Asianet Suvarna News Asianet Suvarna News

ಬೊಮ್ಮಾಯಿ ಸಾರಥ್ಯ ಅಂದ್ರೆ ಮುಂದಿನ ಸಿಎಂ ಅವರೇ ಎಂದರ್ಥ: ರೇಣುಕಾಚಾರ್ಯ

*  ಮುಂಬರುವ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ಎಂಬುದಾಗಿ ಘೋಷಿಸಿದ್ದ ಅಮಿತ್‌ ಶಾ 
*  ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಯಾರೂ ಸೈಡ್‌ಲೈನ್‌ ಮಾಡಿಲ್ಲ
*  ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲಿರುವ ಯಡಿಯೂರಪ್ಪ
 

Honnalli BJP MLA MP Renukacharya Talks Over CM Basavaraj Bommai grg
Author
Bengaluru, First Published Oct 20, 2021, 7:57 AM IST
  • Facebook
  • Twitter
  • Whatsapp

ಹೊನ್ನಾಳಿ(ಅ.20): ರಾಜ್ಯದಲ್ಲಿ(Karnataka) 2023ರ ವಿಧಾನಸಭೆ ಚುನಾವಣೆಯಲ್ಲಿ(Assembly Election) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ನೇತೃತ್ವ ವಹಿಸುತ್ತಾರೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಸ್ಪಷ್ಟಪಡಿಸಿದ್ದು, ಚುನಾವಣೆ ನೇತೃತ್ವ ಅಂದರೆ ಅದರರ್ಥ ಮುಂದಿನ ಮುಖ್ಯಮಂತ್ರಿ ಎಂಬುದೇ ಆಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಹೇಳಿದ್ದಾರೆ.

ಹೊನ್ನಾಳಿಯ(Honnali) ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಮ್ಮ ನಾಯಕರಾದ ಬಿ.ಎಸ್‌.ಯಡಿಯೂರಪ್ಪ(BS Yediyurappa) ನೇತೃತ್ವ ವಹಿಸಿ, ನಂತರ ಮುಖ್ಯಮಂತ್ರಿಗಳೂ ಆದರು. ಈಚೆಗೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಂಬರುವ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎಂಬುದಾಗಿ ಘೋಷಿಸಿದ್ದು, ಮುಂದಿನ ಸಿಎಂ(Chief Minister) ಸಹ ಬೊಮ್ಮಾಯಿ ಆಗಲಿದ್ದಾರೆ ಅಂತಲೇ ಅರ್ಥ ಎಂದರು. 

ದಾವಣಗೆರೆ: ಕೇರಿ ಕೇರಿಗೂ ತೆರಳಿ ಜನರ ಮನಗೆದ್ದ ಸಚಿವ ಅಶೋಕ್‌

ಪಕ್ಷದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಯಾರೂ ಸೈಡ್‌ಲೈನ್‌ ಮಾಡಿಲ್ಲ, ಸೈಡ್‌ಲೈನ್‌ ಮಾಡುವ ಪ್ರಶ್ನೆಯೂ ಇಲ್ಲ. ಸಿಂದಗಿ(Sindagi), ಹಾನಗಲ್‌(Hanagal) ಉಪ ಚುನಾವಣೆಯಲ್ಲಿ(Byelection) ಯಡಿಯೂರಪ್ಪ ಪ್ರಚಾರ ಮಾಡಲಿದ್ದಾರೆ ಎಂದರು.
 

Follow Us:
Download App:
  • android
  • ios