'ಸಿಎಂ ಬೊಮ್ಮಾಯಿ ಹೀರೋ.. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಡೈರೆಕ್ಟರ್'

* ಮುಂದಿನ ಅಂದ್ರೆ 2023ರ ಚುನಾವಣೆಗೆ ಶ್ರೀರಾಮುಲು ವ್ಯಾಖ್ಯಾನ
* ಬೊಮ್ಮಾಯಿ ಹೀರೋ.. ಯಡಿಯೂರಪ್ಪ ಡೈರೆಕ್ಟರ್ ಎಂದು ಸಚಿವ ಶ್ರೀರಾಮುಲು
* ಮುಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯುತ್ತೆ ಎಂ

CM   is hero BS Yediyurappa director says Sriramulu rbj

ತುಮಕೂರು, (ಸೆ.07): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೀರೋ. ಆದರೆ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರೇ ಡೈರೆಕ್ಟರ್​ ಎಂದು ಸಾರಿಗೆ ಸಚಿವ ಶ್ರೀರಾಮುಲು ಬಣ್ಣಿಸಿದ್ದಾರೆ.

ಇಂದು (ಸೆ.07) ತುಮಕೂರಿನಲ್ಲಿ ಮಾತನಾಡಿರುವ ಶ್ರೀರಾಮುಲು,  ಮುಂದಿನ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯುತ್ತದೆ. ಇದನ್ನು ನಮ್ಮ ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಗಂತ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದ್ದಾರೆ ಅಂತಲ್ಲ. ಸಿನಿಮಾದಲ್ಲಿ ಹೀರೋ ಎಷ್ಟೇ ಒಳ್ಳೆಯ ಆಯಕ್ಟ್ ಮಾಡಿ ಜನರನ್ನು ಆಕರ್ಷಣೆ ಮಾಡಿದರೂ ಅದರಲ್ಲಿ ನಿರ್ದೇಶಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ಸಮಜಾಯಿಷಿ ನೀಡಿದರು.

ಕರ್ನಾಟಕ ಮುಂದಿನ ಚುನಾವಣೆಗೆ ಯಾರ ನಾಯಕತ್ವ? ದಾವಣಗೆರೆಯಲ್ಲಿ ಸೀಕ್ರೆಟ್ ಬಿಚ್ಚಿಟ್ಟ ಅಮಿತ್ ಶಾ!

ಸಿನಿಮಾದಲ್ಲಿ ಹೀರೋ ಎಷ್ಟೇ ಒಳ್ಳೆಯ ಅಭಿನಯ ಮಾಡಿ ಜನರನ್ನು ಆಕರ್ಷಿಸಿದರೂ ಅದರಲ್ಲಿ ನಿರ್ದೇಶಕರ ಪಾತ್ರ ಮುಖ್ಯ. ಸಿನಿಮಾದಲ್ಲಿ ಹೀರೋಗಿಂತ ದೊಡ್ಡ ಶಕ್ತಿ ನಿರ್ದೇಶಕರಿಗೆ ಇರುತ್ತದೆ. ನಮ್ಮ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೀರೋ ಇದ್ದಂತೆ. ಬಿ.ಎಸ್.ಯಡಿಯೂರಪ್ಪ ನಿರ್ದೇಶಕರಿದ್ದಂತೆ ಎಂದು ಸಚಿವ ಶ್ರೀರಾಮುಲು ವ್ಯಾಖ್ಯಾನಿಸಿದರು.

ಸಿನಿಮಾದಲ್ಲಿ ಹೀರೋಗಿಂತ ದೊಡ್ಡ ಶಕ್ತಿ ನಿರ್ದೇಶಕರಿಗೆ ಇರುತ್ತದೆ. ಹಾಗಾಗಿ ನಮ್ಮ ಪಾರ್ಟಿಯಲ್ಲಿ ಯಡಿಯೂರಪ್ಪನವರಿಗೆ ದೊಡ್ಡ ಶಕ್ತಿ ಇದೆ. ಅವರ ಮಾರ್ಗದರ್ಶನದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios