Karnataka Politics: ಸಿದ್ದು ಹೇಳೋದೆಲ್ಲ ಉಲ್ಟಾ ಆಗುತ್ತೆ: ಸಿಎಂ ಬೊಮ್ಮಾಯಿ

*  ಎಚ್‌ಡಿಕೆ, ಬಿಎಸ್‌ವೈ ಸಿಎಂ ಆಗಲ್ಲ ಎಂದಿದ್ದರು, ಸುಳ್ಳಾಯ್ತು
*  ಈಗ ಬಿಜೆಪಿ ಸೋಲುತ್ತೆ ಅಂತಾರೆ, ಅದೂ ಸುಳ್ಳಾಗುತ್ತೆ
*  ಪ್ರಸ್ತುತ ಸನ್ನಿವೇಶದಲ್ಲಿ ಅಧಿಕಾರವಿದ್ದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು ಬಿಜೆಪಿ ಮಾತ್ರ 
 

CM Basavaraj Bomnmai Slams on Siddaramaiah grg

ಬೆಂಗಳೂರು(ಮಾ.12):  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಏನು ಹೇಳುತ್ತಾರೋ, ಫಲಿತಾಂಶ ಅದಕ್ಕೆ ವಿರುದ್ಧವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಲೇವಡಿ ಮಾಡಿದ್ದಾರೆ. ಶುಕ್ರವಾರ ಬಜೆಟ್‌(Karnataka Budget) ಮೇಲಿನ ಚರ್ಚೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ಸಂದರ್ಭದಲ್ಲಿ ಬೊಮ್ಮಾಯಿ ಅವರು ಮಧ್ಯಪ್ರವೇಶಿಸಿ ಮಾತನಾಡಿದರು.

ಸಿದ್ದರಾಮಯ್ಯ ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗುತ್ತದೆ. 2018ರ ಚುನಾವಣೆ ವೇಳೆ ನಮ್ಮಪ್ಪನಾಣೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದರು. ಅವರಿಬ್ಬರೂ ಮುಖ್ಯಮಂತ್ರಿಯಾದರು. ತಾವು ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

Karnataka Politics: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಬಿಜೆಪಿ ಸರ್ಕಾರ ಕಿತ್ತೊಗೆಯಲು ಹೋರಾಟ: ಸಿದ್ದು

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ(Assembly Elections) ಅಧಿಕಾರದಲ್ಲಿದ್ದ ನಾಲ್ಕು ರಾಜ್ಯಗಳಲ್ಲಿ ಗೆದ್ದಿದ್ದೀರಿ ಎಂಬ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಅಧಿಕಾರವಿದ್ದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು ಬಿಜೆಪಿ(BJP) ಮಾತ್ರ. ಪಂಜಾಬ್‌ನಲ್ಲಿ ಅಧಿಕಾರದಲ್ಲಿ ಇದ್ದೀರಲ್ಲ, ಅಲ್ಲೂ ನೀವೇ ಗೆಲ್ಲಬೇಕಿತ್ತು. ಜನರ ನಾಡಿಮಿಡಿತ ಇವರೊಬ್ಬರಿಗೆ ಗೊತ್ತಿರುವುದಾ? ಚುನಾವಣೆಯಲ್ಲಿ ಗೆದ್ದೆವು ಎಂದು ಹೇಳಿದ್ದವರು ಸೋತಿದ್ದಾರೆ. ಅಧಿಕಾರದಲ್ಲಿದ್ದುಕೊಂಡು ಮತ್ತೆ ಗೆದ್ದು ಬರುವುದೇ ಮುಖ್ಯ ಎಂದು ತಿರುಗೇಟು ನೀಡಿದರು.

