'ಗ್ಯಾರಂಟಿ ಯೋಜನೆ ಪಡೆದು ಬೇರೆಯವರಿಗೆ ವೋಟು ಮಾಡಿದ್ರೆ ಅದು ಸಂವಿಧಾನಕ್ಕೆ ಅಪಮಾನ' ಶಾಸಕ ರಾಜು ಕಾಗೆ ವಿವಾದ

ಗ್ಯಾರಂಟಿ ಯೋಜನೆ ಪಡೆದು ಬೇರೆಯವರಿಗೆ ಮತ ನೀಡಿದರೆ ಅದು ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಕಾಗವಾಡ ಶಾಸಕ ರಾಜು ಕಾಗೆ ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ.

Chikkodi lok sabha election MLA Raju kage controversy statement about congress guarantee rav

ಚಿಕ್ಕೋಡಿ (ಏ.6):ಗ್ಯಾರಂಟಿ ಯೋಜನೆ ಪಡೆದು ಬೇರೆಯವರಿಗೆ ಮತ ನೀಡಿದರೆ ಅದು ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಕಾಗವಾಡ ಶಾಸಕ ರಾಜು ಕಾಗೆ ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ.

ಇಂದು ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಉಗಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ರಾಜು ಕಾಗೆ, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡದಿದ್ದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ. ಮತದಾರರ ಋಣವನ್ನು ತೀರಿಸಿ ನಾವು ಸಾಯುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್‌ ಸರ್ಕಾರದಿಂದ ಜನರಿಗೆ ನೆಮ್ಮದಿ ಸಿಕ್ಕಿದೆ: ಶಾಸಕ ರಾಜು ಕಾಗೆ

ನರೇಂದ್ರ ಮೋದಿ ಸರ್ಕಾರದ ನಿರೀಕ್ಷೆಗಳು ಹುಸಿಯಾಗಿವೆ. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕಾಗಿದೆ. ಬಡವರ ಕಂಡ ಕನಸುಗಳು ನನಸಾಗಿಲ್ಲ. ಹತ್ತು ವರ್ಷದಲ್ಲಿ ಮೋದಿ ಹೇಳಿದ್ದ ಅಚ್ಚೇ ದಿನಗಳು ಬರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬಡವರ ಕನಸು ನನಸಾಗಲಿದೆ ಎಂದು ಮೋದಿ ಸರ್ಕಾರವನ್ನು ಕಿತ್ತೊಗೆಯಿರಿ. ಅಧಿಕಾರಕ್ಕೆ ಬಂದ ಹತ್ತು ವರ್ಷದಲ್ಲಿ ಪ್ರಧಾನಿ ಬಡವರು, ರೈತರ ಬಗ್ಗೆ ತುಟಿ ಬಿಚ್ಚಲಿಲ್ಲ. ಯಾರೂ ಮೋದಿ ಮಾತಿಗೆ ಮರುಳಾಗಿ ಮೋಸ ಹೋಗಬೇಡಿ. ಬಿಜೆಪಿಗೆ ಮತ ನೀಡದಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಇದೇ ವೇಳೆ ಮೋದಿ ಬಗ್ಗೆ ಅಣಕ ಮಾಡಿದರು.

Latest Videos
Follow Us:
Download App:
  • android
  • ios