Asianet Suvarna News Asianet Suvarna News

ಸಿಎಂ ರಾಜಕೀಯ ಕಾರ್ಯದರ್ಶಿಗಳ ನೇಮಕ ರದ್ದು: ಹೈಕೋರ್ಟ್‌ಗೆ ಉತ್ತರಿಸಿದ ರಾಜ್ಯ ಸರ್ಕಾರ

* ಸಿಎಂ ರಾಜಕೀಯ ಕಾರ್ಯದರ್ಶಿಗಳ ನೇಮಕ ರದ್ದು
 * ರದ್ದಾಗಿರುವುದಾಗಿ ಹೈಕೋರ್ಟ್ ಗೆ ತಿಳಿಸಿದ ರಾಜ್ಯ ಸರ್ಕಾರ
 * ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥ

CM political secretary Post Canceled Tells Karnataka Govt To High Court rbj
Author
Bengaluru, First Published Aug 6, 2021, 8:15 PM IST

ಬೆಂಗಳೂರು, (ಆ.06): ಸಿಎಂ ರಾಜಕೀಯ ಕಾರ್ಯದರ್ಶಿ ನೇಮಕ ರದ್ದು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​​ಗೆ ತಿಳಿಸಿದೆ. 

ಈ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಪ್ರಶ್ನಿಸಿ ವಕೀಲ ಎಸ್. ಉಮಾಪತಿ ಹೈಕೋರ್ಟ್​ಗೆ ಸಲ್ಲಿಸಿದ್ದ ಪಿಐಎಲ್​ ಇತ್ಯರ್ಥವಾಗಿದೆ. 

ಬಿಎಸ್‌ವೈ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು, ರೇಣುಕಾಚಾರ್ಯ, ಸಂತೋಷ್‌ಗೆ ಶಾಕ್

ಪಿಐಎಲ್ ಸಲ್ಲಿಕೆಯಾಗಿದ್ದ ಹಿನ್ನೆಲೆ ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾಗಿದ್ದವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. 

ವಿಚಾರಣೆ ನಡೆಸಿದ್ದ ಹೈಕೋರ್ಟ್ ಸರ್ಕಾರದಿಂದ ಸ್ಪಷ್ಟನೆ ಕೇಳಿತ್ತು. ಈ ರೀತಿ ಹುದ್ದೆ ಸೃಷ್ಟಿ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ.. ಎಂದು ಸರ್ಕಾರದ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿತ್ತು. ಇಂದು (ಆ.06)‌ ಹೈಕೋರ್ಟ್​ಗೆ ಅವರ ನೇಮಕ ರದ್ದುಗೊಳಿಸಿರುವುದಾಗಿ ‌ಉತ್ತರ ನೀಡಿದೆ.

ಈ ಹಿಂದೆ ಎನ್.ಆರ್.ಸಂತೋಷ್, ಎಸ್ ಆರ್ ವಿಶ್ವನಾಥ್, ಎಂಪಿ ರೇಣುಕಾಚಾರ್ಯ ಹಾಗೂ  ಶಂಕರಗೌಡ ಪಾಟೀಲ್ ಅವರು 
ಯಡಿಯೂರಪ್ಪನವರ ಅವರ ರಾಜಕೀಯ ಕಾರ್ಯದರ್ಶಿಗಳಾಗಿದ್ದರು. ಇದೀಗ ಬೊಮ್ಮಾಯಿ ಸಿಎಂ ಆದ ಬಳಿಕ ರಾಜಕೀಯ ಕಾರ್ಯದರ್ಶಿಗಳ ಹುದ್ದೆಗಳನ್ನು ರದ್ದು ಮಾಡಿದ್ದಾರೆ.

Follow Us:
Download App:
  • android
  • ios