ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಮೂಢನಂಬಿಕೆ ಜಿಲ್ಲೆಯ ಜನರಿಗೆ ಮಾಡುವ ಅವಮಾನ. ಯಾಕೆ ಚಾಮರಾಜನಗರದವರು ಮನುಷ್ಯರಲ್ವಾ ಎಂದು ಪ್ರಶ್ನಿಸಿದ ಸಿಎಂ, ‘ ನಾನು ಈ ಹಿಂದೆ ಚಾಮರಾಜನಗರಕ್ಕೆ 12 ಬಾರಿ ಬಂದಿದ್ದೇನೆ. ಚಾಮರಾಜನಗರಕ್ಕೆ ಬಂದಷ್ಟು ನನ್ನ ಖುರ್ಚಿ ಭದ್ರವಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಚಾಮರಾಜನಗರ (ಮಾ.13): ನಾನು ಈ ಹಿಂದೆ ಚಾಮರಾಜನಗರಕ್ಕೆ 12 ಬಾರಿ ಬಂದಿದ್ದೇನೆ. ಚಾಮರಾಜನಗರಕ್ಕೆ ಬಂದಷ್ಟು ನನ್ನ ಖುರ್ಚಿ ಭದ್ರವಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂದು ಎರಡನೇ ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಡಾ.ಅಂಬೇಡ್ಕರ್ ಮೈದಾನದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಜಯಪ್ರಕಾಶ್ ಹೆಗ್ಡೆ, ಇಬ್ಬರು ಬಿಜೆಪಿ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ!

ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಮೂಢನಂಬಿಕೆ ಜಿಲ್ಲೆಯ ಜನರಿಗೆ ಮಾಡುವ ಅವಮಾನ. ಯಾಕೆ ಚಾಮರಾಜನಗರದವರು ಮನುಷ್ಯರಲ್ವಾ ಎಂದು ಪ್ರಶ್ನಿಸಿದ ಸಿಎಂ, ‘ನಾನು ಈ ಹಿಂದೆ 12 ಬಾರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದೆ. ಈ ಭಾರಿ ಸರ್ಕಾರ ರಚನೆಯಾದ ಬಳಿಕ ಎರಡನೇ ಭಾರಿ ಬಂದಿದ್ದೇನೆ. ಇಲ್ಲಿಗೆ ಬಂದಷ್ಟು ನನ್ನ ಖುರ್ಚಿ ಭದ್ರವಾಗುತ್ತೆ ಎಂದರು.

ಚಾಮರಾಜನಗರ ಜಿಲ್ಲೆ ಒಂದು ಸಣ್ಣ ಜಿಲ್ಲೆ. ಆದರೆ, ಇಲ್ಲಿನ ಜನ ಬಹಳ ಶ್ರಮ ಜೀವಿಗಳು. ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆ ಬರಬೇಕೆಂಬ ತುಡಿತ ಇರುವ ಜನ. ಕಾಂಗ್ರೆಸ್ ಕೂಡ ರಾಜ್ಯದ ಅಸಮಾನತೆ ತೊಲಗಿಸಬೇಕು, ಸಮಾನತೆ ತರಬೇಕೆಂಬ ಆಸೆಯ ಹೊಂದಿದೆ. ಸಂವಿಧಾನದ ಆಶಯ ಕೂಡ ಅದೇ ಆಗಿದೆ ಎಂದರು.

ಕಾರ್ಯಕರ್ತರೇ ನನ್ನ ದೊಡ್ಡ ಶಕ್ತಿ: ಯದುವೀರ್ ಒಡೆಯರ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

ಸ್ವಾತಂತ್ರ ಬಂದು 70 ವರ್ಷ ಕಳೆದರೂ ಅಸಮಾನತೆ ತೊಲಗಿಸಲು ಆಗಿಲ್ಲ. ಈ ದೇಶದಲ್ಲಿ ಅಸಮಾನತೆ ಇದೆ ಎಂದರೇ ಅದಕ್ಕೆ ಮನುಸ್ಮೃತಿ, ಜಾತಿ ವ್ಯವಸ್ಥೆ ಕಾರಣ. ಬುದ್ದನ ಕಾಲದಿಂದಲೂ ಇವತ್ತಿನವರೆಗೂ ಪ್ರಯತ್ನ ನಡೆಯುತ್ತಿದೆ. ಆದರೆ ಸಮಾನತೆ ತರಲು‌ ಆಗಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಕೊಡಬೇಕೆಂಬುದು ನಮ್ಮ ಆಶಯ ಎಂದು ಸಿಎಂ ಹೇಳಿದರು.