Karnataka Cabinet Expansion: ಸಂಪುಟ ಪುನರ್‌ರಚನೆ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

*  ವರಿಷ್ಠರು ತೀರ್ಮಾನಿಸಿದಾಗ ಸಂಪುಟ ಪುನರಾಚನೆ
*  ದಿಂಗಾಲೇಶ್ವರಶ್ರೀ, ಡಿಕೆಶಿ ದಾಖಲೆ ನೀಡಿದರೆ ತನಿಖೆ
*  ದುಷ್ಕರ್ಮಿಗಳ ಆಸ್ತಿಗೆ ಬುಲ್ಡೋಜರ್‌ ಹೊಡೆಸಲ್ಲ
 

CM Basavaraj Bommai React on Karnataka Cabinet Expansion grg

ಶಿವಮೊಗ್ಗ(ಏ.20):  ಪಕ್ಷದ ವರಿಷ್ಠರು ಯಾವಾಗ ತೀರ್ಮಾನ ಮಾಡುತ್ತಾರೋ ಅಂದು ಸಂಪುಟ(Cabinet Expansion) ಪುನರ್‌ ರಚನೆ ಕಾರ್ಯ ನಡೆಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಸರಿಯಾದ ಸಂದರ್ಭದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಹುಬ್ಬಳ್ಳಿಯಲ್ಲಿ(Hubballi Riots) ನಡೆದ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar0 ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ದುಷ್ಕರ್ಮಿಗಳ ವಿರುದ್ಧ ಕಾನೂನು ಬದ್ಧವಾಗಿ ತನಿಖೆ ನಡೆಯುತ್ತದೆ. ಆದರೆ, ಯಾರೇ ತಪ್ಪು ಮಾಡಿದರೂ ಮುಲಾಜಿಲ್ಲದೇ ಕ್ರಮಕೈಗೊಳ್ಳಲಿ ಎಂದು ಹೇಳಿದರು. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಬೇರೆ ಬೇರೆ ರೀತಿ ಹೇಳಿಕೆ ನೀಡುವ ಮೂಲಕ ತನಿಖಾಧಿಕಾರಿಗಳಿಗೆ ದಾರಿ ತಪ್ಪಿಸಬೇಕಿಲ್ಲ. ತನಿಖೆ ನಡೆಸುವುದಕ್ಕೆ ಮುಕ್ತವಾಗಿ ಬಿಡಬೇಕು ಎಂದರು.

Karnataka Cabinet Expansion: ಸಂಪುಟ ಪುನಾರಚನೆಗೆ ಹೈಕಮಾಂಡ್‌ ಅಸ್ತು: ಬೊಮ್ಮಾಯಿಗೆ ನಡ್ಡಾ ಬುಲಾವ್

ದಾಖಲೆ ಕೊಟ್ಟರೆ ತನಿಖೆ: 

ದಿಂಗಾಲೇಶ್ವರ(Dingaleshwara Swamiji) ಶ್ರೀಗಳ ಕಮಿಷನ್‌(Commission) ಆರೋಪಕ್ಕೆ ದಾಖಲೆ ಕೊಡಲಿ. ತನಿಖೆ ಮಾಡಿಸುತ್ತೇನೆ. ಹಾಗೆಯೇ ಡಿ.ಕೆ.ಶಿವಕುಮಾರ್‌ ಕೂಡ ತಾವು ಮಾಡುವ ಯಾವುದೇ ಆರೋಪಕ್ಕೂ ಆಧಾರ ಇದ್ದರೆ ಕೊಡಲಿ ತನಿಖೆ ಮಾಡಿಸುತ್ತೇನೆ. ಮಠಗಳಿಗೆ ಕೊಡುವ ಅನುದಾನದಲ್ಲಿ ದುರುಪಯೋಗ ಮಾಡಲು ಆಗುವುದಿಲ್ಲ. ಈ ಕುರಿತಂತೆ ಸುಮ್ಮನೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ತಿರುಗೇಟು ನೀಡಿದರು.

