Asianet Suvarna News Asianet Suvarna News

ಸ್ವಾಮೀಜಿಗಳನ್ನು ತಯಾರಿ ಮಾಡುವ ಜವಾಬ್ದಾರಿ ವಿಶ್ವನಾಥ್‌ಗೆ ಕೊಟ್ಟೆ: ಸಿಎಂ ಸಿದ್ದರಾಮಯ್ಯ

ಸ್ವಾಮೀಜಿಗಳನ್ನು ತಯಾರಿ ಮಾಡುವ ಜವಾಬ್ದಾರಿ ವಿಶ್ವನಾಥ್ ಗೆ ಕೊಟ್ಟೆ, ಸ್ವಾಮೀಜಿಗೆ ಹೆಸರಿಟ್ಟಿದ್ದೆ ವಿಶ್ವನಾಥ್ ಎಂದು ಸಿಎಂ  ಹೇಳಿಕೆ ನೀಡಿದ್ದಾರೆ.

CM siddaramaiah says we will collect Karnataka Caste census gow
Author
First Published Jul 2, 2023, 2:43 PM IST | Last Updated Jul 2, 2023, 2:43 PM IST


ಬೆಂಗಳೂರು (ಜು.2): ಬೆಂಗಳೂರು ದಕ್ಷಿಣ ತಾಲೂಕಿನ ಕೇತೋಹಳ್ಳಿಯಲ್ಲಿ  ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಬೆಂಗಳೂರು ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸ್ವಾಮೀಜಿಗಳನ್ನು ತಯಾರಿ ಮಾಡುವ ಜವಾಬ್ದಾರಿ ವಿಶ್ವನಾಥ್ ಗೆ ಕೊಟ್ಟೆ, ಸ್ವಾಮೀಜಿಗೆ ಹೆಸರಿಟ್ಟಿದ್ದೆ ವಿಶ್ವನಾಥ್ ಎಂದು ಹೇಳಿಕೆ ನೀಡಿದ್ದಾರೆ. ಕಾರ್ಯ ಕ್ರಮದಲ್ಲಿ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪ, ಬಂಡೆಪ್ಪ ಕಾಶಂಪುರ, ಆರ್.ಶಂಕರ್,  ಎಂ.ಕೃಷ್ಣಪ್ಪ, ಸುರೇಶ್ ಬಾಬು, ವಿಧಾನಪರಿಷತ್ ಹೆಚ್ ವಿಶ್ವನಾಥ್ ಉಪಸ್ಥಿತಿ ಇದ್ದರು.

1988ರಲ್ಲಿ  ಎಸ್ ಆರ್ ಬೊಮ್ಮಾಯಿ ಸರ್ಕಾರ ಇತ್ತು. ನಾನು ಸಾರಿಗೆ ಸಚಿವ ಆಗಿದ್ದೆ. ಆಗ ಕನಕದಾಸರ 500ನೇ ಜಯಂತೋತ್ಸವವನ್ನ ಎಲ್ಲಾ ಜಿಲ್ಲೆಗಳಲ್ಲಿ ಮಾಡಿದ್ದೆವು. ಎಲ್ಲಾ ಜಿಲ್ಲೆಗಳ ಜಯಂತೋತ್ಸವದಲ್ಲಿ ನಾನು ಭಾಗಿಯಾಗಿದ್ದೆ. ಪೀಠ ಮಾಡುವುದರಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ ಎಂಬ ನಿರ್ಧಾರಕ್ಕೆ ಬರಲಾಯಿತು. 1989ರಲ್ಲಿ ನಾನೂ ಸೋತಿದ್ದೆ, ನನಗೂ ಕೆಲಸ ಇರಲಿಲ್ಲ. ಎಲ್ಲಾ ಜಿಲ್ಲೆಗಳಿಗೂ ಹೋಗಬೇಕು ಎಂಬ ತೀರ್ಮಾನ ಮಾಡಲಾಯಿತು. ನನ್ನದೊಂದು ಹಳೇ ಅಂಬಾಸಿಡರ್ ಕಾರ್ ಇತ್ತು 777 ಆ ಕಾರಿನಲ್ಲಿ ಎಲ್ಲಾ ಜಿಲ್ಲೆಗಳು ಹೋಗಿದ್ದೆ. ಆ ಪೀಠಕ್ಕೆ ಹೆಚ್ ವಿಶ್ವನಾಥ್ ರನ್ನ ಅಧ್ಯಕ್ಷರನ್ನಾಗಿ ಮಾಡಿದ್ವಿ. ಅವರು ಆಗ ಕಾಂಗ್ರೆಸ್ ನಲ್ಲಿದ್ರು ನಾನು ದಳದಲ್ಲಿದ್ದೆ. ವಿಶ್ವನಾಥ್ ಆಗ ತುಂಬಾ ಬ್ಯುಸಿ ಮನುಷ್ಯ ಎಂದು ಕನಕ ಪೀಠ ರಚನೆಯಾದ ಬಗ್ಗೆ ಸವಿಸ್ತಾರವಾಗಿ  ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ, ಹೈಕಮಾಂಡ್ ಬುಲಾವ್ ದೆಹಲಿಗೆ ಹೊರಟ ಬಿಎಸ್‌ವೈ