ನಮ್ಮ ಬಜೆಟ್‌ ಇಟ್ಟುಕೊಂಡು ಜನರ ಬಳಿಗೆ ಹೋಗಿ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ನಮ್ಮ ನಾಯಕರಾದ ಯಡಿಯೂರಪ್ಪ ಹೇಳಿದ್ದಾರೆ. ಅವರಿಗೆ ಅಧಿಕಾರ ಇರಲಿ, ಇಲ್ಲದಿರಲಿ. ಜನರ ಹೃದಯಲ್ಲಿ ವಿಶಿಷ್ಟವಾದ ಸ್ಥಾನ ಇದೆ. ಎಂತಹ ಸಮಯದಲ್ಲಿಯೂ ಎಲ್ಲವನ್ನೂ ಸಮಚಿತ್ತದಿಂದ ತೆಗೆದುಕೊಳ್ಳುವ ಶಕ್ತಿ ಇದೆ. ಎಷ್ಟೇ ನೋವಿದ್ದರೂ ಎಲ್ಲರಿಗಾಗಿ ಒಪ್ಪಿಕೊಂಡಿದ್ದಾರೆ. ಅಂತಹ ನಿದರ್ಶನಗಳನ್ನು ನೋಡಿದ್ದೇನೆ ಎಂದು ಇದೇ ವೇಳೆ ಹೇಳಿದರು.

Russia-Ukraine Crisis: ಕೇಂದ್ರದ ನಿರ್ಲಕ್ಷ್ಯದಿಂದಲೇ ನವೀನ್‌ ಸಾವು: ಸಿದ್ದರಾಮಯ್ಯ

ದೇಶ, ರಾಜ್ಯವನ್ನು ಆರ್ಥಿಕ ದಿವಾಳಿಯಾಗಿಸಿದ ಬಿಜೆಪಿ ಸರ್ಕಾರ, ಸಿದ್ದರಾಮಯ್ಯ ಟೀಕೆ

ಪ್ರಧಾನಿ ನರೇಂದ್ರಮೋದಿ (Narendra Modi) ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ದೇಶ ಮತ್ತು ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯನ್ನಾಗಿ ಮಾಡಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಸಾಲಿಗ್ರಾಮ ತಾಲೂಕಿನ ತಂದ್ರೆಕೊಪ್ಪಲು (Tandreoppal) ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕೋಣಮ್ಮ ತಾಯಿ ದೇವಾಲಯ (Konamma Temple) ಉದ್ಘಾಟನೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ 5 ಲಕ್ಷದ 18 ಸಾವಿರ ಕೋಟಿ ಮತ್ತು ರಾಜ್ಯ ಸರ್ಕಾರ 2 ಲಕ್ಷದ 20 ಸಾವಿರ ಕೋಟಿ ಸಾಲ ಮಾಡಿದ್ದು, ಜನರನ್ನು ಸಾಲದ ಸುಳಿಯಲ್ಲಿ ಮುಳುಗಿಸಿದ್ದು, ಇದು ಅಭಿವೃದ್ಧಿ ಕಾರ್ಯಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರ್ಕಾರಗಳು ಸಾಲ ಮಾಡುವುದು ಸಹಜ, ಆದರೆ ಆ ಹಣದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಸರ್ಕಾರಕ್ಕೆ ಮತ್ತು ದೇಶಕ್ಕೆ ಆಸ್ತಿಯನ್ನು ಮಾಡದೇ ಕೇವಲ ಸಂಬಳ ನೀಡಲು ಸಾಲ ಮಾಡುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು. ನಾನು ಬಜೆಟ್ ಮಂಡಿಸುವ ವೇಳೆ ಕೇವಲ 13 ಸಾವಿರ ಕೋಟಿ ಸಾಲವಿತ್ತು. ಆದರೆ, ಈಗ ಎಲ್ಲಾ ಮಿತಿಗಳನ್ನು ಮೀರಿಯಾಗಿದೆ ಎಂದು ಸಿದ್ಧರಾಮಯ್ಯ ಹೇಳಿದರು. ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದುಕೊಂಡಿದೆ. ಜನರ ಬೆಂಬಲದಿಂದ ಅವರು ಅಧಿಕಾರಕ್ಕೆ ಏರಿಲ್ಲ ಎಂದು ಟೀಕೆ ಮಾಡಿದ್ದರು. 
 

Latest Videos
Follow Us:
Download App:
  • android
  • ios