ಬೆಂಗಳೂರು, (ಏ.26): ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಲಾಕ್ ಡೌನ್ ಘೋಷಿಸಲಾಗಿದೆ. ಇದರ ನಡುವೆ  ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಶಾ ಕಾರ್ಯಕರ್ತೆಯರ ಸಭೆ ಮಾಡಿದ್ದಾರೆ.

ಓರ್ವ ಜನಪ್ರತಿನಿಧಿಯಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಎಷ್ಟು ಸರಿ ಅಂತೆಲ್ಲಾ  ರೇಣುಕಾಚಾರ್ಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಇದೀಗ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ರೇಣುಕಾಚಾರ್ಯರಿಗೆ ಕರೆ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ರೇಣುಕಾಚಾರ್ಯ ಗಮ್ಮತ್ತೇ ಬೇರೆ;   ಸೋಶಿಯಲ್ ಡಿಸ್ಟಂಸಿಂಗ್‌ಗೆ ಕಿಮ್ಮತ್ತೇ ಇಲ್ಲ!

ರೇಣುಕಾಚಾರ್ಯಗೆ ಬಿಎಸ್‌ವೈ ಫುಲ್ ಕ್ಲಾಸ್
ಹೌದು...ಸಾಮಾಜಿಕ‌ ಅಂತರ‌ ಕಾಯ್ದು ಕೊಳ್ಳದೆ ಆಶಾ ಕಾರ್ಯಕರ್ತೆಯರ ಸಭೆ‌ ನಡೆಸಿದ್ದ ವೈರಲ್ ಆಗಿರುವ ವಿಡಿಯೋ ನೋಡಿರುವ ಸಿಎಂ  ಬಿಎಸ್ ಯಡಿಯೂರಪ್ಪ, ಗರಂ ಆಗಿದ್ದಾರೆ.

ದೂರವಾಣಿ ಕರೆ ಮಾಡಿ, ಏನು ಮಾಡುತ್ತಿದ್ದೀಯಾ ನೀನು, ಇಡೀ ದೇಶವೇ ಸಾಮಾಜಿಕ ಅಂತರದ ಪಾಲನೆ ಮಾಡುತ್ತಿದ್ದು, ಅದರ ಬಗ್ಗೆ ಮಾತನಾಡುತ್ತಿದೆ. ಆದರೆ, ನೀನು ಮಾತ್ರ ಅಂತರ ಕಾಯ್ದುಕೊಳ್ಳದೇ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ್ದೀಯಾ' ಎಂದು ಫುಲ ಕ್ಲಾಸ್ ತೆಗೆದುಕೊಂಡಿದ್ದಾರೆ.

ರೇಣುಕಾಚಾರ್ಯ ಅವರು ಸಿಎಂ ಅವರಿಂದ ಬೈಯಿಸಿಕೊಳ್ಳುವುದು ಇದೇನು ಮೊದಲಲ್ಲ. ಈ ಹಿಂದೆ ಹಲವು ಸಲ ಎಡವಟ್ಟು ಮಾಡಿಕೊಂಡು ಬೈಯಿಸಿಕೊಂಡಿರುವ ಉದಾಹರಣೆಗಳು ಇವೆ.