ಸ್ವಾಮೀಜಿಗಳನ್ನು ತಯಾರಿ ಮಾಡುವ ಜವಾಬ್ದಾರಿ ವಿಶ್ವನಾಥ್ ಗೆ ಕೊಟ್ಟೆ, ಸ್ವಾಮೀಜಿಗೆ ಹೆಸರಿಟ್ಟಿದ್ದೆ ವಿಶ್ವನಾಥ್. ಬಂಗಾರಪ್ಪ ಸಿಎಂ‌ ಆಗಿದ್ರು, ಬಂಗಾರಪ್ಪ ದುಡ್ಡು ಕೊಡೋಕೆ ಬಂದ್ರು. ಬಂಗಾರಪ್ಪ ಅವರ ದುಡ್ಡು ತೆಗೆದುಕೊಳ್ಳಲ್ಲ, ಕಾರ್ಯಕ್ರಮಕ್ಕೆ ಆಹ್ವಾ‌ನ ಮಾತ್ರ ಕೊಟ್ವಿ. ಹರಿ ಕೋಡೆ ಊಟ ಹಾಕಿಸ್ತೇವೆ ಅಂದ್ರು, ನಾವು ಹೇಳಿದ್ವಿ ಊಟ ಹಾಕಿಸೋದು ಬೇಡ  ಅಂತ 1992 ರಲ್ಲಿ ಕನಕ ಗುರುಪೀಠ ಸ್ಥಾಪನೆ ಆಯ್ತು. ಕೇಂದ್ರ ಸಚಿವರಾಗಿದ್ದ ಶರದ್ ಪವಾರ್ ಬಂದಿದ್ರು, ಬಂಗಾರಪ್ಪ ಬಂದಿದ್ರು. ವಿಶ್ವನಾಥ್ ಪ್ರಾಸ್ತಾವಿಕ ಭಾಷಣ ಮಾಡಿದ್ರು, ಭಾರೀ ಭಾಷಣ ಮಾಡಿದ್ರು. ಇದು ಎಲ್ಲರಿಗೂ ಗೊತ್ತಿರಲಿ ಎಂದು ಇತಿಹಾಸ ಹೇಳುತ್ತಿದ್ದೇನೆ. ರಾಜ್ಯದ ಎಲ್ಲ ಭಾಗಗಳಿಂದ ಐದು ಲಕ್ಷ ಜನರು ಸೇರಿದ್ರು. ಅವತ್ತು ಕನಕಗುರುಪೀಠ ಸ್ಥಾಪನೆ ಆಯ್ತು. ಅವತ್ತು ಹೆಚ್  ವಿಶ್ವನಾಥ್ ಒಂದು ಮಾತು ಹೇಳಿದ್ರು ಈ ಮಠ ಕೇವಲ ಕುರುಬರ ಮಠ ಅಲ್ಲ ಎಲ್ಲಾ ಶೋಶಿತರ ವರ್ಗದವರ ಮಠ ಎಂದು ಹೇಳಿದ್ದರು ಎಂದು ಸಿದ್ಧರಾಮಯ್ಯ ಮೆಲುಕು ಹಾಕಿದ್ದಾರೆ.

ಜಾತಿ ಗಣತಿ ವರದಿ ಪಡದೇ ಪಡೆಯುತ್ತೇವೆ. ಸ್ವಲ್ಪ ಟೆಕ್ನಿಕಲ್ ಸಮಸ್ಯೆ ಇದೆ. ಆದ್ರೆ ನಾವು ಜಾತಿಗಣತಿ ವರದಿ ಪಡದೇ ಪಡೆಯುತ್ತೇವೆ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿಗಣತಿ ಗೆ ಆದೇಶ ಮಾಡಿದ್ದೆ. ನಮ್ಮ ಅವಧಿಯಲ್ಲಿ ಜಾತಿಗಣತಿ ಪೂರ್ಣಗೊಂಡಿರಲಿಲ್ಲ. ನಾವೇ ಆದೇಶ ಕೊಟ್ಟು ನಾವೇ ತಗೆದುಕೊಂಡಿರಿಲ್ಲ ಅಂದ್ರೆ ಹೇಗೆ. ಆದ್ರೆ ನಮ್ಮ ಅವಧಿಯಲ್ಲಿ ಅದು ಪೂರ್ಣಗೊಂಡಿರಲಿಲ್ಲ. ಸುಮ್ಮನೆ ಲೀಕ್ ಆಗಿದೆ ಅದು ಇದು ಅಂತ ಹೇಳಿದ್ರು. ಸೆಕ್ರೆಟರಿ ಸೈನ್ ಆಗಿಲ್ಲ ಅಂತ ಏನೋ ಹೇಳ್ತಿದ್ದಾರೆ. ನೋಡೋಣ ಏನ್ ಟೆಕ್ನಿಕಲ್ ಸಮಸ್ಯೆ ಅಂತ. ಆದ್ರೆ‌ ನಾವು ಕಂಡಿತ ಜಾತಿಗಣತಿ ವರದಿ ಪಡೆದೇ ಪಡೆದುಕೊಳ್ಳುತ್ತೇನೆ.

