Asianet Suvarna News Asianet Suvarna News

ತಮ್ಮ ನಾಯಕತ್ವದ ಬಗ್ಗೆ ಸಿಎಂ ಕುತೂಹಲಕಾರಿ ಪರೋಕ್ಷ ಸಂದೇಶ?

  • 130ಕ್ಕೂ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸವಾಲು
  • ಅಧಿಕಾರಕ್ಕೆ ತರುವ ಸವಾಲು ನಮ್ಮ ಮುಂದಿದೆ ಎಂದ ಮುಖ್ಯಮಂತ್ರಿ 
  • ನಾಯಕತ್ವದ ಬದಲಾವಣೆ ಬಗ್ಗೆ ಆಡಳಿತಾರೂಢ ಬಿಜೆಪಿಯ ಆಂತರ್ಯದಲ್ಲಿ ಇನ್ನೂ ತೆರೆಮರೆಯ ಚಟುವಟಿಕೆಗಳು 
CM BS Yediyurappa indirect Clue About his leadership snr
Author
Bengaluru, First Published Jul 1, 2021, 7:32 AM IST

 ಬೆಂಗಳೂರು (ಜು.01):  ಎರಡು ವರ್ಷಗಳ ನಂತರ 130ಕ್ಕೂ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸವಾಲು ನಮ್ಮ ಮುಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ನಾಯಕತ್ವದ ಬದಲಾವಣೆ ಬಗ್ಗೆ ಆಡಳಿತಾರೂಢ ಬಿಜೆಪಿಯ ಆಂತರ್ಯದಲ್ಲಿ ಇನ್ನೂ ತೆರೆಮರೆಯ ಚಟುವಟಿಕೆಗಳು ಮುಂದುವರೆದಿರುವ ಮಧ್ಯೆಯೇ ಯಡಿಯೂರಪ್ಪ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಜಯಭೇರಿ ಬಾರಿಸಲು ತಮ್ಮ ನಾಯಕತ್ವ ಮುಂದುವರೆಯುವುದು ಅಗತ್ಯ ಎಂಬ ಸಂದೇಶವನ್ನೂ ಅವರು ಪರೋಕ್ಷವಾಗಿ ನೀಡಿದಂತಾಗಿದೆ.

ರಾಜಕೀಯ ಬದಿಗಿಟ್ಟು ಆಡಳಿತಕ್ಕೆ ಸಿಎಂ ಚುರುಕು: ಯುವಕರೂ ನಾಚುವಂತೆ ಸತತ ಸಭೆ! ...

ಬುಧವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬರುವ ಎರಡು ವರ್ಷಗಳಲ್ಲಿ ಇನ್ನೂ ಒಳ್ಳೆಯ ಕೆಲಸ ಮಾಡಬೇಕಾಗಿದೆ. ಎರಡು ವರ್ಷದ ನಂತರ 130ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸವಾಲು ನಮ್ಮ ಮುಂದಿದೆ. ಅದಕ್ಕಾಗಿ ಈಗಿನಿಂದಲೇ ಬರುವ ಎರಡು ವರ್ಷಗಳ ಕಾಲ ಎಲ್ಲ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆಯನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ರಾಜ್ಯದ ಜನತೆಗೆ ನೀಡುತ್ತೇನೆ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದರು.

ಮುಂದಿನ ಎರಡು ವರ್ಷ ಬಿಎಸ್‌ವೈಯೇ ಸಿಎಂ: ಸಚಿವ ನಿರಾಣಿ ...

ರಾಜ್ಯ ಪ್ರವಾಸ:  ಮುಂದಿನ ವಾರದಿಂದ ರಾಜ್ಯ ಪ್ರವಾಸ ಆರಂಭಿಸುತ್ತೇನೆ. 10-12 ದಿನಗಳಿಗೊಮ್ಮೆ ಜಿಲ್ಲೆಯೊಂದಕ್ಕೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡು ಬರುತ್ತೇನೆ ಎಂದು ಇದೇ ವೇಳೆ ತಿಳಿಸಿದರು. ತಮ್ಮ ವಿರುದ್ಧ ಬಿಜೆಪಿಯ ಮೂವರು ನಾಯಕರು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ತಮ್ಮ ಆಪ್ತರೊಂದಿಗೆ ಆಡಿರುವ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಾನು ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ಯಾವುದೇ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲವನ್ನೂ ಶಾಂತವಾಗಿ ಕೇಳುತ್ತಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.

Follow Us:
Download App:
  • android
  • ios