ಸಚಿವ ಸ್ಥಾನ ನೀಡಲು ಸಿಎಂ ಭರವಸೆ ನೀಡಿದ್ದಾರೆ: ಶಾಸಕ ಪುಟ್ಟರಂಗಶೆಟ್ಟಿ
ಸಿಎಂ ಸಿದ್ದರಾಮಯ್ಯ ‘ಜೂನ್‌ನಲ್ಲಿ ನಿನಗೆ ಮಂತ್ರಿ ಸ್ಥಾನ ಕೊಡ್ತೀನಯ್ಯ’ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೊದಲು ಉಪಸಭಾಪತಿ ಸ್ಥಾನ ಕೊಟ್ಟಿದ್ದರು. ಅದರೆ ನಾನೇ ಒಪ್ಪಲಿಲ್ಲ. ಆದರೆ ನನಗೆ ಮಂತ್ರಿ ಸ್ಥಾನ ಕೊಡೋದು ಬಿಡೋದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಬಿಟ್ಟ ವಿಚಾರ ವಾಗಿದ್ದು, ಬಲವಂತ ಮಾಡಲು ನಾನ್ಯಾರು?’ ಎಂದ ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ(ಅ.24): ಜೂನ್ ಒಳಗೆ ನನಗೆ ಮಂತ್ರಿ ಸ್ಥಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ‘ಜೂನ್‌ನಲ್ಲಿ ನಿನಗೆ ಮಂತ್ರಿ ಸ್ಥಾನ ಕೊಡ್ತೀನಯ್ಯ’ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೊದಲು ಉಪಸಭಾಪತಿ ಸ್ಥಾನ ಕೊಟ್ಟಿದ್ದರು. ಅದರೆ ನಾನೇ ಒಪ್ಪಲಿಲ್ಲ. ಆದರೆ ನನಗೆ ಮಂತ್ರಿ ಸ್ಥಾನ ಕೊಡೋದು ಬಿಡೋದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಬಿಟ್ಟ ವಿಚಾರ ವಾಗಿದ್ದು, ಬಲವಂತ ಮಾಡಲು ನಾನ್ಯಾರು?’ ಎಂದರು.
ನಮ್ಮದು ಪ್ರಪಂಚದಲ್ಲೇ ಮಾದರಿ ಸರ್ಕಾರ: ಸಚಿವ ಕೃಷ್ಣ ಬೈರೇಗೌಡ
ಸಿದ್ದು-ಡಿಕೆಶಿ ಒಂದೇ:
ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೆ ಗೊತ್ತಿದೆ. ಇನ್ನು ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರೂ ಎಲ್ಲಾ ಹಂತದಲ್ಲೂ ಒಗ್ಗಟ್ಟಾಗಿಯೇ ಹೋಗುತ್ತಿದ್ದಾರೆ. ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಒಟ್ಟಾಗಿಯೇ ಭಾಗವಹಿಸುತ್ತಿದ್ದಾರೆ. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂಬುದು ಕೇವಲ ವಿರೋಧ ಪಕ್ಷಗಳ ಆರೋಪವಷ್ಟೇ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.