ಸಮಾಜ ಶೋಷಿತ ವರ್ಗದ ಬಗ್ಗೆ ವೈದ್ಯರಿಗೆ ಅಂತಃಕರಣ ಹೆಚ್ಚಾಗಬೇಕು: ವೈದ್ಯರ

ಕುರುಬ ಸಮಾಜ 7% ರಾಜ್ಯದಲ್ಲಿ ಇದೆ. ಸರಿ ಸುಮಾರು 49 ಲಕ್ಷದಷ್ಟು ಇದ್ದೇವೆ. ಇದೆ ಕಾರಣಕ್ಕೆ ಜಾತಿ ಗಣತಿ ಮಾಡಿಸಿದ್ದು. ಹಿಂದುಳಿದ ವರ್ಗಗಳು ಗೊತ್ತಾಗಲಿ ಅಂತ ಜಾತಿಗಣತಿ ಮಾಡಿಸಿದೆ. ಸ್ವಾತಂತ್ರ್ಯ ಬಂದ ಬಳಿಕ ನಾವೇ ಮೊದಲು ಜಾತಿಗಣತಿ‌ ಮಾಡಿಸಿದ್ದು. ಈಗ ಬಿಹಾರದ ಸರ್ಕಾರ ಜಾತಿಗಣಿತ ಮಾಡಿಸುತ್ತಿದೆ. ನನ್ನ ಕಾಲದಲ್ಲಿ ಜಾತಿ ಗಣತಿ ತಯಾರು ಆಗಿರಲಿಲ್ಲ. ಕುಮಾರಸ್ವಾಮಿ ಕಾಲದಲ್ಲಿ ಜಾತಿ ಗಣತಿ ತಯಾರಾಗಿತ್ತು.

ಪುಟ್ಟರಂಗಶೆಟ್ಟಿ ಮಂತ್ರಿ ಇದ್ದ ಅವನಿಗೆ ಹೇಳಿದ್ದೆ. ಆದ್ರೆ ಕುಮಾರಸ್ವಾಮಿ ತೆಗೆದುಕೊಳ್ಳಬೇಡ ಅಂದ್ರು. ಬಂಡೆಪ್ಪ ನಿಮಗೂ ಗೊತ್ತಿರಲಿ ಇದು. ನಾನು ಜಾತಿಗಣತಿ ತೆಗೆದುಕೊಂಡ್ಡೆ ತಿರ್ತೇನೆ. ಸ್ವಲ್ಪ ಟೆಕ್ನಿಕಲ್ ಪ್ರಾಬ್ಲಂ ಇದೆ. ಅದನ್ನು ಸರಿಪಡಿಸಿ, ಕಾನೂನು ಪ್ರಕಾರ ವರದಿ ಸ್ವೀಕಾರ ಮಾಡುತ್ತೇನೆ. ಸಾಮಾಜೀಕ ನ್ಯಾಯ ಕೊಡಬೇಕಾದ್ರೆ ಜಾತಿ ಗಣತಿ ಅತ್ಯಂತ ಅವಶ್ಯಕ. ಜನರ ಆಶೀರ್ವಾದದಿಂದ ಎರಡನೇ ಬಾರಿಗೆ ಸಿಎಂ ಆಗಿದ್ದೇನೆ. ಐದು ಗ್ಯಾರಂಟಿ ಮತ್ತು ಬೇರೆ ಭರವಸೆ ಕೊಟ್ಟಿದ್ದೇವೆ. ಯಾರೇ ಏನೆ ಅಂದುಕೊಡ್ರು ಐದು ಗ್ಯಾರಂಟಿ ಈಡೇರಿಸುತ್ತೇವೆ. ಇದೆ ಬಜೆಟ್ ನಲ್ಲಿ ಮತ್ತೆ ಘೋಷಣೆ ಮಾಡುತ್ತೇನೆ. ಒಟ್ಟು 58 ಸಾವಿರ ಕೋಟಿ ಗ್ಯಾರಂಟಿಗಳಿಗೆ ಖರ್ಚಾಗುತ್ತೆ. ಎಂಟು ತಿಂಗಳಿಗೆ 35 ಸಾವಿರ ಕೋಟಿ‌ ಖರ್ಚಾಗುತ್ತೆ. ಈಗ 35 ಸಾವಿರ ಕೋಟಿ ಹೊಂದಿಸಬೇಕು. ಬೇರೆಯವರು ಟೀಕೆ ಮಾಡ್ತಾರೆ ಪಾಪ. ಮಾಡಿಕೊಳ್ಳಲಿ ಎಂದು ಈಶ್ವರಪ್ಪ ಮುಖ ನೋಡಿ ನಕ್ಕ ಸಿಎಂ ಸಿದ್ದರಾಮಯ್ಯ.

Latest Videos
Follow Us:
Download App:
  • android
  • ios