ಯಡಿಯೂರಪ್ಪ ಏಕೆ ಆರ್ಥಿಕ ತಜ್ಞರನ್ನು ನೇಮಿಸಿಕೊಂಡಿದ್ದರು: ಎಚ್‌ಡಿಕೆಗೆ ಸಿದ್ದು ಪ್ರಶ್ನೆ
ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಆರ್ಥಿಕ ಸಲಹೆಗಾರರು ಇರಲಿಲ್ವಾ? ಯಡಿಯೂರಪ್ಪ ಆರ್ಥಿಕವಾಗಿ ಜಗತ್ಪ್ರಸಿದ್ಧರಾಗಿದ್ರಾ? ಹಾಗಿದ್ದರೆ ಅವರು ಏಕೆ ನೇಮಕ ಮಾಡಿಕೊಂಡಿದ್ದರು? ಎಂದು ಮರುಪ್ರಶ್ನೆಯಿತ್ತ ಸಿಎಂ ಸಿದ್ದರಾಮಯ್ಯ
ಕೊಪ್ಪಳ(ಡಿ.31): 14 ಬಜೆಟ್ ಮಂಡಿಸಿದ ಸಿಎಂಗೆ ಆರ್ಥಿಕ ಸಲಹೆಗಾರರು ಬೇಕಾ? ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆಗೆ, ಶಾಸಕ ಬಸವರಾಜ ರಾಯರಡ್ಡಿ, ಬಿ.ಆರ್. ಪಾಟೀಲ್, ಆರ್.ವಿ.ದೇಶಪಾಂಡೆ ಅವರಿಗೆ ಸಚಿವ ಸಂಪುಟ ದರ್ಜೆ ನೀಡಿರುವುದರಲ್ಲಿ ತಪ್ಪೇನು? ಅವರೆಲ್ಲರೂ ಹಿರಿಯರು, ಅನುಭವಿಗಳು. ಅಲ್ಲದೆ, ರಾಯರಡ್ಡಿ ಆರ್ಥಿಕವಾಗಿ ಹೆಚ್ಚು ತಿಳಿದವರು, ಅವರಿಗೆ ಹುದ್ದೆ ಕೊಟ್ಟರೆ ತಪ್ಪೇನು? ಈ ವಿಷಯದಲ್ಲಿ ಕುಮಾರಸ್ವಾಮಿ ಪ್ರಶ್ನೆಗೆ ಉತ್ತರಿಸುವ ಅವಶ್ಯಕತೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಆರ್ಥಿಕ ಸಲಹೆಗಾರರು ಇರಲಿಲ್ವಾ? ಯಡಿಯೂರಪ್ಪ ಆರ್ಥಿಕವಾಗಿ ಜಗತ್ಪ್ರಸಿದ್ಧರಾಗಿದ್ರಾ? ಹಾಗಿದ್ದರೆ ಅವರು ಏಕೆ ನೇಮಕ ಮಾಡಿಕೊಂಡಿದ್ದರು? ಎಂದು ಮರುಪ್ರಶ್ನೆಯಿತ್ತರು.
ನಮ್ಮದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್: ಸಿಎಂ ಸಿದ್ದರಾಮಯ್ಯ
ನಿಗಮ ಮಂಡಳಿ ಫೈನಲ್: ನಿಗಮ ಮಂಡಳಿಗೆ ನೇಮಕಾತಿಗೆ ಈಗಾಗಲೇ ಫೈನಲ್ ಮಾಡಲಾಗಿದೆ. ಹೈಕಮಾಂಡ್ ಅನುಮತಿಯೂ ದೊರೆತಿದೆ. ನಾನು, ಕೆಪಿಸಿಸಿ ಅಧ್ಯಕ್ಷರು ಮಾತನಾಡಿದ್ದೇವೆ, ಶೀಘ್ರ ಘೋಷಣೆ ಮಾಡಲಾಗುವುದು ಎಂದರು.
ಯತ್ನಾಳ್ ದಾಖಲೆ ನೀಡಲಿ:
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದವರ ವಿರುದ್ಧವೇ ಆರೋಪ ಮಾಡುತ್ತಾರೆಂದರೆ ಏನರ್ಥ? ಈಗ ನಮ್ಮ ಸರ್ಕಾರವಿದೆ. ಬಿಜೆಪಿ ಸರ್ಕಾರದಲ್ಲಿ ನಡೆದ ಕೋವಿಡ್ ಭ್ರಷ್ಟಾಚಾರ ಸೇರಿ 40% ಕಮೀಷನ್ ತನಿಖೆಗಾಗಿ ಆಯೋಗ ರಚನೆ ಮಾಡಿದೆ. ಯತ್ನಾಳ್ ಆ ಆಯೋಗಕ್ಕೆ ಮಾಹಿತಿ ನೀಡಲಿ ಎಂದರಲ್ಲದೆ ಎಂದವರು ಹೇಳಿದರು.