ದುಷ್ಕರ್ಮಿಗಳ ಆಸ್ತಿಗೆ ಬುಲ್ಡೋಜರ್‌ ಹೊಡೆಸಲ್ಲ: ಸಿಎಂ

ಗಲಭೆಕೋರರು, ದುಷ್ಕರ್ಮಿಗಳ ಮನೆಗಳ ಮೇಲೆ ಬುಲ್ಡೋಜರ್‌ ಹೊಡೆಸುವ ಮಧ್ಯಪ್ರದೇಶ(Madhya Pradesh) ಮತ್ತು ಉತ್ತರ ಪ್ರದೇಶ(Uttar Pradesh) ಮಾದರಿಯ ಕಾರ್ಯಾಚರಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಲವು ತೋರಿಲ್ಲ. ಬದಲಾಗಿ ಈ ನೆಲದ ಕಾನೂನಿನಂತೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ಹಲವಾರು ದಂಗೆಗಳಾದಾಗ ಕಠಿಣ ಕ್ರಮಕೈಗೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಕ್ರಮಗಳಾಗಿವೆ. ನಾವು ನಮ್ಮ ಕರ್ನಾಟಕದ ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವು ಬುಲ್ಡೋಜರ್‌ ಮಾದರಿಯನ್ನು ಅನುಸರಿಸುವುದಿಲ್ಲ ಎಂಬ ಸಂದೇಶ ನೀಡಿದರು.

ದಿಲ್ಲಿ ಸಭೆ ಬಳಿಕ ಸಂಪುಟ ಕಸರತ್ತು, ವಿಸ್ತರಣೆಯೋ? ಪುನಾರಚನೆಯೋ?: ಬೊಮ್ಮಾಯಿ ಹೇಳಿದ್ದಿಷ್ಟು

ಕಾನೂನು ಮತ್ತು ಸಮಾಜ ವಿರೋಧಿ ಕೆಲಸ ಮಾಡುವವರನ್ನು ಸದೆಬಡಿಯುವ ಕೆಲಸ ಆಗಿದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಘಟನೆ ಸಂಬಂಧ ಆರೋಪಿಗಳಿಂದ ರಿಕವರಿ ಮಾಡಲು ಕೋರ್ಚ್‌ ಆದೇಶ ನೀಡಿದೆ. ಅದರಂತೆ ರಿಕವರಿ ಕಮೀಷನ್‌ ಮಾಡಿದ್ದೇನೆ. ಆಗಲೂ ಕಠಿಣ ಕಾನೂನು ಕ್ರಮಕೈಗೊಳ್ಳಲಾಗಿತ್ತು. ಈಗಲೂ ಅಷ್ಟೆ. ಇದು ಮುಂದಿನ ದಿನಗಳಲ್ಲಿ ಪಾಠವಾಗುವಂತೆ ಕ್ರಮಕೈಗೊಳ್ಳುವುದು ಖಚಿತ ಎಂದರು.

ಹಾಗೆಂದು ನಾವು ಕಠಿಣ ಕ್ರಮ ಕೈಗೊಂಡಿಲ್ಲ ಎಂದಲ್ಲ. ಹುಬ್ಬಳ್ಳಿ ಘಟನೆಯಲ್ಲಿ ಯಾರು ಅಪರಾಧ ಮಾಡಿದ್ದಾರೋ, ಪ್ರಚೋದನೆ ನೀಡಿದ್ದಾರೋ, ಸಂಚು ರೂಪಿಸಿದ್ದಾರೋ ಅವರೆಲ್ಲರ ಮೇಲೆಯೂ ಕಠಿಣವಾದ ಸೆಕ್ಷನ್‌ ಅನ್ನು ಹಾಕಿ ಬಂಧಿಸಿದ್ದೇವೆ. ವೀಡಿಯೋ, ಸಾಕ್ಷಿ ಆಧಾರದ ಮೇಲೆ ದುಷ್ಕರ್ಮಿಗಳ ಬಂಧನದ ಕೆಲಸ ನಡೆಯುತ್ತಿದೆ. ಅಲ್ಲಿ ಪ್ರಚೋದನೆ ನೀಡಿದ್ದಾರೆ ಎನ್ನಲಾದ ಮೌಲ್ವಿ ಮತ್ತಿತರ ವ್ಯಕ್ತಿಗಳೂ ಕೂಡ ತನಿಖೆಯ ವ್ಯಾಪ್ತಿಯಲ್ಲಿಯೇ ಬರಲಿದ್ದು, ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಘಟನೆ ನಡೆದ 24 ತಾಸಿನಲ್ಲಿ ಆರೋಪಿಗಳನ್ನು ಬಂಧಿಸುವ ಕೆಲಸ ನಡೆದಿದೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios