ಸಿಎಂ ಬದಲಾವಣೆ ವಿಚಾರ; ಚುನಾವಣೆ ವೇಳೆ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಕುತಂತ್ರ - ಎ.ನಾರಾಯಣಸ್ವಾಮಿ

ಸಿಎಂ ಬದಲಾವಣೆ ಎಂಬುದು ಕಾಂಗ್ರೆಸ್ ಕುತಂತ್ರ. ಯಾವುದೇ ಬದಲಾವಣೆ ಇಲ್ಲ. ಮುಂದಿನ ಚುನಾವಣೆಯೂ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

CM change issue Congress ploy to create confusion during elections says A. Narayanaswamy chitradurga rav

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಆ.11): ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಇಂದು ನಗರದ ಚಂದ್ರವಳ್ಳಿ ಗೇಟ್ ನಿಂದ ಬೃಹತ್ ತಿರಂಗಾ ಬೈಕ್ ರ್ಯಾಲಿ ನಡೆಯಿತು. ಈ ವೇಳೆ ಸಾವಿರಾರು ದ್ವಿಚಕ್ರ ಸವಾರರು ತಮ್ಮ ವಾಹನಗಳ  ಮೇಲೆ ದೇಶದ ಭಾವುಟವನ್ನು ಕಟ್ಟಿಕೊಂಡು ನಗರದ ಪ್ರಮುಖ ಎಲ್ಲಾ ರಸ್ತೆಗಳಲ್ಲಿ ಬೃಹತ್ ತಿರಂಗಾ ಬೈಕ್ ರ್ಯಾಲಿ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹಾಗು MLC ಕೆ.ಎಸ್ ನವೀನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಸಿಎಂ ಬದಲಾವಣೆ ಎಲ್ಲಾ ವದಂತಿ, ಕಾಂಗ್ರೆಸ್ ಗೆ ಬುದ್ದಿ ಭ್ರಮಣೆ ಆಗಿದೆ: ಆರ್ ಅಶೋಕ್ ವಾಗ್ದಾಳಿ

ಚುನಾವಣೆ(Election) ವೇಳೆ ಆಡಳಿತದಲ್ಲಿ ಗೊಂದಲ‌ ಸೃಷ್ಠಿಗೆ ಕಾಂಗ್ರೆಸ್((Congress) ಯತ್ನ ಮಾಡ್ತಿದೆ. ಕಾಂಗ್ರೆಸ್ ಪಕ್ಷದ ಕುತಂತ್ರ ಫಲ ನೀಡುವುದಿಲ್ಲ. ಎಂದು ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಚಿವ ನಾರಾಯಣಸ್ವಾಮಿ(Minister Narayana swamy) ತಿರುಗೇಟು ನೀಡಿದರು‌‌. ಪಕ್ಷದ ತೀರ್ಮಾನ, ಬಿಎಸ್ ವೈ(BSY) ಸಂಕಲ್ಪದಂತೆ ಬೊಮ್ಮಾಯಿ(CM Basavaraj Bommai) ಸಿಎಂ ಆಡಳಿತ ಮಾಡ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಆಡಳಿತ ಅವಧಿ ಪೂರ್ಣ ಆಗಲಿದೆ. ಬಿಎಸ್ ವೈ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಖಡಕ್ ಸಂದೇಶ ರವಾನಿಸಿದರು.

ದಲಿತ ಸಿಎಂ ಕೂಗಿನ ಬಗ್ಗೆ  ಪ್ರತಿಕ್ರಿಯೆ ನೀಡಿದ ನಾರಾಯಣಸ್ವಾಮಿ,ಖಂಡಿತವಾಗಿ ಎಲ್ಲಾ ಸಮುದಾಯಕ್ಕೂ ಅವಕಾಶ ಸಿಗಬೇಕು. ಬಿಜೆಪಿಯೂ ಹೊರತಾಗಿಲ್ಲ, ಬಿಜೆಪಿ ಎಲ್ಲಾ ವರ್ಗಕ್ಕೆ ಅವಕಾಶ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು. ಸಿದ್ದರಾಮಯ್ಯ(Siddaramaiah)ರಿಂದ 75ನೇ ಸ್ವಾತಂತ್ರ್ಯೋತ್ಸವದ ಬಗ್ಗೆಯೂ ರಾಜಕಾರಣ‌‌, ದೇಶಪ್ರೇಮದ ಬಗ್ಗೆ ಪ್ರಶ್ನಿಸುವುದು ಸಿದ್ಧರಾಮಯ್ಯಗೆ ಶೋಭೆಯಲ್ಲ. ತ್ರಿವರ್ಣ ಧ್ವಜದ ಬಗ್ಗೆ ತಪ್ಪಾಗಿ ಹೇಳಿ ಸಿದ್ಧರಾಮಯ್ಯ ಅಜ್ಞಾನ ಪ್ರದರ್ಶನ. ತಿರಂಗಾದಲ್ಲಿರುವ ಬಣ್ಣದ ಬಗ್ಗೆ ಹೇಳುತ್ತ ಕೆಂಪು ಬಣ್ಣ ಎಂದು ಹೇಳಿ ಅಜ್ಞಾನ ಪ್ರದರ್ಶನ. 

ಸಿಎಂ ಬದಲಾವಣೆ ಚರ್ಚೆ: ಬಿಎಸ್‌ವೈ ಬದಲಾಗೋದು ಗೊತ್ತಿತ್ತು...ಬೊಮ್ಮಾಯಿ ಬಗ್ಗೆ ಸಿದ್ದು ಹೇಳಿದ್ದಿಷ್ಟು.

ಸಿದ್ದರಾಮಯ್ಯ ಎಂಥ ದೇಶ ಭಕ್ತ ಎಂಬುದು ತಿಳಿದಿದೆ. ಸಿದ್ಧರಾಮಯ್ಯ ಅವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು. ಬಿಜೆಪಿ(BJP), ಸಂಘ ಪರಿವಾರ(RSS), ಬಿಜೆಪಿ ಯುವ ಕಾರ್ಯಕರ್ತರಿಗೆ ಸಿದ್ಧರಾಮಯ್ಯ ಪಾಠದ ಅವಶ್ಯಕತೆಯಿಲ್ಲ. ಜಮ್ಮು ಜಾಶ್ಮೀರದಲ್ಲಿ ಕಲಂ 370 ತೆಗೆದಿದ್ದೇವೆ. ಹಿಂದೂರಾಷ್ಟ್ರದ ಪರಿಕಲ್ಪನೆ, ಸ್ವಾಭಿಮಾನದಿಂದ ಎಲ್ಲಾ ವರ್ಗಗಳ ಜತೆ ಸಾಗಿದ್ದೇವೆ. ದೇಶದಲ್ಲಿ ರಾಮರಾಜ್ಯ ನಿರ್ಮಾಣ ಮಾಡುತ್ತೇವೆ‌ ರಾಮಮಂದಿರ ನಿರ್ಮಾಣದ ಮೂಲಕ ಶಾಂತಿ ಸಂದೇಶ ಎಂದು ತಿಳಿಸಿದರು..

Latest Videos
Follow Us:
Download App:
  • android
  • ios