Asianet Suvarna News Asianet Suvarna News

ಕಾಂಗ್ರೆಸ್‌ 5 ಗ್ಯಾರಂಟಿ ಈಡೇರಿಕೆಗೆ, ಸಾಲದ ಬಡ್ಡಿಗಿಂತ ಕಡಿಮೆ ಹಣ ಸಾಕು: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಲು 50 ಸಾವಿರ ಕೋಟಿ ರೂ. ಹಣ ಸಾಕಾಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

CM Siddaramaiah said that 50000 crores Rs is enough to fulfill 5 guarantees of Congress sat
Author
First Published May 20, 2023, 8:19 PM IST

ಬೆಂಗಳೂರು (ಮೇ 20): ರಾಜ್ಯದಲ್ಲಿ ಕಾಂಗ್ರೆಸ್‌ ಕೊಟ್ಟ 5 ವಾಗ್ದಾನದ ಗ್ಯಾರಂಟಿಗಳನ್ನು ಈಡೇರಿಸಬೇಕಾದರೆ ತತಕ್ಷಣದ ಲೆಕ್ಕಾಚಾರದಂತೆ 50 ಸಾವಿರ ಕೋಟಿ ರೂ. ಬೇಕಾಗಬಹುದು. ಆದರೆ, ರಾಜ್ಯದ ಸಾಲ 5.64 ಲಕ್ಷ ಕೋಟಿ ರೂ. ಇದ್ದು, ವಾರ್ಷಿಕ 56 ಸಾವಿರ ಕೋಟಿ ರೂ. ಅಸಲು, ಬಡ್ಡಿ ಮರುಪಾವತಿ ಮಾಡಬೇಕಿದೆ. ಸಾಲ ಮರುಪಾವತಿ ಹಣಕ್ಕಿಂತ 5 ಗ್ಯಾರಂಟಿ ಯೋಜನೆ ಈಡೇರಿಸಲು ಕಡಿಮೆ ಹಣ ಸಾಕಾಗುತ್ತದೆ. ಒಂದು ವೇಳೆ ಎಷ್ಟೇ ಹಣ ಖರ್ಚಾದರೂ ರಾಜ್ಯದ ಆರ್ಥಿಕತೆ ದಿವಾಳಿ ಮಾಡದೇ ಗ್ಯಾರಂಟಿ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಕರ್ನಾಟಕ ವಿಧಾನಸಭಾ ಚುನಾವಣೆಲ್ಲಿ 135 ಸ್ಥಾನಗಳನ್ನು ಪಡೆದು ಒಂದು ವಾರದ ನಂತರ ಸರ್ಕಾರ ರಚನೆ ಮಾಡಿ ಶನಿವಾರ ಪ್ರಮಾಣವಚನ ಸ್ವೀಕಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ 8 ಜನ ಕ್ಯಾನಿಬೆಟ್‌ ಸಚಿವರು ಮೊದಲ ಸಂಪುಟ ಸಭೆ ನಡೆಸಿದರು. ನಂತರ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಸಾಲ 5.64 ಲಕ್ಷ ಕೋಟಿ ರೂ. ಇದ್ದು ಇದಕ್ಕೆ 2023-24ನೇ ಸಾಲಿನಲ್ಲಿ ಒಟ್ಟು 56 ಸಾವಿರ ಕೋಟಿ ರೂ. ಅಸಲು ಮತ್ತು ಬಡ್ಡಿಯನ್ನು ಪಾವತಿ ಮಾಡಬೇಕಿದೆ. ಆದರೆ, ಕಾಂಗ್ರೆಸ್‌ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಲು 50 ಸಾವಿರಕೋಟಿ ರೂ. ಸಾಕು ಎಂದು ಮಾಹಿತಿ ನೀಡಿದರು.

