ಕಾರ್ಮಿಕ ಮಹಿಳೆಯರಿಗೆ ಬಸ್‌ಪಾಸ್‌ ಕೊಡದೇ ಏಪ್ರಿಲ್‌ ಫೂಲ್‌ ಮಾಡಿದ ಸಿಎಂ ಬೊಮ್ಮಾಯಿ : ಡಿಕೆ ಶಿವಕುಮಾರ ಟೀಕೆ

ರಾಜ್ಯದ ಬಜೆಟ್‌ ಮಂಡನೆ ವೇಳೆ ಏ.1ರಿಂದ ಎಲ್ಲ ಕಾರ್ಮಿಕ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ನೀಡುವುದಾಗಿ ಘೋಷಣೆ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್‌ ಫೋಲ್‌ ಮಾಡಿದ್ದಾರೆ.

CM Bommai made an April fool for working women DK Shivakumar criticizes sat

ಬೆಂಗಳೂರು (ಏ.02): ಕರ್ನಾಟಕ ರಾಜ್ಯ 2023-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಎಲ್ಲ ಕಾರ್ಮಿಕ ಮಹಿಳೆಯರಿಗೆ ಏ.1ರಿಂದ ಉಚಿತ ಬಸ್‌ ಪಾಸ್‌ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಹಿಳೆಯರಿಗೆ ಏಪ್ರಿಲ್‌ ಫೂಲ್‌ ಮಾಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವಾಗಲೂ ಫೂಲ್ ಮಾಡುವ ಕೆಲಸ ಮಾಡಿದ್ದಾರೆ. ರಾಜ್ಯ ಬಜೆಟ್‌ ಮಂಡನೆಯ ವೇಳೆ ರಾಜ್ಯದ ಎಲ್ಲ ದುಡಿಯುವ ವರ್ಗದ ಕಾರ್ಮಿಕ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ, ಏಪ್ರಿಲ್‌ 1 ಹೋಗಿ 2ನೇ ದಿನಾಂಕ ಬಂದರೂ ಈ ಘೋಷಣೆ ಜಾರಿಗೆ ಬರಲೇ ಇಲ್ಲ. ಇನ್ನು ಎಲ್ಲ ಮಹಿಳೆಯರಿಗೆ ಸಿಎಂ ಬೊಮ್ಮಾಯಿ ಅವರು ಏಪ್ರಿಲ್‌ ಫೂಲ್‌ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌- ಜೆಡಿಎಸ್‌ ಬೆಂಬಲಿಗರ ನಡುವೆ ಮಾರಾಮಾರಿ: ದೊಣ್ಣೆ, ಕಲ್ಲುಗಳಿಂದ ಹಲ್ಲೆ

ಕಾನೂನು ಬದ್ಧವಾಗಿ ಮೀಸಲಾತಿ ಕೊಡಿ: ಮೀಸಲಾತಿಯಲ್ಲಿ ಕೋಲಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಭರವಸೆ ಕೊಟ್ಟಿದ್ದರು. ಕೋಲಿ ಸಮುದಾಯಕ್ಕೆ ಅನ್ಯಾಯ ಆಗಿದೆ. ಲಿಂಗಾಯತ ಹಾಗೂ ಒಕ್ಕಲಿಗ ಮೀಸಲಾತಿ ಹೆಚ್ಚಳ ಕೇಳಿದ್ದೆವು. ಆದರೆ, ಅಲ್ಪಸಂಖ್ಯಾತ ಮುಸ್ಲಿಮರಿಗಿದ್ದ ಮೀಸಲಾತಿ ತೆಗೆದು ಎರಡು ಪರ್ಸೆಂಟ್ ಹೆಚ್ಚು ಮಾಡಿದ್ದಾರೆ. ನಮಗೆ ಬೇರೆಯವರ ಮೀಸಲಾತಿ ಬೇಡ. ಕಾನೂನು ಬದ್ಧವಾಗಿದೆ ಮೀಸಲಾತಿ ಮಾಡಿ. ಬಿಜೆಪಿಗೆ ಬೆಂಬಲ ಕೊಟ್ಟ ಸಮುದಾಯ ದಂಗೆ ಏಳ್ತಾ ಇದೆ. ಎಲ್ಲರಿಗೂ ಏಪ್ರಿಲ್ ಪೂಲ್ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಬಿಜೆಪಿಯ ತಪ್ಪನ್ನು ರಿಪೇರಿ ಮಾಡುತ್ತೇವೆ ಎಂದು ಹೇಳಿದರು.

ಎರಡು ಕ್ಷೇತ್ರ ಕೊಡುವ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತದೆ: ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ಕೊಡಿ‌ ಎಂದು ನಾವು ಕೇಳಿಲ್ಲ. ಮುಸ್ಲಿಂರ ಮೀಸಲಾತಿಯನ್ನು ಕಿತ್ತು ಪಂಚಮಸಾಲಿ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಶೇ.2 ಮತ್ತು ಶೇ.2 %ರಷ್ಟು ಮೀಸಲಾತಿ ಹಂಚಿದ್ದಾರೆ‌. ಸರ್ಕಾರ ಮಾಡಿರುವ ತಪ್ಪು ನಾವು ಸರಿ ಮಾಡ್ತೇವೆ. ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವನ್ನು ನಾವು ಬೇಡ ಎನ್ನಲು ಆಗುತ್ತದೆಯೇ? ಆಸೆ, ಕಾರ್ಯಕರ್ತರು, ಅಭಿಮಾನಿಗಳು ಅಭಿಮಾನದಿಂದ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಕೇಳುತ್ತಾರೆ. ಹೈಕಮಾಂಡ್ ಹೇಳಿದಂತೆ ಎಲ್ಲರೂ ಕೇಳುತ್ತಾರೆ. ವರುಣದಿಂದ ವಿಜಯೇಂದ್ರ ಸ್ಪರ್ಧೆ ಮಾಡಲ್ಲ‌‌ ಎಂಬ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಅವರ ಪಾರ್ಟಿ ಬಗ್ಗೆ ಮಾತಾಡುತ್ತಾರೆ‌. ನಾನು ನನ್ನ ಪಾರ್ಟಿ ಬಗ್ಗೆ ಮಾತಾಡುತ್ತೇನೆ ಎಂದು ಹೇಳೀದರು.

ಸೆಮಿ ಫೈನಲ್‌ ಹಂತ ತಲುಪಿದ ಹಾಸನ ಟಿಕೆಟ್‌ ದಂಗಲ್, ನಾಳೆ 2ನೇ ಪಟ್ಟಿ ಬಿಡುಗಡೆ

ಕಾಂಗ್ರೆಸ್‌ ಮೇಲೆ ಗರಂ ಆದ ಲಿಂಗಾಯತ ಸಮುದಾಯ: ಕಾಂಗ್ರೆಸ್ ನಾಯಕರ ನಡೆಗೆ ಮತ್ತೆ ಗರಂ ಆದ ಲಿಂಗಾಯತ ಸಮುದಾಯ. ಟಿಕೇಟ್ ಹಂಚಿಕೆಯಲ್ಲಿ ಲಿಂಗಾಯತರಿಗೆ ಮಾನ್ಯತೆ ನೀಡದ ಹಿನ್ನೆಲೆಯಲ್ಲಿ ಡಿಕೆಶಿವಕುಮಾರ್, ಸಿದ್ದರಾಮಯ್ಯ, ‌ಮಲ್ಲಿಕಾರ್ಜುನ ಖರ್ಗೆಗೆ ಲಿಂಗಾಯತ ಮಹಾಸಭಾ ಗರಂ ಆಗಿ ಪತ್ರವನ್ನು ಬರೆದಿದೆ. ಲಿಂಗಾಯತ ಮಠಾಧೀಶರ ಮಾತಿಗೆ ಮನ್ನಣೆ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಲಿಂಗಾಯತ ಸಮುದಾಯಕ್ಕೆ ಒಂದೇ ಒಂದು ಟಿಕೇಟ್ ನೀಡಿಲ್ಲ.  ಎರಡನೇ ಪಟ್ಟಿಯಲ್ಲೂ ಅವಕಾಶ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಮುಂಬರುವ ಚುನಾವಣೆಯಲ್ಲಿ ಇದರ ಸಾಧಕ ಬಾಧಕ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ರಾಜ್ಯ ನಾಯಕರಿಗೆ ಪತ್ರದ ಮೂಲಕ ಎಚ್ಚರಿಕೆ ನೀಡಿದ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಹಾಗೂ ಲಿಂಗಾಯತ ಸಮಾನ ಮನಸ್ಕರ ವೇದಿಕೆಯಿಂದ ಕಾಂಗ್ರೆಸ್‌ ನಾಯಕರಿಗೆ ಪತ್ರ ಬರೆಯಲಾಗಿದೆ.

Latest Videos
Follow Us:
Download App:
  • android
  • ios