ಕಾಂಗ್ರೆಸ್ಸಿಗರ ಫ್ಯೂಸ್ ಎಚ್‌ಡಿಕೆ ಕಿತ್ತುಹಾಕುವ ಅಗತ್ಯವಿಲ್ಲ : ಈಶ್ವರಪ್ಪ
- ಕಾಂಗ್ರೆಸ್‌ನವರ ಫ್ಯೂಸ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿತ್ತುಹಾಕುವ ಅಗತ್ಯವಿಲ್ಲ
- ಅಲ್ಲಿರುವ ನಾಲ್ಕೈದು ನಾಯಕರ ಪೈಕಿ ಒಬ್ಬೊಬ್ಬ ನಾಯಕರ ಫ್ಯೂಸ್ ಅನ್ನು ಇನ್ನೊಬ್ಬ ನಾಯಕರೇ ಕಿತ್ತು ಹಾಕುತ್ತಿದ್ದಾರೆ
ಚಿಕ್ಕಮಗಳೂರು (ಆ.25): ಕಾಂಗ್ರೆಸ್‌ನವರ ಫ್ಯೂಸ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿತ್ತುಹಾಕುವ ಅಗತ್ಯವಿಲ್ಲ. ಅಲ್ಲಿರುವ ನಾಲ್ಕೈದು ನಾಯಕರ ಪೈಕಿ ಒಬ್ಬೊಬ್ಬ ನಾಯಕರ ಫ್ಯೂಸ್ ಅನ್ನು ಇನ್ನೊಬ್ಬ ನಾಯಕರೇ ಕಿತ್ತು ಹಾಕುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರ ಫ್ಯೂಸ್ ಅನ್ನು ನಾನೇ ಕಿತ್ತುಹಾಕಿದ್ದೇನೆ ಎಂಬ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಸಂಬಂಧಿಸಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಯಾರ ಹೆಸರೂ ಹೇಳಲಿಚ್ಛಿಸುವುದಿಲ್ಲ, ಕಾಂಗ್ರೆಸ್‌ನಲ್ಲಿ ನೇರ ಗುಂಪುಗಾರಿಕೆ ಇದೆ.
2023 ನನ್ನ ಜೀವನದ ಕೊನೆಯ ಹೋರಾಟ: ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ
ವಲಸಿಗರು, ಹೊರ, ಒಳ ಕಾಂಗ್ರೆಸ್ಸಿಗರೆಂದು ಗುಂಪುಗಾರಿಗೆ ಬಹಿರಂಗವೂ ಆಗಿದೆ. ಸದ್ಯ ತಲೆ ಮೇಲೆ ತಟ್ಟಿಗುಂಪುಗಾರಿಕೆಯನ್ನು ನಿಲ್ಲಿಸಿದ್ದಾರೆ. ಆದರೆ ಅದು ಯಾವಾಗ ಪ್ರಜ್ವಲಿಸಿ ಸ್ಛೋಟಗೊಳ್ಳುತ್ತದೋ ಕಾಂಗ್ರೆಸ್ಸಿಗೇ ಗೊತ್ತಿಲ್ಲ ಎಂದರು.