50 ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ತಲಾ 50 ಕೋಟಿ ರೂ. ಆಫರ್‌: ಸಿದ್ದರಾಮಯ್ಯ ಗರಂ!

ನಮ್ಮ ಶಾಸಕರಿಗೆ ತಲಾ 50 ಕೋಟಿ ರು. ಆಫರ್‌ ನೀಡುವ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತೆ? ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇನಾದರೂ ಅಷ್ಟು ಹಣವನ್ನು ಪ್ರಿಂಟ್ ಹಾಕಿದ್ರಾ? ಅದೆಲ್ಲ ರಾಜ್ಯವನ್ನು ಲೂಟಿ ಹೊಡೆದ ಹಣ ತಾನೇ?: ಮುಖ್ಯಮಂತ್ರಿ ಸಿದ್ದರಾಮಯ್ಯ 

CM Siddaramaiah angry on BJP has given 50 crores Offer each to 50 Congress MLAs grg

ಮೈಸೂರು(ನ.14):  ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿರು. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರವನ್ನು ಕೆಡವಲು ಯತ್ನಿಸಿತ್ತು. ಆದರೆ ಇವರ ಆಮಿಷಕ್ಕೆ ಯಾವುದೇ ಶಾಸಕರು ಬಲಿಯಾಗದಿದ್ದಾಗ ಇದೀಗ ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. 

ಜಿಲ್ಲಾಡಳಿತ ಮತ್ತು ಜಿ.ಪಂ. ವತಿಯಿಂದ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ 470 ಕೋಟಿ ರು. ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಮತ್ತು ಕಟ್ಟ ಡಗಳ ಲೋಕಾರ್ಪಣೆ ಮತ್ತು ಶಂಕು ಸ್ಥಾಪನೆ ನೆರವೇರಿಸಿ, ಫಲಾನುಭವಿಗಳಿಗೆ ನೇರವಾಗಿ ಸವಲತ್ತು ವಿತರಿಸಿ ಬುಧವಾರ ಮಾತನಾಡಿದರು. 

ಸಿದ್ದರಾಮಯ್ಯ ಶಕ್ತಿ ಎಂದು ಗುರುತಿಸಲು ದೇವೇಗೌಡರು ಕಾರಣ: ಸಾ.ರಾ. ಮಹೇಶ್

ನಮ್ಮ ಶಾಸಕರಿಗೆ ತಲಾ 50 ಕೋಟಿ ರು. ಆಫರ್‌ ನೀಡುವ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತೆ? ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇನಾದರೂ ಅಷ್ಟು ಹಣವನ್ನು ಪ್ರಿಂಟ್ ಹಾಕಿದ್ರಾ? ಅದೆಲ್ಲ ರಾಜ್ಯವನ್ನು ಲೂಟಿ ಹೊಡೆದ ಹಣ ತಾನೇ? ಆದರೆ ಈ ಬಾರಿ ನಮ್ಮ ಶಾಸಕರು ಅವರ ಆಮಿಷಕ್ಕೆ ಬಲಿಯಾಗಲಿಲ್ಲ. ಇದೇ ಕಾರಣಕ್ಕೆ ಅವರು ಇದೀಗ ನಮ್ಮ ಸರ್ಕಾರ ಕೆಡಹುವ ಆಂದೋಲನ ಶುರು ಮಾಡಿದ್ದಾರೆ. ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದುಸಿದ್ದರಾಮಯ್ಯ ಕಿಡಿಕಾರಿದರು. 

ಆಟ ಆಡ್ತೀರಾ?: ಜಾರಿ ನಿರ್ದೇಶನಾಲಯ(ಇ.ಡಿ), ಸಿಬಿಐ, ಐಟಿ ಹಾಗೂ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡು ಆಟ ಆಡ್ತೀರಾ? ಎಂದು ಅವರು ಕಿಡಿಕಾರಿದರು.

ಸಿದ್ದು ವಾಗ್ವಾಣ 

* ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನ 
* ಅದು ಸಾಧ್ಯವಾಗದೇ ಇದ್ದಾಗ ನನ್ನ ಮೇಲೆ ಸುಳ್ಳು ಕೇಸ್ ಹಾಕಿ ಕಿರುಕುಳ 
* ಒಬ್ಬೊಬ್ಬ ಶಾಸಕರಿಗೆ 50 ಕೋಟಿ ರುಪಾಯಿ ಆಫ‌ರ್ ಮಾಡಲು ಬಿಜೆಪಿಗರಿಗೆ ಹಣ ಎಲ್ಲಿಂದ ಬರುತ್ತೆ? 
* ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್, ವಿಜಯೇಂದ್ರ ಹಣ ಪ್ರಿಂಟ್ ಮಾಡ್ತಾರಾ? 
* ಇಡಿ, ಸಿಬಿಐ, ಐಟಿ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಂಡು ಆಟ ಆಡ್ತೀರಾ?
* ದಿಲ್ಲಿಯಲ್ಲಿ ಕೇಜಿವಾಲ್ ಬಳಿಕ ಇಲ್ಲಿ ನನ್ನನ್ನೂ, ನನ್ನ ಪತ್ನಿಯನ್ನೂ ಟಾರ್ಗೆಟ್ ಮಾಡಿದ್ದಾರೆ 
* ರಾಜ್ಯದ ಜನರೇನು ಮೂರ್ಖರಾ? ಬಿಜೆಪಿಯ ಇಂತಹ ಷಡ್ಯಂತ್ರಕ್ಕೆ ಯಾರೂ ಮರುಳಾಗಲ್ಲ 
* ಸುಖಾಸುಮ್ಮನೆ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಜನರೂ ಬಿಜೆಪಿಗೆ ಎಚ್ಚರಿಕೆ ನೀಡಿ: ಸಿಎಂ ಸಿದ್ದು

Latest Videos
Follow Us:
Download App:
  • android
  • ios