ಕರಾವಳಿ ಮತ್ತು ಮಲೆನಾಡಿಗೆ 300 ಕೋಟಿ ಅನುದಾನ ನೀಡಲು ಸಿಎಂ ಒಪ್ಪಿಗೆ: ಸಚಿವ ಕೃಷ್ಣ ಭೈರೇಗೌಡ
ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬೈಜ್ಞಾನಿಕವಾಗಿ ಗುಡ್ಡಗಳ ಕುಸಿತವನ್ನು ತಪ್ಪಿಸುವ ಯೋಜನೆ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 300 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.05): ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬೈಜ್ಞಾನಿಕವಾಗಿ ಗುಡ್ಡಗಳ ಕುಸಿತವನ್ನು ತಪ್ಪಿಸುವ ಯೋಜನೆ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 300 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಅವರು ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಒಳಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ನಾವು ಕಳೆದ ವರ್ಷ ಕೇಂದ್ರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ವತಿಯಿಂದ ಸಮೀಕ್ಷೆ ಮಾಡಿಸಿದ್ದೇವೆ. ಕರ್ನಾಟಕದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿದೆ ಎನ್ನುವುದರ ಬಗ್ಗೆ ಅವರು ನೀಡಿರುವ ವರದಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಟ್ಟಿದ್ದೇವೆ.
ಪರಿಸರದ ವಿಚಾರದಲ್ಲಿ ನಾವು ಜಾಗೃತರಾಗಬೇಕು: ತೀವ್ರ ಗುಡ್ಡ ಕುಸಿಯುವ ಪ್ರದೇಶಗಳ ಪಟ್ಟಿಯನ್ನೂ ಅವರು ಕೊಟ್ಟಿದ್ದಾರೆ ಎಂದರು.ಅಂತಹ ಕಡೆ ಜನವಸತಿಗಳನ್ನು ತೆರವುಗೊಳಿಸಬೇಕಾಗುವ ಸ್ಥಳಗಳನ್ನು ಪಟ್ಟಿ ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ. ಇದಕ್ಕಾಗಿ ಮುಖ್ಯಮಂತ್ರಿಗಳು ಈ ವರ್ಷ 100 ಕೋಟಿ ರೂ. ಮುಂದಿನ ವರ್ಷ 200 ಕೋಟಿ ರೂ. ಸೇರಿಸಿ ಗುಡ್ಡ ಕುಸಿಯುವುದನ್ನು ತಪ್ಪಿಸುವ ಕಾರ್ಯಕ್ಕೆ 300 ಕೋಟಿ ರೂ. ನೀಡಲು ಒಪ್ಪಿದ್ದಾರೆ. ಮಲೆನಾಡು, ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲು ಯೋಜನೆ ತಯಾರು ಮಾಡಲಾಗುವುದು ಎಂದರು.
ಕಾಂಗ್ರೆಸ್‌ನ ಎಂಪಿ ಗೆದ್ದರೂ ಹೊಳೆನರಸೀಪುರದತ್ತ 'ಕೈ' ಸರ್ಕಾರದ ಗಮನವಿಲ್ಲ: ಸಿಎಂ ವಿರುದ್ಧ ಸಾರ್ವಜನಿಕರ ಆಕ್ರೋಶ
ಈ ಯೋಜನೆ ನಮ್ಮಿಷ್ಟದಂತೆ ಆಗುವುದಿಲ್ಲ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ವರದಿ ಪ್ರಕಾರ ವೈಜ್ಞಾನಿಕ ವಾಗಿ ಮಾಡುತ್ತೇವೆ ಎಂದು ತಿಳಿಸಿದರು. ಮಲೆನಾಡು ಭಾಗದಲ್ಲಿ ಈ ಬಾರಿ ಗುಡ್ಡ ಕುಸಿತ ಹೆಚ್ಚು ಸಂಭವಿಸಿದೆ. ಇಲ್ಲಿ ಮಳೆಯನ್ನು ತಡೆದುಕೊಳ್ಳು ಶಕ್ತಿ ಸ್ವಾಭಾವಿಕವಾಗಿ ಇದೆ. ಆದರೆ ಹವಾಮಾನ ಬದಲಾವಣೆಯಿಂದಾಗಿ ತಿಂಗಳು ಪೂರ್ತಿ ಸುರಿಯುವ ಮಳೆ ಏಕಾ ಏಕಿ ಕೆಲವೇ ದಿನಗಳಲ್ಲಿ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ಪ್ರಕರಣಗಳು ಹೆಚ್ಚಾಗುತ್ತಿದೆ. ಪರಿಸರದ ವಿಚಾರದಲ್ಲಿ ನಾವು ಜಾಗೃತರಾಗಬೇಕಿದೆ ಎಂದರು.
ಬಿಜೆಪಿ ,ಜೆಡಿಎಸ್ ವಿರುದ್ದ ಲೇವಡಿ: ಬಿಜೆಪಿ-ಜೆಡಿಎಸ್ ಇಬ್ಬರೂ ಸೇರಿ ಹೇಗಾದರೂ ಮಾಡಿ ಸರ್ಕಾರವನ್ನು ಉರುಳಿಸಬೇಕು ಎಂದು ದ್ವೇಷ ಸಾಧನೆ ಮಾಡುತ್ತಿದ್ದಾರೆ . ಕಾಂಗ್ರೆಸ್ ಸರ್ಕಾರ ಬೀಳಿಸಬೇಕು ಎನ್ನುವ ಪ್ರಯತ್ನ ಬಿಟ್ಟು ಕರ್ನಾಟಕಕ್ಕೆ ಕೇಂದ್ರ ಇನ್ನೇನು ಮಾಡಿದೆ, ಮೇಕೆ ದಾಟು ಯೋಜನೆಗೆ ಅನುಮತಿ, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡಿಸಲಿ, ಕಳಸ ಬಂಡೂರಿ ಯೋಜನೆಗೆ ಒಪ್ಪಿಗೆ ಕೊಡಿಸಲಿ ಆಗ ನಾವು ಅವರಿಗೆ ಧನ್ಯವಾದ ಹೇಳುತ್ತೇವೆ ಎಂದರು.
ಇಂದ್ರಜಿತ್, ಲಂಕೇಶ್ ಅವರ ಪುತ್ರ ಅಂತ ಮುಂಚೆ ಗೊತ್ತಿರಲಿಲ್ಲ: ಗೌರಿ ಟ್ರೈಲರ್ ಲಾಂಚ್‌ನಲ್ಲಿ ಕಿಚ್ಚ ಸುದೀಪ್ ಮಾತು!
ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಮುಚ್ಚಿಹಾಕಲು ಪಾದಯಾತ್ರೆ ನಾಟಕ ಮಾಡುತ್ತಿದ್ದಾರೆ. ಇದರಿಂದ ಕರ್ನಾಟಕಕ್ಕೆ ನಷ್ಟವೇ ಹೊರತು ಲಾಭವಿಲ್ಲ. ಈ ವರ್ಷ ೫೮ ಟಿಎಂಸಿ ನೀರು ಹರಿದು ಸಮುದ್ರಕ್ಕೆ ಹೋಗಿದೆ. ಆ ನೀರು ಇದ್ದಿದ್ದರೆ ಕುಡಿಯಲು ನೀರುಕೊಟ್ಟು ಕೆರೆಗಳನ್ನು ತುಂಬಿಸುವ ಕೆಲಸ ಮಾಡಬಹುದಿತ್ತು. ಇಬ್ಬರೂ ಸೇರಿ ಜಂಟೀ ಆಪರೇಷನ್ ಮಾಡುತ್ತಿದ್ದಾರೆ. ಇಂತಹ ಕೆಲಸಕ್ಕೆ ಬಾರದ ಕೆಲಸ ಬಿಟ್ಟು ಕರ್ನಾಟಕಕ್ಕೆ ಏನಾದರೂ ಕೆಲಸ ಮಾಡಿ ಎಂದರು.