ಉಪಚುನಾವಣೆಯಲ್ಲಿ ಸೋಲುವ ಹತಾಶ ಭಾವನೆಯಿಂದ ಬಿಜೆಪಿ ಕುರಿತು ಕಾಂಗ್ರೆಸ್‌ ಇಲ್ಲಸಲ್ಲದ ಹೇಳಿಕೆ ನೀಡುತ್ತಿದೆ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡಲು ಕಾಂಗ್ರೆಸ್‌ನವರು ಹೊರಟಿದ್ದಾರೆ

ಹಾನಗಲ್‌ (ಅ.25): ಉಪಚುನಾವಣೆಯಲ್ಲಿ (By Election) ಸೋಲುವ ಹತಾಶ ಭಾವನೆಯಿಂದ ಬಿಜೆಪಿ (BJP) ಕುರಿತು ಕಾಂಗ್ರೆಸ್‌ (Congress)ಇಲ್ಲಸಲ್ಲದ ಹೇಳಿಕೆ ನೀಡುತ್ತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukachaeya) ಟೀಕಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೋಟ್‌ ಬ್ಯಾಂಕ್‌ (Vote Bank) ರಾಜಕಾರಣ ಮಾಡಲು ಕಾಂಗ್ರೆಸ್‌ನವರು (congress) ಹೊರಟಿದ್ದಾರೆ. ಕುರ್ಚಿಗಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಹೊಡೆದಾಡುತ್ತಿದ್ದಾರೆ. ಅದಕ್ಕಾಗಿ ಬಿಜೆಪಿ, ನರೇಂದ್ರ ಮೋದಿ (narendra Modi) ಅವರನ್ನು ಬಯ್ಯುವುದರಲ್ಲಿ ನಿರತರಾಗಿದ್ದಾರೆ.

ಬೊಮ್ಮಾಯಿ ಸಾರಥ್ಯ ಅಂದ್ರೆ ಮುಂದಿನ ಸಿಎಂ ಅವರೇ ಎಂದರ್ಥ: ರೇಣುಕಾಚಾರ್ಯ

 ಈ ನಡುವೆ ಉಪಚುನಾವಣೆ ಸೋಲಿನ ಭೀತಿ ಕೂಡ ಅವರನ್ನು ಕಾಡುತ್ತಿದೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy), ಸಿದ್ದರಾಮಯ್ಯ (Siddaramaiah) ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ, ಅವರಿಬ್ಬರಿಗೆ ಮೆದುಳೇ ಇಲ್ಲ.

 ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಅಡ್ರೆಸ್ಸೇ ಇಲ್ಲ. ಜೆಡಿಎಸ್‌ (JDS) ಲೆಕ್ಕಕ್ಕುಂಟು-ಆಟಕ್ಕಿಲ್ಲ ಎಂಬಂತಾಗಿದೆ. ಅವರಿಗೆ ಬಿಜೆಪಿ, ಆರ್‌ಎಸ್‌ಎಸ್‌ (RSS) ಬಯ್ಯದೆ ಇದ್ದರೆ ತಿಂದಿದ್ದು ಜೀರ್ಣ ಆಗಲ್ಲ. ಚುನಾವಣೆ ಬಂದಾಗ ಅಲ್ಪಸಂಖ್ಯಾತರ ಜಪ ಮಾಡುತ್ತಾರೆ ಎಂದು ಕುಟುಕಿದರು.

ಎಚ್ಚರಿಕೆ

 ಆರ್​ಎಸ್​ಎಸ್​ (RSS)ಬಗ್ಗೆ ಮಾತಾಡೋರು ಸರ್ವನಾಶ ಆಗುತ್ತೀರಿ ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿಗೆ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಎಚ್ಚರಿಕೆ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ (Davanagere) ಇಂದು (ಅ.16) ಮಾಧ್ಯಮಗಳೊಂದಿಗೆ ಮಾತಾಡಿದ ರೇಣುಕಾಚಾರ್ಯ, ಆರ್​ಎಸ್​ಎಸ್​ ಬಗ್ಗೆ ಮಾತಾಡುವ ನೀವು ಮಾನಸಿಕ ಅಸ್ವಸ್ಥರು. ಹೀಗಾಗಿಯೇ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದೀರಿ. ಇನ್ನು ಮುಂದೆಯಾದರೂ ಹೀಗೆ ಮಾತಾಡೋದು ಬಿಡಿ ಎಂದು ಮಾಜಿ ಸಿಎಂ ಎಚ್‌ಡಿಕ ಕುಮಾರಸ್ವಾಮಿಗೆ IHD Kumaraswamy) ತಿರುಗೇಟು ನೀಡಿದರು.

ಸಿಂಡಿಕೇಟ್‌ನಲ್ಲಿ RSSನವರಿಂದ ಲೂಟಿ: ಎಚ್‌ಡಿಕೆ ಆರೋಪಕ್ಕೆ ಅಶೋಕ್ ತಿರುಗೇಟು

ಆರ್​ಎಸ್​ಎಸ್​​ ದೇಶಕ್ಕಾಗಿ ಪ್ರಾಣ ಕೊಟ್ಟವರು. ಆರ್​ಎಸ್​ಎಸ್​​ಗೆ ಅಲ್ಲದೇ ಭಯೋತ್ಪಾದಕರಿಗೆ ಸ್ಥಾನ ನೀಡಬೇಕೆ. ಆರ್​ಎಸ್​ಎಸ್​ ಬಗ್ಗೆ ಮಾತಾಡುವ ನೀವು ಮಾನಸಿಕ ಅಸ್ವಸ್ಥರು. ಹೀಗಾಗಿಯೇ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದೀರ ಟಾಂಗ್​ ಕೊಟ್ಟರು.

ಇನ್ನು ಇದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿಗೆ ಆರ್​ಎಸ್​ಎಸ್​​​ನ ಗಂಧ ಗಾಳಿಯು ಗೊತ್ತಿಲ್ಲ. ಆರ್​ಎಸ್​ಎಸ್ ವಿರುದ್ಧ​ ಮಾತಾಡೋದು ಶೋಭೆ ತರುವಂತಹದ್ದಲ್ಲ. ಯಾವುದೇ ಪುಸ್ತಕ ಓದಿ ಹೀಗೆ ಮಾತಾಡೋದಲ್ಲ. ಅವರು ಓದಿದ ಪುಸ್ತಕ ಬರೆದೋರು ಯಾರು? ಒಂದು ಪುಸ್ತಕ ಓದಿದ್ರೆ ಆರ್​ಎಸ್​ಎಸ್​ ಬಗ್ಗೆ ಗೊತ್ತಾಗಲ್ಲ ಎಂದು ಕಿಡಿಕಾರಿದರು.