತಿನಲ್ಲಿ ಗುರುವಾರ ಅಂಗೀಕಾರ ದೊರಕಿದೆ.

ಸೋಲಾಗಿದ್ದ ಹಿನ್ನೆಲೆಯಲ್ಲಿ ಎರಡನೇ ಬಾರಿ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿದ್ದ ಸಚಿವ ರಾಮಲಿಂಗಾರೆಡ್ಡಿಯವರು, ಪರಿಷತ್ತಿನಲ್ಲೂ ಮಂಡಿಸಿದರು. ಈ ವೇಳೆ ವಿರೋಧ ಪಕ್ಷಗಳಿಗಿಂತ ಆಡಳಿತ ಪಕ್ಷದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪಾಕ್ ಪರ ಘೋಷಣೆ ವಿಚಾರವಾಗಿ ಬಿಜೆಪಿ ಸದಸ್ಯರ ಗದ್ದಲದ ನಡುವೆ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳಲಾಯಿತು. ಇದೇ ವೇಳೆ ’ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕ’, ಮತ್ತು ‘ಹಣಕಾಸು ವಿಧೇಯಕ’ಕ್ಕೂ ಅಂಗೀಕಾರ ಪಡೆಯಲಾಯಿತು.

Follow Us:
Download App:
  • android
  • ios