ಸಿದ್ದರಾಮಯ್ಯ 2,400 ಕೋಟಿ ಲೆಕ್ಕ ತೋರಿಸಲಿ: ಸಿಎಂ ಬೊಮ್ಮಾಯಿ
* ಕಾರ್ಖಾನೆ ಮುಚ್ಚಲು ಕಾಂಗ್ರೆಸ್ಸಿಗರ ಕೊಡುಗೆ ಸಾಕಷ್ಟಿದೆ
* ರೈತರಿಗೆನೆರವಾಗಲು ಅಲ್ಲಿ ಸಕ್ಕರೆ ಕಬ್ಬು ಅರೆಸಲು ಬಿಜೆಪಿ ಸರ್ಕಾರ ಕಾರಣ
* ಆರ್ಥಿಕ ಪರಿಸ್ಥಿತಿ ಉತ್ತಮವಾದರೆ ಪೆಟ್ರೋಲ್ ಮೇಲಿನ ತೆರಿಗೆ ಇಳಿಸುವ ಕುರಿತು ಯೋಚಿಸಬಹುದು
ಹುಬ್ಬಳ್ಳಿ(ಅ.18): ಹಾನಗಲ್ ಅಳಿಯನಾಗಿ ಬೊಮ್ಮಾಯಿ ಕ್ಷೇತ್ರಕ್ಕೇನು ಕೊಟ್ಟಿದ್ದಾರೆ ಎಂಬ ಸಿದ್ದರಾಮಯ್ಯ(Siddaramaiah) ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಅವರು ಕೊಟ್ಟಿದ್ದಾರೆ ಎಂದಿರುವ 2400 ಕೋಟಿ ಬಗ್ಗೆ ಲೆಕ್ಕ ಬಿಚ್ಚಿಡಲಿ, ಬಳಿಕ ನಾನೇನು ಕೊಟ್ಟಿದ್ದೇನೆ ಎಂದು ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.
ಭಾನುವಾರ ನಗರದ(Hubballi) ವಿಮಾನ ನಿಲ್ದಾಣದಲ್ಲಿ(Airport) ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಅವರು ಹಾನಗಲ್(Hanagal) ಕ್ಷೇತ್ರದಲ್ಲಿ ಯಾವ್ಯಾವುದಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬ ಲೆಕ್ಕ ಹೇಳಲಿ. ಆ ಬಳಿಕ ನಾನು ಖಂಡಿತವಾಗಿ ಯಾವ ಕೊಡುಗೆ ನೀಡಿದ್ದೇನೆ ಎಂಬುದಾಗಿ ಆ ಕ್ಷೇತ್ರದಲ್ಲಿಯೇ ಹೇಳುತ್ತೇನೆ ಎಂದು ಸವಾಲು ಹಾಕಿದರು.
ಮೋದಿ ಬಗ್ಗೆ ಮಾತನಾಡುವಾಗ ನಾಲಿಗೆ ಹದ್ದುಬಸ್ತಿನಲ್ಲಿರಲಿ: ಸಿದ್ದುಗೆ ಪ್ರಹ್ಲಾದ ಜೋಶಿ ಎಚ್ಚರಿಕೆ
ಬಿಜೆಪಿ(BJP) ಅಭ್ಯರ್ಥಿ ಶಿವರಾಜ ಸಜ್ಜನರ(Shivaraj Sajnanar) ಇಲ್ಲಿನ ಸಕ್ಕರೆ ಕಾರ್ಖಾನೆ(Factory) ಮುಚ್ಚಲು ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ಕಾರ್ಖಾನೆ ಮುಚ್ಚಲು ಕಾಂಗ್ರೆಸ್ಸಿಗರ(Congress) ಕೊಡುಗೆ ಸಾಕಷ್ಟಿದೆ. ರೈತರಿಗೆ(Farmers) ನೆರವಾಗಲು ಅಲ್ಲಿ ಸಕ್ಕರೆ ಕಬ್ಬು ಅರೆಸಲು ಬಿಜೆಪಿ(BJP) ಸರ್ಕಾರ(Government) ಕಾರಣ. ಈಗ ಕಾಂಗ್ರೆಸ್‌ನವರು ಅದನ್ನಿಟ್ಟುಕೊಂಡು ರಾಜಕಾರಣ(Politics) ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪೆಟ್ರೋಲ್ ಬೆಲೆ ಇಳಿಕೆ ಕುರಿತು ಸಭೆ
ಇನ್ನು, ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾದರೆ ಪೆಟ್ರೋಲ್(Petrol) ಮೇಲಿನ ತೆರಿಗೆ(Tax) ಇಳಿಸುವ ಕುರಿತು ಯೋಚಿಸಬಹುದು. ಉಪಚುನಾವಣೆ(Byelection) ಬಳಿಕ ಈ ಕುರಿತು ಪರಿಶೀಲನೆ ಸಭೆ ನಡೆಸಿ ಅವಲೋಕಿಸುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.