ಯಡಿಯೂರಪ್ಪನನ್ನ ಇನ್ನೂ ಶೂದ್ರರನ್ನಾಗಿಯೇ ನೋಡುತ್ತಿದ್ದಾರೆ‌. ಸಾಬರನ್ನ ಬಿಟ್ರೆ ಎಲ್ಲರೂ ಶೂದ್ರರೇ: ಇಬ್ರಾಹಿಂ 

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಜು.23): ಬಸವ ಕೃಪಾದವರು, ಕೇಶವ ಕೃಪಾದವರಿಗೆ ದೂಡಿದ್ರೆ ಇದೇ ಆಗೋದು, ಕೇಶವ ಕೃಪಾದವರು ಬಸವ ಕೃಪಾದವರನ್ನ ಹೊರಗೆ ಹಾಕಿದ್ದಾರೆ. ಅದರಲ್ಲಿ ಆಶ್ಚರ್ಯ ಏನು ಇಲ್ಲ. ನಾನು ಯಡಿಯೂರಪ್ಪಗೆ ಆವತ್ತೇ ಹೇಳಿದ್ದೇ ಮುಂದೊಂದು ದಿನ ಕೇಶವ ಕೃಪಾದವರು ನಿಮಗೆ ಹೀಗೆ ಮಾಡ್ತಾರೆ ಅಂತಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. ಇಂದು(ಶನಿವಾರ) ನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನನ್ನ ಇನ್ನೂ ಶೂದ್ರರನ್ನಾಗಿಯೇ ನೋಡುತ್ತಿದ್ದಾರೆ‌. ಸಾಬರನ್ನ ಬಿಟ್ರೆ ಎಲ್ಲರೂ ಶೂದ್ರರೇ, ಕೇಶವ ಕೃಪಾದವರು ಮಾತ್ರ ಅವರು ಪಠ್ಯಪುಸ್ತಕದಿಂದ ಶಂಕರಾಚಾರ್ಯರನ್ನು ಹೊರ ಹಾಕಿದ್ದಾರೆ. ಶಂಕರಾಚಾರ್ಯರು ಬ್ರಾಹ್ಮಣರಲ್ಲವೇ ಅವರನ್ನ ಯಾಕೆ ಹೊರಗೆ ಇಟ್ಟರು. ಯಡಿಯೂರಪ್ಪ ಅಧಿಕಾರ ಇದೆ ಅಂತಾ ಹೋದರು. ಕೊನೆಯ ಈ ವಯಸ್ಸಿನಲ್ಲಿ ಅವರ ಮಗನಿಗೆ ಒಂದು ಎಂಎಲ್‌ಸಿ ಸೀಟ್ ಸಿಕ್ತೇನ್ರೀ, ಬಿಜೆಪಿಯಲ್ಲಿ ಅಡ್ವಾಣಿಗೆ ಆ ಗತಿ ಬಂತು, ಬಾಜು ಬೈಟೋ ಅಂತಾ ಹೇಳಿದರು ಎಂದು ಅವರು, ವರಿಷ್ಠ ಮಂಡಳಿ ಅಂತ ಅನಿಷ್ಟ ಮಂಡಳಿ ಹಾಕಿದ್ದಾರೆ ಈಗ ಎಂದು ಇಬ್ರಾಹಿಂ ವ್ಯಂಗ್ಯವಾಡಿದರು.

ಕೆರೂರ ಘಟನೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರದ ಶಾಸಕ ಆಗಿದ್ದವರು ಬಂದು ನೋಡಬೇಕಿರೋದು ಅವರ ಧರ್ಮ. ಇದೇ ಸಮಯದಲ್ಲಿ ಸಿದ್ದರಾಮಯ್ಯ ನೀಡಿದ ಪರಿಹಾರದ ಹಣ ಮಹಿಳೆಯರು ಎಸೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ಸತ್ತವರ ಮನೆ ಸಂಕಷ್ಟ ಯಮದೇವರಾಯನಿಗೆ ಗೊತ್ತು, ನೋವಿಗೆ ದುಡ್ಡು ಪರಿಹಾರವಲ್ಲ. ನೋವಿಗೆ ಪರಿಹಾರ ನೋವು ಸಮಾಧಾನ ಪಡಿಸುವ ಹೆಜ್ಜೆ ಇಡಬೇಕು. ಮಾಜಿ ಸಿಎಂ ಅವರ ಕ್ಷೇತ್ರದ ಜನ, ಕ್ಷೇತ್ರದ ಎಂಎಲ್‌ಎ ಆಗಿದ್ದವರು ಬಂದು ನೋಡಬೇಕಿರೋದು ಅವರ ಧರ್ಮ, ಅವರು ಯಾಕ ಬೇಗ ಬರಲಿಲ್ಲ ಎಂದು ನಾ ಮಾತನಾಡಲ್ಲ ಅಂತ ಇಬ್ರಾಹಿಂ ತಿಳಿಸಿದ್ದಾರೆ. 

'ವಿಧಾನಸಭೆ ಚುನಾವಣೆ ವೇಳೆ 12 ಸಚಿವರ CD ಹೊರಬರುತ್ತೆ, 30 ಕೋಟಿ ಲಂಚ, 1 ಮಂಚ’

ಕೆರೂರು 100% ಜೆಡಿಎಸ್ ಊರು, ಇಲ್ಲಿಯವರೆಲ್ಲ ಸಿದ್ದರಾಮಯ್ಯನಿಗೆ ಮತ ನೀಡಿದ್ದಾರೆ. ಘಟನೆಯಲ್ಲಿ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ನಮ್ಮಲ್ಲಿ ಹರಿಯುತ್ತಿರೋದು ಒಂದೇ ರಕ್ತ, ಎಲ್ಲರಿಗೂ ಒಂದೇ ನೋವು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ, ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ನಿಷೇಧಿಸಲು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್ ಹೋರಾಟದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಹಳ ಸಂತೋಷ ಪ್ರಮೋದ್‌ ಮುತಾಲಿಕ್ ಅವರು ಹೇಳಿದ್ರು ನಾನು ಕಟಿಂಗ್ ಮಾಡಿಸೊಲ್ಲ ಅಂತ, ಅವರ ತಲೆ ಮೇಲೆ ಕೂದಲೇ ಇಲ್ಲ. ಅವರು‌ ಎಲ್ಲಿ ಮಾಡಿಸೋಕೆ ಹೋಗ್ತಾರೆ. ಅದ್ಯಾರೋ ಬಾಂಗ್ಲಾದೇಶದವರು ಕಟಿಂಗ್ ದವರು ಇದ್ದಾರಂತೆ ಹೇಳಿದರು. ನಾನು‌ ಎಸ್ಪಿಗೆ ಹೇಳಿದ್ದೇನೆ ಹಾಗಿದ್ರೆ ವಿಚಾರಣೆ ಮಾಡಪ್ಪ ಹಂಗ ಯಾರಾದ್ರು ಇದ್ರೆ‌ ಹಿಡಿರಿ ಅಂದೆ, ಭಾರತದ ಏಕತೆಗೆ, ಸಾರ್ವಭೌಮತ್ವಕ್ಕೆ ಧಕ್ಕೆ ಬರೋದಕ್ಕೆ ನಾವು ಒಪ್ಪಿಕೊಳ್ಳೋಲ್ಲ ಎಂದು ತಿಳಿಸಿದ್ದಾರೆ. 

ಜಿ.ಎಸ್.ಟಿ ದುಡ್ಡು ಬರಲಿಲ್ಲ. ಈ ಬಗ್ಗೆ ಮುತಾಲಿಕ್ ಕೇಳಿದಿರಾ, ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಮನೆ‌ ಮುಳುಗಿದವರು ಬಗ್ಗೆ ಮುತಾಲಿಕ್ ಕೇಳಿದ್ರಾ?...ಅನೇಕ‌ ಜ‌ನ ಸತ್ರು ಅವಾಗ ಮುತ್ತಾಲಿಕ್‌ ಕೇಳಿದ್ರಾ?. ಆರೂವರೆ ಕೋಟಿ‌ ಜನರಿಗೆ‌ ಅನ್ಯಾಯವಾಗಿದೆ ಆವಾಗ ಕೇಳಿದ್ರಾ? ಅಂತ ಮುತಾಲಿಕ್‌ಗೆ ತಿವಿದರು‌. ನಿಮ್ಮ ಹಾಗೂ ಬಿಜೆಪಿಯವರ ಜಗಳ ತಂದು ಬಜಾರ್'ದಲ್ಲಿ ತೊಳಿತಾ ಇದ್ದೀರಿ, ಆ‌ ಕಡೆ ಕಾಂಗ್ರೆಸ್ ನವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಜಾರ್'ನಲ್ಲಿ ತೊಳೆದುಕೊಳ್ಳತಾ ಇದ್ದಾರೆ. ಬಿಜೆಪಿಯವರು ಮುತಾಲಿಕ್, ಯಡ್ನಾಳೊ ಪಡ್ನಾಳೊ ಅವರ್ಯಾರೊ ಇದ್ದಾರಲ್ಲ ಯತ್ನಾಳ ಅವರೂ ತೊಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಹೇಳೋದು ಉನ್ಕೊ ದೇಖೆ ಬಾರ್ ಬಾರ್ ..ಹಮ್ಕೊ‌ ದೇಖೋ ಏಕ್‌ಬಾರ್ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ‌ರು.

'ನಮ್ ಮತ ನೀವು ತಗೊಳ್ಳಿ, ನಿಮ್ ಮತ ನಮಗೆ ಕೊಡಿ' ಸಿಎಂ ಇಬ್ರಾಹಿಂ ಸಂಧಾನಸೂತ್ರ!