ಮೊದಲ ಸಂಪುಟ ಸಭೆಯಲ್ಲೇ ಕಾಂಗ್ರೆಸ್‌ 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರ 158 ಭರವಸೆ ಈಡೇರಿಸಿತ್ತು: ನಮ್ಮ ಸರ್ಕಾರ ನುಡಿದಂತೆ ನಡೆಸ ಸರ್ಕಾರವಾಗಿದೆ. 2013ರಿಂದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಪ್ರಣಾಳಿಕೆಯಲ್ಲಿರದ 30 ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಹೇಳಿದ್ದೇವೆ. ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಪಶು ಭಾಗ್ಯ, ಸಾಲಮನ್ನಾದಂತಹ ಇತರೆ ಭರವೆಸಗಳನ್ನು ಜಾರಿಗೆ ತಂದಿದ್ದೆವು. ಜನರಿಗೆ ನಾವು ಕೊಟ್ಟ ಭರವಸೆಗಳನ್ನು ಈರೇಡಿಸುತ್ತೇವೆ ಎಂಬ ನಂಬಿಕೆಯಿದೆ. ಆದರೆ, ವಪಕ್ಷದವರು ರಾಜ್ಯ ಸಾಲಗಾರ ಆಗುತ್ತದೆ, ಗ್ಯಾರಂಟಿ ಈಡೇರಿಸಲು ಆಗಲ್ಲ ಎಂದು ಪ್ರಧಾನಮಂತ್ರಿ ಮನ್‌ಕಿ ಬಾತ್‌ನಲ್ಲಿ ಹೇಳಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ಸೇರಿ ಅನೇಕರು ಸುಳ್ಳು ಭರವಸೆಗಳು ಎಂದು ಹೇಳಿದ್ದರು. 

ರಾಜ್ಯದ ಬಜೆಟ್‌ ಗಾತ್ರ 3.10 ಲಕ್ಷ ಕೋಟಿ ರೂ.: ಪ್ರಸ್ತುತ ರಾಜ್ಯದ ಬಜೆಟ್‌ 3.10 ಲಕ್ಷ ಕೋಟಿ ರೂ. ಆಗುವ ಸಾಧ್ಯತೆಯಿದೆ. ಪ್ರತಿ ವರ್ಷ ಶೇ.10 ಕ್ಕಿಂತ ಹೆಚ್ಚು ಬಜೆಟ್‌ ಗಾತ್ರ ಹೆಚ್ಚಳವಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ತೆರಿಗೆ ಹೆಚ್ಚಳ ಮಾಡಲಿಕ್ಕೆ ಸಾಧ್ಯವಾಗದಿದ್ದರೂ ಟಾರ್ಗೆಟ್‌ ಹೆಚ್ಚಳ ಮಾಡಿಕೊಳ್ಳಬಹುದು. ಜಿಎಸ್‌ಟಿ ನಮಗೆ ಏನೂ ಬಿಟ್ಟಿಲ್ಲ. ನಮಗೆ ಪೆಟ್ರೋಲ್‌, ಡೀಸೆಲ್‌, ಅಬಕಾರಿ, ಸಾರಿಗೆ, ಸ್ಟಾಂಪ್ಸ್‌ ಮತ್ತು ನೋಂದಣಿ ರಾಜ್ಯಕ್ಕೆ ಬರುವ ಆದಾಯವಾಗಿದೆ. ಕೇಂದ್ರದಿಂದ 15ನೇ ಹಣಕಾಸು ಆಯೋಗದ ಮೂಲಕ ಈ ವರ್ಷ 50 ಸಾವಿರ ಕೋಟಿ ರೂ. ಬರುತ್ತದೆ. ಇದರಲ್ಲಿ ನಮ್ಮ ತೆರಿಗೆ ಪಾಲು, 13 ಸಾವಿರ ಕೋಟಿ ಕೇಂದ್ರ ಸರ್ಕಾರದ ಸಹಾಯಧನ ಸೇರಿ ಎರಡೂ ಸೇರಿ 50 ಸಾವಿರ ಕೋಟಿ ರೂ. ಬರುತ್ತದೆ. ಆದರೆ, ನಮ್ಮ ರಾಜ್ಯಕ್ಕೆ 1 ಲಕ್ಷ ಕೋಟಿ ರೂ. ದಾಟಬೇಕಿತ್ತು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ. 

