ಅಧಿಕಾರಿಗಳನ್ನ ಹೊರಗೆ ಕಳುಹಿಸಿ ಮೀಟಿಂಗ್: ಉಪ ಚುನಾವಣೆಗೆ ರಣ ತಂತ್ರ ಹೆಣೆದ ಸಿಎಂ

ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರ ಬೈ ಎಲೆಕ್ಷನ್ ಡೇಟ್ ಫಿಕ್ಸ್ ಆಗುತ್ತಿದ್ದಂತೆಯೇ ರಾಜ್ಯ ರಾಜಕಾರಣ ಗರಿಗೆದರಿದ್ದು, ಗೆಲುವಿಗೆ ತಂತ್ರಗಳು ರೆಡಿಯಾಗುತ್ತಿವೆ.

cm bsy discusses about By Elections With Minister rbj

ಬೆಂಗಳೂರು, (ಮಾ.17): ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಉಪಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

 ಹೌದು...ಉಪ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನಲೆ ತಕ್ಷಣದಿಂದಲೇ ಸಚಿವರು ಕಾರ್ಯಪ್ರವೃತ್ತರಾಗಿ ಹೆಚ್ಚಿನ‌ ಸಮಯವನ್ನು ಆಯಾ ಕ್ಷೇತ್ರಕ್ಕೆ ನೀಡಬೇಕೆಂಬ ಬಗ್ಗೆ ಇಂದು (ಬುಧವಾರ) ಸಂಜೆ ನಡೆದ ಸಂಪುಟ ಭೆಯಲ್ಲಿ ಚರ್ಚೆ ನಡೆದಿದೆ.

ಸಭೆಯ ಅಜೆಂಡಾ ವಿಚಾರ ಮುಗಿಸಿದ ಬಳಿಕ ಅಧಿಕಾರಿಗಳನ್ನು ಹೊರಗೆ ಕಳಿಸಿ ಅನೌಪಚಾರಿಕವಾಗಿ ಉಪ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ 3 ಕ್ಷೇತ್ರಗಳ ಉಪಚುನಾವಣೆಗಳಿಗೆ ದಿನಾಂಕ ಘೋಷಣೆ

ಉಪ ಚುನಾವಣೆ ನಡೆಯುತ್ತಿರುವ ಮೂರು ಕಡೆಯೂ ನಮ್ಮ ಅಭ್ಯರ್ಥಿಗಳೇ ಗೆಲ್ಲಬೇಕು, ಕಾಂಗ್ರೆಸ್‌ನಿಂದ ಪ್ರಬಲ‌ ಪೈಪೋಟಿ ಎದುರಾಗಬಹುದು, ನಾವು ಅಷ್ಟೇ ಪ್ರಮಾಣದಲ್ಲಿ ಪ್ರಯತ್ನ ಮಾಡಬೇಕು.

 ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟುಕೊಡಬಾರದು ಎಂಬ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ. ಅಧಿವೇಶನವನ್ನು‌ ಮೊಟಕುಗೊಳಿಸುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.

ಏಪ್ರಿಲ್ 17ರಂದು ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಮೇ.02ರಂದು ಫಲಿತಾಂಶ ಪ್ರಕರವಾಗಲಿದೆ.

Latest Videos
Follow Us:
Download App:
  • android
  • ios