ಕೆರೂರ ಘರ್ಷಣೆಯಲ್ಲಿ ಗಾಯಗೊಂಡ ಗಾಯಾಳುಗಳ ಭೇಟಿ 

ಇನ್ನು ಬಾಗಲಕೋಟೆ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಇಬ್ರಾಹಿಂ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವನ ಹೇಳಿದರು. ಕೆರೂರ ಗುಂಪು ಘರ್ಷಣೆಯ ಹಾಗೂ ಕುಳಗೇರಿ ಡಾಬಾ ಮೇಲೆ ದಾಳಿಯ ಗಾಯಾಳುಗಳನ್ನ ಭೇಟಿಯಾಗಿ ಆರೋಗ್ಯ ವಿಚಾರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆರೂರು ಹಾಗೂ ಕುಳಗೇರಿ ಗಲಾಟೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಇಂತಹ ಗಲಾಟೆಗಳಿಂದ ಮಕ್ಕಳು ಮರಿಗಳು ಉಪವಾಸ ಬೀಳುತ್ತೇವೆ. ಮನುಷ್ಯತ್ವದ ಆಧಾರದ ಮೇಲೆ‌ ನಾವು ಬಾಳಿಕೊಂಡು ಬಂದಿದ್ದೇವೆ. ಮನಸ್ಸಿಗೆ ತುಂಬಾ ನೋವಾಯಿತು. ಪಾಪ ನಾಲ್ಕು ಜನ ಡಾಬಾ ನಡೆಸಿಕೊಂಡು ಜೀವನ ನಡೆಸೋರು,ಮುಸ್ಲಿಮರಾಗಿ ಒಳ್ಳೆ ವೆಜಿಟೇರಿಯನ್ ಡಾಬಾ ನಡೆಸ್ತಾರೆ. ಲಿಂಗಾಯತರು ಬ್ರಾಹ್ಮಣರು ಅಲ್ಲಿ ಹೋಗಿ ಊಟ ಮಾಡ್ತಾರೆ. ಈವತ್ತು‌ ಜಾತಿ‌ ಇಲ್ಲ ಎನ್ನುತ್ತ ತನ್ನ ಆಪ್ತ ಸಹಾಯಕ ಸಂಜಯನನ್ನ ಕರೆದು‌ ತೋರಿಸಿದ ಇಬ್ರಾಹಿಂ ಅವರು,ಆಪ್ತ ಸಹಾಯಕನ ಜುಟ್ಟು ತೋರಿಸಿದ ಇಬ್ರಾಹಿಂ ನನಗೆ ಮಾತ್ರೆ ಕೊಡೋಣು,ನನ್ನ ನೋಡಿಕೊಳ್ಳೋನು ಅವನೇ, ಅವನನ್ನ(ಸಂಜಯ) ಯಾಕ‌ ಇಟ್ಟು ಕೊಂಡಿದ್ದೀವಿ ಅದೊಂದು ವಿಶ್ವಾಸ. ಬಂದವರೆಲ್ಲ ಕೇಳ್ತಾರೆ, ಸಾಬರ ಮನೆಯಲ್ಲಿ ಸಂಜಯ ಯಾಕೆ ಅಂತ. ನಮ್ಮ‌ ಅಡುಗೆ ಮಾಡೋನು ವಿಷ್ಣು ನಾಯಕ್ ಅಂತ. ಅವನು ಬೆಸ್ಟ್ ನಾನ್ ವೆಜಿಟೇರಿಯನ್ ಅಡುಗೆ ಮಾಡುತ್ತಾನೆ. ಹಾಗೇ ಮಾತನಾಡುತ್ತಾ ತನ್ನ ಆಪ್ತ ಸಹಾಯಕನ್ನ ಕರೆಸಿ ತೋರಿಸಿದ‌ ಇಬ್ರಾಹಿಂ, ಇವನೇ ನೋಡಿ ಸಂಜಯ ಅವನ ಜುಟ್ಟು ನೋಡಿ ಎಂದು ಜುಟ್ಟು ತೋರಿಸಿದರು. ಈಗ ಕೆರೂರಿಗೆ ಹೋಗುತ್ತೇನೆ. ಎಲ್ಲಾ ಸಮಾಜದ,ಧರ್ಮದ ಬಾಂಧವರೊಂದಿಗೆ ಸಭೆ ಮಾಡಿ, ಮತ್ಯಾವಾಗ್ಲೂ ಇಂಥ ಘಟನೆ ಆಗದಂತೆ ಪ್ರಾರ್ಥನೆ ಮಾಡುತ್ತೇನೆ. ಕೆರೂರು ಬಹಳ ಹಳೆಯ ಊರು, 72ನೇ ಇಸ್ವಿಯಿಂದ ಈ ಊರಿಗೆ ಬಂದು ಹೋಗ್ತಾ ಇದ್ದಿನಿ. ಮಾಧ್ಯಮದ‌ ಮೂಲಕ‌ ಎಲ್ಲರೂ ಒಟ್ಟಾಗಿರೋಣ ಎಂದು ಪ್ರಾರ್ಥನೆ‌ ಮಾಡುತ್ತೇನೆ. ಪೊಲೀಸನವರು ಒಳ್ಳೆಯ ಕೆಲಸ‌ ಮಾಡಿದ್ದಾರೆ ಎಂದು ಇಬ್ರಾಹಿಂ‌ ತಿಳಿಸಿದರು.