ಕೇಂದ್ರದಿಂದ ರಾಜ್ಯಕ್ಕೆ ಭಾರಿ ಅನ್ಯಾಯ: ಕರ್ನಾಟಕದಿಂದ 4 ಲಕ್ಷ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಹಣವನ್ನು ಕಟ್ಟುತ್ತೇವೆ. ಇದರಲ್ಲಿ ಜಿಎಸ್‌ಟಿ, ಸರ್‌ಚಾರ್ಜ್‌ ಸೇರಿದೆ. ಹಣಕಾಸು ಆಯೋಗದ ಪ್ರಕಾರ ಕರ್ನಾಟಕಕ್ಕೆ ಕೇಂದ್ರವು 5,495 ಕೋಟಿ ರೂ.ಗಳನ್ನು ಕೊಡಬೇಕಿದೆ. ಆದರೆ, ರಾಜ್ಯ ಸರ್ಕಾರ ಆ ಹಣವನ್ನು ತೆಗೆದುಕೊಳ್ಳಲೇ ಇಲ್ಲ. ಆದರೆ, ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆಯ ವೇಳೆ ಕರ್ನಾಟಕ್ಕೆ ಕೊಡಬೇಕಾದ ಹಣವನ್ನು ಘೋಷಣೆ ಮಾಡಲೇ ಇಲ್ಲ. ಅವರು ಕರ್ನಾಟಕದ ರಾಜ್ಯಸಭಾ ಸದಸ್ಯರು ಆಗಿದ್ದರೂ ರಾಜ್ಯಕ್ಕೆ ಮೋಸ ಮಾಡಿದ್ದಾರೆ. ಕೇಂದ್ರ ಮಂತ್ರಿಗಳು, 25 ಸಂಸದರು, ಜಿಎಸ್‌ಟಿ ಕೌನ್ಸಿಲ್‌ ಚೇರ್ಮನ್‌ ಆಗಿದ್ದರೂ ಹಣವನ್ನು ಕೇಳಲಿಲ್ಲ ಎಂದು ಹೇಳಿದರು.

ಇಂಗ್ಲೀಷ್‌ನಲ್ಲಿ ಜಮೀರ್‌ ಪ್ರಮಾಣವಚನ: 18 ವರ್ಷವಾದ್ರೂ ಕನ್ನಡ ಕಲಿಯದ ಸಚಿವನಿಗೆ ಕರವೇ ತರಾಟೆ

ಬಿಜೆಪಿ ಸರ್ಕಾರ 3 ಲಕ್ಷ ಕೋಟಿ ರೂ. ಸಾಲ ಮಾಡಿದೆ:  ದೇಶದಲ್ಲಿ ಮನಮೋಹನ್‌ ಸಿಂಗ್‌ ಅವರು ಅಧಿಕಾರದಿಂದ ಕೆಳಗಿಳಿಯುವ ವೇಳೆ 53,11 ಸಾವಿರ ಕೋಟಿ ರೂ. ಸಾಲವಿತ್ತು. ಆದರೆ, ಈಗ 115 ಲಕ್ಷ ಕೋಟಿ ರೂ. ದೇಶದ ಮೇಲೆ ಸಾಲವಿದೆ. ನರೇಂದ್ರ ಮೋದಿ ಅವರು ಕೇವಲ 9 ವರ್ಷಗಳಲ್ಲಿ ಮಾಡಿದ ಸಾಲ 102 ಲಕ್ಷ ಕೋಟಿ ರೂ. ಆಗಿದೆ. ರಾಜ್ಯದಲ್ಲಿ ನಾನು ಸಿಎಂ ಆದಾಗ 2 ಲಕ್ಷ ಕೋಟಿ ರೂ. ಸಾಲವಿತ್ತು. ಈಗ 5.64 ಲಕ್ಷ ಕೋಟಿ ರಾಜ್ಯದ ಮೇಲೆ ಸಾಲವಿದೆ. ನಾನು 5 ವರ್ಷದಲ್ಲಿ 1.16 ಲಕ್ಷ ಕೋಟಿ ರೂ. ಸಾಲವನ್ನು ಮಾಡಿದ್ದೆನು. ಆದರೆ, ಕಳೆದ 4 ವರ್ಷದಲ್ಲಿ ಬಿಜೆಪಿ ಸರ್ಕಾರ 3 ಲಕ್ಷ ಕೋಟಿ ರೂ. ಸಾಲವನ್ನು ಮಾಡಿದೆ ಎಂದು ಹೇಳಿದರು. 

Follow Us:
Download App:
  • android
  • ios