* ಬೊಮ್ಮಾಯಿ-ಆನಂದ್ ಸಿಂಗ್ ಮಾತುಕತೆ ಅಂತ್ಯ* ಆನಂದ್ ಸಿಂಗ್ ಜೊತೆಗಿನ ಸಂಧಾನ ಸಭೆ ಸಕ್ಸಸ್* ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್‌ಗೆ ಸಿಎಂ ಖಡಕ್ ಸೂಚನೆ

ಬೆಂಗಳೂರು, (ಆ.11): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆನಂದ್ ಸಿಂಗ್ ನಡುವಿನ ಖಾತೆ ಕ್ಯಾತೆ ಸಂಧಾನ ಸಭೆ ಯಶಸ್ವಿಯಾಗಿದೆ.

ಆನಂದ್ ಸಿಂಗ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಕರೆದು ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಈ ವೇಳೆ ಬೊಮ್ಮಾಯಿ ಅವರು ಆನಂದ್ ಸಿಂಗ್ ಅವರನ್ನ ಸಮಾಧಾನ ಮಾಡಿದರು.

ಸಿಎಂ ಬೊಮ್ಮಾಯಿ ಭೇಟಿ ಬಳಿಕ ರಾಜೀನಾಮೆ ಬಗ್ಗೆ ಸ್ಪಷ್ಟನೆ ಕೊಟ್ಟ ಆನಂದ್ ಸಿಂಗ್

ಈ ಸಮಯದಲ್ಲಿ ನೀವು ಬೇಸರ ಮಾಡಿಕೊಳ್ಳೋದು ಸರಿ ಅಲ್ಲ. ನೀವು ಕೇಳಿದ್ರೆ ಇನ್ನುಳಿದವರು ಕೇಳ್ತಾರೆ. ಹೀಗಾಗಿ ಖಾತೆ ಬದಲಾವಣೆ ಈಗ ಮಾಡೋಕೆ ಆಗೋದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಖಾತೆ ಬದಲಾವಣೆ ಗೆ ಹೈಕಮಾಂಡ್ ಕೂಡ ಒಪ್ಪೋದಿಲ್ಲ ಎಂದು ಆನಂದ್ ಸಿಂಗ್ ಗೆ ಮನವರಿಕೆ ಮಾಡಿಕೊಟ್ಟರು.

ಅಲ್ಲದೇ ಕೇಂದ್ರ ನಾಯರನ್ನು ಒಮ್ಮೆ ಭೇಟಿ ಮಾಡಿ ಬರುವಂತೆ ಸಿಎಂ, ಆನಂದ್ ಸಿಂಗ್ ಅವರಿಗೆ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಆ. 15 ತಾರೀಖಿನ ಬಳಿಕ ದೆಹಲಿಗೆ ತೆರಳುವ ಸಾಧ್ಯತೆಗಳಿವೆ.

ಪ್ರವಸೋದ್ಯಮ ಖಾತೆ ಕೊಟ್ಟಿರುವುದಕ್ಕೆ ಅಸಮಾಧಾನಗೊಂಡಿದ್ದ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಿಎಸ್‌ವೈ, ಇಂದು (ಆ.11) ವಿಜಯನಗರಕ್ಕೆ ಹೆಲಿಕಾಪ್ಟರ್ ಕೊಟ್ಟು ಆನಂದ್ ಸಿಂಗ್ ಅವರನ್ನು ಕರೆಯಿಸಿಕೊಂಡು ಬುದ್ಧಿ ಹೇಳಿದ್ದರು. ಬಳಿಕ ಸಿಎಂ ಸಹ ಆನಂದ್ ಸಿಂಗ್ ಅವನರನ್ನ ಮನವೊಲಿಸಿದರು.

ಒಟ್ಟಿನಲ್ಲಿ ಫುಲ್ ರೊಚ್ಚಿಗೆದ್ದಿದ್ದ ಆನಂದ್ ಸಿಂಗ್ ಅವರನ್ನ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಕೂಡಿ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.