Asianet Suvarna News Asianet Suvarna News

ಕುಮಾರಸ್ವಾಮಿ ಕ್ಷುಲ್ಲಕ ರಾಜಕಾರಣ ಮಾಡೋದನ್ನ ಬಿಟ್ಟು, ಸರಿಯಾಗಿ ಮಂತ್ರಿಗಿರಿ ನಿಭಾಯಿಸಲಿ: ಪೊನ್ನಣ್ಣ ವಾಗ್ದಾಳಿ

ರಾಜ್ಯದಲ್ಲಿ ಜನರು ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಕೆಲಸ ಮಾಡಲಿ. ಅದು ಬಿಟ್ಟು ಇಂತಹ ಕ್ಷುಲ್ಲಕ ಕೆಲಸಕ್ಕೆ ಕೈ ಹಾಕಬೇಡಿ ಎಂದು ಈಗಾಗಲೇ ಹೇಳಿದ್ದೆ. ಮತ್ತೊಮ್ಮೆ ಮಾಧ್ಯಮಗಳ ಮೂಲಕ‌ ಅವರಿಗೆ ನಾನು ಮನವಿ‌ ಮಾಡ್ತೇನೆ. ಮುಡಾದ ದಾಖಲೆಗಳನ್ನು ತಿದ್ದಿದವರು ಯಾರು?. ಆ ಬಗ್ಗೆ ಅವರು ಹೇಳಬೇಕು. ಆ ಬಗ್ಗೆ ಕುಮಾರಸ್ವಾಮಿ ಹೇಳಲು ಆಗಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಗರಂ ಆದ ಪೊನ್ನಣ್ಣ 

CM Legal Adviser AS Ponnanna Slams Union minister HD Kumaraswamy grg
Author
First Published Aug 27, 2024, 5:59 PM IST | Last Updated Aug 27, 2024, 5:59 PM IST

ಕೊಡಗು(ಆ.27):  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ಸರಿಯಾಗಿ ಮಂತ್ರಿಗಿರಿ ಕೆಲಸವನ್ನು ಮಾಡಲಿ ಎಂದು ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಎಚ್‌ಡಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ. 

ಇಂದು(ಮಂಗಳವಾರ) ವಿರಾಜಪೇಟೆಯ ತಮ್ಮ ಮನೆ ಬಳಿ ನಡೆದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು, ಮುಡಾ ದಾಖಲೆಗಳಿಗೆ ವೈಟ್ನರ್ ಹಾಕಿ ತಿದ್ದಿ 67 ಕೋಟಿ ರೂಪಾಯಿಯನ್ನು ಸಿಎಂ ನುಂಗಿದ್ದಾರೆ ಎಂಬ ಕೇಂದ್ರ ಸಚಿವ ಎಚ್ ಡಿಕೆ ಹೇಳಿಕೆಗೆ ಪೊನ್ನಣ್ಣ ತಿರುಗೇಟು ನೀಡಿದರು. 

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಹೆಸರಿಗೆ ಧಕ್ಕೆ ತರಲು ಯತ್ನ; ಬಿಜೆಪಿ ವಿರುದ್ಧ ಪೊನ್ನಣ್ಣ ಕಿಡಿ

ರಾಜ್ಯದಲ್ಲಿ ಜನರು ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಕೆಲಸ ಮಾಡಲಿ. ಅದು ಬಿಟ್ಟು ಇಂತಹ ಕ್ಷುಲ್ಲಕ ಕೆಲಸಕ್ಕೆ ಕೈ ಹಾಕಬೇಡಿ ಎಂದು ಈಗಾಗಲೇ ಹೇಳಿದ್ದೆ. ಮತ್ತೊಮ್ಮೆ ಮಾಧ್ಯಮಗಳ ಮೂಲಕ‌ ಅವರಿಗೆ ನಾನು ಮನವಿ‌ ಮಾಡ್ತೇನೆ. ಮುಡಾದ ದಾಖಲೆಗಳನ್ನು ತಿದ್ದಿದವರು ಯಾರು?. ಆ ಬಗ್ಗೆ ಅವರು ಹೇಳಬೇಕು. ಆ ಬಗ್ಗೆ ಕುಮಾರಸ್ವಾಮಿ ಹೇಳಲು ಆಗಲ್ಲ ಎಂದು ಕುಮಾರಸ್ವಾಮಿ ಅವರ ವಿರುದ್ಧ ಪೊನ್ನಣ್ಣ ಗರಂ ಆದರು. 

ಆಡಳಿತ ಯಂತ್ರವನ್ನ ಕೆಲಸ ಮಾಡಲು ಬಿಡದ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಇತಿಹಾಸ ತಕ್ಕ ಪಾಠ ಕಲಿಸಲಿದೆ ಎಂದು ಎ.ಎಸ್.ಪೊನ್ನಣ್ಣ ವಾಗ್ದಾಳಿ ನಡೆಸಿದ್ದಾರೆ. 

Latest Videos
Follow Us:
Download App:
  • android
  • ios