ಬೆಂಗಳೂರು, [ಫೆ.26]: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳುಗಳ ನಂತರ ಜೆಡಿಎಸ್ ಕೊನೆಗೂ ನಿಗಮ ಮಂಡಳಿ ಪಟ್ಟಿ ಪ್ರಕಟಿಸಿದೆ.

ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಓರ್ವ ಜೆಡಿಎಸ್​ ಮುಖಂಡ ಸೇರಿದಂತೆ 8 ಶಾಸಕರು ಸೇರಿ ಒಟ್ಟು 9 ಮಂದಿಯನ್ನು ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಕುಮಾರಸ್ವಾಮಿ ಇಂದು [ಮಂಗಳವಾರ] ಆದೇಶ ಹೊರಡಿಸಿದ್ದಾರೆ.

ಮಾಜಿ ಶಾಸಕ ಕೋನರೆಡ್ಡಿ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಇನ್ನು ಯಾರಿಗೆಲ್ಲ ನಿಗಮ ಮಂಡಳಿ ಭ್ಯಾಗ್ಯ ಸಿಕ್ಕಿದೆ ಎನ್ನುವುದು ಈ ಕೆಳಗಿನಂತಿದೆ. 

1.ಶಾಸಕ ನಾಗನಗೌಡ - ಕೊಳಗೇರಿ ಅಭಿವೃದ್ಧಿ ಮಂಡಳಿ
2.ರಾಜಾವೆಂಕಟಪ್ಪ ನಾಯಕ - ಕರ್ನಾಟಕ ಪ್ರವಾಸೋದ್ಯಮ ನಿಗಮ
3.ಡಿ.ಸಿ ಗೌರಿಶಂಕರ್ - ಎಂಎಸ್ ಐಲ್
4.ಬಿ. ಸತ್ಯನಾರಾಯಣ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
5.ನಿಸರ್ಗ ನಾರಾಯಣಸ್ವಾಮಿ - ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ
6.ಕೆ. ಅನ್ನದಾನಿ - ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ
7.ಶಿವಲಿಂಗೇಗೌಡ - ಕರ್ನಾಟಕ ಗೃಹ ಮಂಡಳಿ
8.ಕೆ. ಮಹದೇವ - ಕೈಗಾರಿಕಾ ಮೂಲಸೌಕರ್ಯ ಅಭಿವೃದ್ದಿ ನಿಗಮ
9.ಜೆಡಿಎಸ್ ಮುಖಂಡ ಜಫ್ರಲ್ಲಾ ಖಾನ್ ಗೆ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ.