ಬಿಎಸ್‌ವೈ ಸಂಪುಟದ ಹೊಸ ಸಚಿವರಿಗೆ ಸಿಕ್ತು ಖಾತೆ, ಇಲ್ಲಿದೆ ಫೈನಲ್ ಲಿಸ್ಟ್

ಯಡಿಯೂರಪ್ಪ ಸರ್ಕಾರದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ| ನೂತನ ಸಚಿವರಿಗೆ ಸಿಕ್ತು ಖಾತೆ| ಯಾರಿಗೆ ಯಾವ ಖಾತೆ? ಇಲ್ಲಿದೆ ಫೈನಲ್ ಲಿಸ್ಟ್

CM BS Yediyurappa government cabinet expansion portfolios allotted finally

ಬೆಂಗಳೂರು[ಫೆ.10]: ಅಂತೂ ಇಂತೂ ಯಡಿಯೂರಪ್ಪ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಫೈನಲ್ ಪಟ್ಟಿ ರೆಡಿಯಾಗಿದೆ. ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸಿದ್ಧಪಡಿಸಿರುವ ಈ ಪಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ. ನಿರೀಕ್ಷೆಯಂತೆ ರಮೇಶ್ ಜಾರಕಿಹೊಳಿ ಹಾಗೂ ಎಸ್. ಟಿ. ಸೋಮಶೇಖರ್ ತಮಗೆ ಬೇಕಾದ ಖಾತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿ. ಎಸ್. ವೈ ಅಳೆದು ತೂಗಿ ಈ ಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರಕ್ಕೆ ನನಗೆ ಮನಸ್ಸಿರಲಿಲ್ಲ: ರಮೇಶ್‌ ಜಾರಕಿಹೊಳಿ

ಯಾರಿಗೆ ಯಾವ ಖಾತೆ?

* ರಮೇಶ್ ಜಾರಕಿಹೊಳಿ- ಜಲಸಂಪನ್ಮೂಲ ಖಾತೆ| ಬೇಡಿಕೆಯಂತೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಡಿ. ಕೆ. ಶಿವಕುಮಾರ್ ನಿಭಾಯಿಸುತ್ತಿದ್ದ ಖಾತೆ ಗಿಟ್ಟಿಸಿಕೊಳ್ಳುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಬಿಎಸ್‌ವೈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಇದನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು.

* ಆನಂದ್ ಸಿಂಗ್ - ಆಹಾರ ಮತ್ತು ನಾಗರಿಕರ ಪೂರೈಕೆ ಖಾತೆ| ಈ ಹಿಂದೆ ಈ ಖಾತೆಯನ್ನು ಶಶಿಕಲಾ ಜೊಲ್ಲೆ ನಿಭಾಯಿಸುತ್ತಿದ್ದರು.

* ಶ್ರೀಮಂತ್ ಪಾಟೀಲ್ - ಜವಳಿ ಖಾತೆ

* ಕೆ. ಗೋಪಾಲಯ್ಯ- ಸಣ್ಣ ಕೈಗಾರಿಕೆ, ಸಕ್ಕರೆ ಖಾತೆ

* ಎಸ್.ಟಿ. ಸೋಮಶೇಖರ್- ಸಹಕಾರ ಖಾತೆ

* ಬಿ. ಸಿ. ಪಾಟೀಲ್- ಅರಣ್ಯ ಖಾತೆ

* ಡಾ. ಕೆ. ಸುಧಾಕರ್- ವೈದ್ಯಕೀಯ ಶಿಕ್ಷಣ ಸಚಿವ| ಈ ಹಿಂದೆ ಡಿಸಿಎಂ ಅಶ್ವತ್ಥ ನಾರಾಯಣ ಈ ಖಾತೆಯನ್ನು ನಿಭಾಯಿಸುತ್ತಿದ್ದರು.

* ಭೈರತಿ ಬಸವರಾಜ್-  ನಗರಾಭಿವೃದ್ಧಿ ಖಾತೆ (ಬೆಂಗಳೂರು ನಗರ ಹೊರತುಪಡಿಸಿ)

* ನಾರಾಯಣಗೌಡ- ಪೌರಾಡಳಿತ ಖಾತೆ| ಈ ಹಿಂದೆ ಈ ಖಾತೆ ಕಂದಾಯ ಸಚಿವರಾಗಿರುವ ಆರ್. ಅಶೋಕ್ ಹೆಚ್ಚುವರಿ ಖಾತೆಯಾಗಿ ನಿಭಾಯಿಸುತ್ತಿದ್ದರು.

* ಶಿವರಾಮ್ ಹೆಬ್ಬಾರ್- ಕಾರ್ಮಿಕ ಖಾತೆ

CM BS Yediyurappa government cabinet expansion portfolios allotted finally

ಡಿಕೆಶಿ ಬಳಿಯಿದ್ದ ಖಾತೆಯೇ ಬೇಕೆಂದು ಪಟ್ಟು: ಜಲಸಂಪನ್ಮೂಲ ಖಾತೆ ಜಾರಕಿಹೊಳಿಗೆ?
 

ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios