Asianet Suvarna News Asianet Suvarna News

Jana Sankalpa Yatra: ಕರ್ನಾಟಕ ಕಾಂಗ್ರೆಸ್‌ಗೆ ಎಟಿಎಂ ಆಗಿತ್ತು: ಸಿಎಂ ಬೊಮ್ಮಾಯಿ

ದೇಶದಲ್ಲಿ ಕಾಂಗ್ರೆಸ್‌ ದಿವಾಳಿ ಹಾದಿ ಹಿಡಿದಿದ್ದ ಸಂದರ್ಭದಲ್ಲಿ ಕರ್ನಾಟಕ, ಕಾಂಗ್ರೆಸ್‌ಗೆ ಎಟಿಎಂ ಆಗಿತ್ತು. ದೇಶದ ಎಲ್ಲ ಚುನಾವಣೆಗೂ ರಾಜ್ಯದಿಂದಲೇ ಹಣ ಹೋಗುತ್ತಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. 

CM Basavaraj Bommai Slams On Congress Over Jana Sankalpa Yatra gvd
Author
First Published Oct 14, 2022, 2:00 AM IST

ಹೂವಿನಹಡಗಲಿ (ಅ.14): ದೇಶದಲ್ಲಿ ಕಾಂಗ್ರೆಸ್‌ ದಿವಾಳಿ ಹಾದಿ ಹಿಡಿದಿದ್ದ ಸಂದರ್ಭದಲ್ಲಿ ಕರ್ನಾಟಕ, ಕಾಂಗ್ರೆಸ್‌ಗೆ ಎಟಿಎಂ ಆಗಿತ್ತು. ದೇಶದ ಎಲ್ಲ ಚುನಾವಣೆಗೂ ರಾಜ್ಯದಿಂದಲೇ ಹಣ ಹೋಗುತ್ತಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೋದಿಯವರು ಪ್ರಧಾನಿಯಾದ ನಂತರ ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿ ಹೋಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಕರ್ನಾಟಕ, ಕಾಂಗ್ರೆಸ್‌ಗೆ ಎಟಿಎಂ ಆಗಿತ್ತು. 

ನಿರಂತರ ಕಪ್ಪಕಾಣಿಕೆ ಸಲ್ಲಿಕೆಯಿಂದ ಇಡೀ ರಾಜ್ಯವನ್ನೇ ಕಾಂಗ್ರೆಸ್‌ ಲೂಟಿ ಮಾಡಿದೆ. ಅದಕ್ಕಾಗಿಯೇ ಆ ಪಕ್ಷದ ರಾಜ್ಯಾಧ್ಯಕ್ಷರು ಇಂದಿಗೂ ವಿಚಾರಣೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ಬಳ್ಳಾರಿಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದ ಸೋನಿಯಾ ಗಾಂಧಿ ಈ ಕ್ಷೇತ್ರಕ್ಕೆ ರಾಜಿನಾಮೆ ನೀಡಿ, ಕೈ ಕೊಟ್ಟು ಉತ್ತರ ಪ್ರದೇಶಕ್ಕೆ ಹಾರಿ ಹೋದರು. .3 ಸಾವಿರ ಕೋಟಿ ಸೋನಿಯಾ ಪ್ಯಾಕೇಜ್‌ ಘೋಷಣೆಯ ಹಣ ಎಲ್ಲಿದೆ? ಯಾರಿಗೆ ಮೋಸ ಮಾಡುತ್ತಿದ್ದೀರಿ, ಈಗ ಮತ್ತೆ ಜನರಿಗೆ ಯಾವ ಮೋಸ ಮಾಡಲು ಬಂದಿದ್ದೀರಿ ಎಂದು ಜನ ರಾಹುಲ್‌ ಗಾಂಧಿಯನ್ನು ಪ್ರಶ್ನಿಸಬೇಕಿದೆ ಎಂದು ಹೇಳಿದರು.

Hijab Case: ಹಿಜಾಬ್‌ ವಿದ್ಯಾರ್ಥಿನಿಯರಿಗೆ ಟೆರರ್‌ ಲಿಂಕ್‌ ಇದೆ: ಈಶ್ವರಪ್ಪ

ರಾಹುಲ್‌ ಕಾಲಿಟ್ಟಕಡೆ ಕಾಂಗ್ರೆಸ್‌ ಮಟಾಷ್‌!: ರಾಹುಲ್‌ ಗಾಂಧಿ ಹೋದ ಕಡೆಗಳಲ್ಲಿ ಕಾಂಗ್ರೆಸ್‌ ಮಟಾಷ್‌ ಆಗುತ್ತದೆ. ದೇಶದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್‌ ಇಲ್ಲದಂತಾಗಿದೆ ಎಂಬ ಸಚಿವ ಶ್ರೀರಾಮುಲು ಹೇಳಿಕೆಯನ್ನು ಸಮರ್ಥಿಸಿದ ಬೊಮ್ಮಾಯಿ, ಕಾಂಗ್ರೆಸ್‌, ಅದೊಂದು ಅನಿಷ್ಟಪಕ್ಷ, ಅಲ್ಲಿಗೆ ಹೋದವರೆಲ್ಲಾ ಸೋಲುತ್ತಾರೆ. ಈ ಹಿಂದೆ ನಮ್ಮ ನೆಚ್ಚಿನ ನಾಯಕರಾಗಿದ್ದ ಎಂ.ಪಿ.ಪ್ರಕಾಶ್‌ ಕೂಡಾ ಕಾಂಗ್ರೆಸ್‌ಗೆ ಹೋಗಿ ಸೋಲುಂಡಿದ್ದರು. ಆದ್ದರಿಂದ ಆ ಅನಿಷ್ಟಪಕ್ಷದ ಕಡೆಗೆ ಯಾರು ಹೋಗಬೇಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ವಾಹನಕ್ಕೆ ಹಳ್ಳದ ನೀರು ಅಡ್ಡಿ: ಮಳೆಯಿಂದಾಗಿ ಹೂವಿನಹಡಗಲಿಯಿಂದ ಹಿರೇಹಡಗಲಿಗೆ ಸಂಪರ್ಕ ಕಲ್ಪಿಸುವ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿನ ಹಳ್ಳದಲ್ಲಿ ಪ್ರವಾಹ ಬಂದಿತ್ತು. ಹಗರನೂರು ಕೆರೆ ಕೋಡಿ ಬಿದ್ದ ಕಾರಣ ರಾಜ್ಯ ಹೆದ್ದಾರಿ ಮೇಲೆ ನೀರು ತುಂಬಿ ಹರಿಯುತ್ತಿತ್ತು. ನೀರನ್ನು ಲೆಕ್ಕಿಸದೆ ಸಿಎಂ, ಸಚಿವರ ವಾಹನಗಳು ಹಳ್ಳದ ನೀರಿನಲ್ಲೇ ಸಂಚರಿಸಿದವು. ಅಲ್ಲದೆ, ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಬದಲಿಗೆ ಹಗರಿಬೊಮ್ಮನಹಳ್ಳಿಯಿಂದ ಹೂವಿನಹಡಗಲಿಗೆ ರಸ್ತೆ ಮೂಲಕ ಆಗಮಿಸಿದರು.

ಸಿಎಂಗೆ ಮನವಿ ಪತ್ರಗಳ ಸುರಿಮಳೆ: ಜನಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಬೊಮ್ಮಾಯಿ ಅವರಿಗೆ ಮನವಿ ಪತ್ರಗಳ ಸುರಿಮಳೆಯೇ ಹರಿದು ಬಂತು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಹಾಗೂ ಹೂವಿನಹಡಗಲಿಯಲ್ಲಿ ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಮನವಿ ಪತ್ರ ಸಲ್ಲಿಸಿತು. ಇದೇ ವೇಳೆ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಸಾರಿಗೆ ನೌಕರರು ಮನವಿ ಪತ್ರ ಸಲ್ಲಿಸಿದರು. ಮಳೆ ಹಾನಿಯಿಂದ ರೈತರು ಅಪಾರ ನಷ್ಟಹೊಂದಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘದವರು ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ, ಹಾಲಸ್ವಾಮಿ ಮಠದಲ್ಲಿ ಮಠಾಧೀಶರ ಧಾರ್ಮಿಕ ಪರಿಷತ್‌ ವತಿಯಿಂದ ಕೊಟ್ಟೂರಿನ ಕೆರೆಗಳನ್ನು ತುಂಬಿಸುವ ಮನವಿ ಸಲ್ಲಿಸಲಾಯಿತು.

ಸಿಎಂ ವೆಲ್‌ಕಮ್‌ ಬೋರ್ಡ್‌ಗೆ ಯಡಿಯೂರಪ್ಪ ಆಕ್ಷೇಪ: ಹೂವಿನಹಡಗಲಿಯಲ್ಲಿ ಯಾತ್ರೆ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರನ್ನು ಬೆಂಬಲಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಆಗ ಕಾರ್ಯಕರ್ತರು, ತಮ್ಮ ನಾಯಕರ ಪರವಾಗಿ ‘ಸಿಎಂ ವೆಲ್‌ಕಮ್‌’ ಬೋರ್ಡ್‌ ಎತ್ತಿ ಹಿಡಿದು ಕೇಕೆ ಹಾಕಿದರು. ಇದರಿಂದ ಸಿಟ್ಟಿಗೆದ್ದ ಬಿಎಸ್‌ವೈ, ಏಯ್‌, ಸುಮ್ಮನೇ ಕುಳಿತುಕೊಳ್ಳಿ, ಇವೆಲ್ಲಾ ನಡೆಯುವುದಿಲ್ಲವೆಂದು ಗದರಿಸಿದರು.

ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್‌ ತತ್ತರ: ಸಿಎಂ ಬೊಮ್ಮಾಯಿ

10 ಆಕಾಂಕ್ಷಿಗಳ ಪ್ರತಿಜ್ಞೆ ಮಾಡಿಸಿದ ಸಿಎಂ: ಬಿಜೆಪಿ ಈ ಬಾರಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಹೂವಿನಹಡಗಲಿ ಕ್ಷೇತ್ರದ ವಿಚಾರದಲ್ಲಿ ನಮ್ಮೊಳಗಿರುವ ವ್ಯತ್ಯಾಸದಿಂದ ಪಕ್ಷಕ್ಕೆ ಸೋಲಾಗಿತ್ತು. ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ. ಎಲ್ಲರೂ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಬೊಮ್ಮಾಯಿ ಸೂಚಿಸಿದರು. ವೇದಿಕೆಯ ಮೇಲಿದ್ದ 10 ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳನ್ನು ಎದ್ದು ನಿಲ್ಲಿಸಿ, ‘ನಮ್ಮಲ್ಲಿರುವ ವೈಮನಸ್ಸು ಮರೆತು, ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು, ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರಿಗೆ ನಾವೆಲ್ಲ ಬೆಂಬಲವಾಗಿ ನಿಂತು ಪಕ್ಷದ ಪರವಾಗಿ ಕೆಲಸ ಮಾಡಿ ಕಮಲವನ್ನು ಅರಳಿಸುತ್ತೇವೆ. ಯಾವುದೇ ಕಾರಣಕ್ಕೂ ಭಿನ್ನಮತಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿಸಿದರು.

Follow Us:
Download App:
  • android
  • ios