Asianet Suvarna News Asianet Suvarna News

ತಾಳ್ಮೆ ಕಳಕೊಂಡ ಸಿಎಂ: ಭಾಷಣ ಅರ್ಧಕ್ಕೇ ಮೊಟಕು

ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಸದಸ್ಯರು ಪದೇ ಪದೇ ಮಾತನಾಡಲು ನಿಲ್ಲುತ್ತಿದ್ದರಿಂದ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿದ ಪ್ರಸಂಗ ನಡೆಯಿತು.

CM Siddaramaiah cut his speech in Vidhana Parishat grg
Author
First Published Feb 22, 2024, 4:34 AM IST

ವಿಧಾನ ಪರಿಷತ್‌(ಫೆ.22): ರಾಜ್ಯಪಾಲರ ಭಾಷಣದ ಮೇಲೆ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸುವ ವೇಳೆ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಸದಸ್ಯರು ಪದೇ ಪದೇ ಮಾತನಾಡಲು ನಿಲ್ಲುತ್ತಿದ್ದರಿಂದ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿದ ಪ್ರಸಂಗ ನಡೆಯಿತು.

ಬುಧವಾರ ಸುಮಾರು ಮೂರು ಗಂಟೆಗಳ ಕಾಲ ಉತ್ತರಿಸಿದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಆಗಿರುವ ಆರ್ಥಿಕ ಅನ್ಯಾಯ, ಈ ಕುರಿತು ದೆಹಲಿಯಲ್ಲಿ ಸರ್ಕಾರ ನಡೆಸಿದ ಪ್ರತಿಭಟನೆಗೆ ಪ್ರಧಾನಿ ಮೋದಿ ಅವರ ಹೇಳಿಕೆ ಉಲ್ಲೇಖ ಸೇರಿದಂತೆ ಹಲವು ವಿಷಯಗಳನ್ನು ಅಂಕಿ-ಅಂಶಗಳ ಸಹಿತ ವಿವರಿಸುತ್ತಿದ್ದರು. ಇದಕ್ಕೆ ಬಿಜೆಪಿ ಸದಸ್ಯರು ಅಡ್ಡಿಪಡಿಸಿದರು.

ವಿಧಾನ ಪರಿಷತ್‌ನಲ್ಲೂ ತೆರಿಗೆ ಲೆಕ್ಕ ಕೊಟ್ಟ ಸಿಎಂ ಸಿದ್ದುಗೆ, ಗುದ್ದು ಕೊಟ್ಟ ಮೇಲ್ಮನೆ ವಿಪಕ್ಷ ನಾಯಕರು

ಸಾಕಷ್ಟು ಬಾರಿ ಸಭಾಪತಿ ಬಸವರಾಜ ಹೊರಟ್ಟಿಯವರು ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಗಳು ಸಹ ತಮ್ಮ ಉತ್ತರ ಮುಗಿದ ಮೇಲೆ ಮಾತನಾಡಿ, ಎಲ್ಲದಕ್ಕೂ ವಿವರಣೆ ಕೊಡುತ್ತೇನೆ ಎನ್ನುತ್ತಾ ಉತ್ತರ ನೀಡಲಾರಂಭಿಸಿದರು. ಆದರೆ ಮತ್ತೆ ಬಿಜೆಪಿ ಸದಸ್ಯರು ವಿವರಣೆ, ಆಕ್ಷೇಪ ವ್ಯಕ್ತಪಡಿಸತೊಡಗಿದಾಗ, ನನ್ನ ಉತ್ತರ ಮುಗಿದಿದೆ. ಯಾವ ವಿವರಣೆ ಕೊಡುವುದಿಲ್ಲ ಎಂದು ಕುಳಿತುಕೊಂಡರು. ಮುಖ್ಯಮಂತ್ರಿಗಳು ಪೂರ್ಣ ಉತ್ತರ ನೀಡಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಘೋಷಣೆ ಕೂಗಿದರು.

Follow Us:
Download App:
  • android
  • ios