Asianet Suvarna News Asianet Suvarna News

Chikkamagaluru: ದತ್ತಮಾಲೆ ಹಾಕುವುದರ ಬಗ್ಗೆ ಇನ್ನೂ ಕುತೂಹಲ ಜೀವಂತ ಇಟ್ಟ ಶಾಸಕ ತಮ್ಮಯ್ಯ!

ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಜಯಂತಿಗೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ದತ್ತಜಯಂತಿಗೆ ಇಷ್ಟು ದಿನ ಕಾಫಿನಾಡ ಪೊಲೀಸರು ಮಾತ್ರ ಅಲರ್ಟ್ ಆಗಿರ್ತಿದ್ರು.

Chikkamagaluru MLA HD Thammaiah who is still curious about wearing DattaMala gvd
Author
First Published Dec 16, 2023, 7:15 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.16): ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಜಯಂತಿಗೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ದತ್ತಜಯಂತಿಗೆ ಇಷ್ಟು ದಿನ ಕಾಫಿನಾಡ ಪೊಲೀಸರು ಮಾತ್ರ ಅಲರ್ಟ್ ಆಗಿರ್ತಿದ್ರು. ಆದ್ರೆ, ಈ ಬಾರಿ ಇಡೀ ರಾಜ್ಯವೇ ದತ್ತಜಯಂತಿ ಮೇಲೆ ಹದ್ದಿನ ಕಣ್ಣಿಟ್ಟಿದೆ. ನಾಳೆಯಿಂದ ಆರಂಭವಾಗುವ  ದತ್ತಮಾಲಾ ಅಭಿಯಾನಕ್ಕೆ ಸಂಘಪರಿವಾರ ಚಾಲನೆ ನೀಡಲಿದೆ. ಇದರ ನಡುವೆ ಜಿಲ್ಲಾದ್ಯಾಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವುದು ಚಿಕ್ಕಮಗಳೂರು ಶಾಸಕ ಎಚ್ ಡಿ ತಮ್ಮಯ್ಯ ದತ್ತಮಾಲೆ ಹಾಕುತ್ತಾರಾ ಎಂಬ ಪ್ರಶ್ನೆ, ಕಳೆದ ವರ್ಷ ಬಿಜೆಪಿಯಲ್ಲಿದ್ದ ಸಮಯದಲ್ಲಿ ಎಚ್ ಡಿ ತಮ್ಮಯ್ಯ ದತ್ತಮಾಲೆಯನ್ನು ಕಡ್ಡಾಯವಾಗಿ ಹಾಕುತ್ತಿದ್ದರು,ಈ ಭಾರೀ ದತ್ತಮಾಲೆ ಹಾಕುವುದರ ಬಗ್ಗೆ ಕುತೂಹಲವನ್ನು ಹಾಲಿ ಶಾಸಕ ಎಚ್ ಡಿ ತಮ್ಮಯ್ಯ ಜೀವಂತ ಇಟ್ಟಿದ್ದಾರೆ. 

ದೇವರು ಯಾವ ರೀತಿ ಮನಸ್ಸು ಕೊಡುತ್ತಾನೊ ನೋಡೋಣ: ನಾನು ಈ ಬಾರಿ ದತ್ತಮಾಲೆ ಹಾಕೋದು ಇನ್ನೂ ನಿರ್ಧಾರ ಮಾಡಿಲ್ಲ , ದೇವರು ಯಾವ ರೀತಿ ಮನಸ್ಸು ಕೊಡುತ್ತಾನೊ ನೋಡೋಣ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ಶಾಸಕ ಎಚ್.ಡಿ ತಮ್ಮಯ್ಯ. ಸಂಘ ಪರಿವಾರ ಪ್ರಯೋಜಿತ ದತ್ತಮಾಲೆ ಅಭಿಯಾನಕ್ಕೆ ನಾಳೆ ಚಾಲನೆ ದೊರೆಯಲಿದೆ. ಸಹಸ್ರಾರು ಸಂಖ್ಯೆಯಲ್ಲಿ ನಾಳೆ ರಾಜ್ಯದ ವಿವಿದೆಡೆ ದತ್ತ ಭಕ್ತರು ಮಾಲಾಧಾರಣೆ ಮಾಡಲಿದ್ದಾರೆ. ಈ ನಡುವೆ ಕುತೂಹಲ ಒಂದು ಚಿಕ್ಕಮಗಳೂರು ಜನರಿಗೆ ಕಾಡುತ್ತಿತ್ತು ಕ್ಷೇತ್ರದ ಶಾಸಕ ಎಚ್‌ಡಿ ತಮ್ಮಯ್ಯ ದತ್ತಮಾಲೆ ಹಾಕುತ್ತಾರಾ ಇಲ್ಲವಾ ಎಂಬುದು.

ಕರ್ನಾಟಕ ಎಲೆಕ್ಷನ್‌ಗೆ ₹196 ಕೋಟಿ ವೆಚ್ಚ ಮಾಡಿದ ಬಿಜೆಪಿ

ಹೌದು ದಶಕಗಳ ಕಾಲ ಬಿಜೆಪಿಯಲ್ಲಿದ್ದ ತಮ್ಮಯ್ಯ ಪ್ರತಿವರ್ಷ ದತ್ತಮಾಲೆಯನ್ನು ಕಡ್ಡಾಯವಾಗಿ ಹಾಕುತ್ತಿದ್ದರು ಆದರೆ ಈ ಬಾರಿ ಅವರು ಕಾಂಗ್ರೆಸ್ ನಿಂದ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಈ ಬಾರಿಯೂ ಅವರು ದತ್ತಮಾಲೆ ಹಾಕುತ್ತಾರಾ ಎಂಬ ಪ್ರಶ್ನೆ ಬಹಳಷ್ಟು ಜನರನ್ನು ಕಾಡುತ್ತಿತ್ತು, ಇದೀಗ ಖುದ್ದು ಎಚ್.ಡಿ ತಮ್ಮಯ್ಯ ನವರೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಆದರೆ ಸ್ಪಷ್ಟವಾಗಿ ತಾವು ದತ್ತಮಾಲೆ ಹಾಕುವುದಿಲ್ಲ ಎಂದು ಹೇಳಿಲ್ಲ ,, ಹಾಕುತ್ತೇನೆ ಎಂದು ಸಹಾ ಹೇಳಿಲ್ಲ. ಕೇವಲ ನೋಡೋಣ ಎಂದಷ್ಟೇ ಹೇಳಿ ಜನರು ಕುತೂಹಲವನ್ನ ಇನ್ನೂ ಹಿಡಿದಿಟ್ಟುಕೊಳ್ಳುವಂತೆ ಮಾಡಿದ್ದಾರೆ ದತ್ತಮಾಲೆ ಹಾಕುವುದರ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದಿರುವ ಶಾಸಕ ತಮ್ಮಯ್ಯ ದೇವರು ಯಾವ ರೀತಿ ಹೇಳುತ್ತಾನೋ ನೋಡೋಣ ಎಂದು ಹೇಳುವ ಮೂಲಕ ಸ್ಪಷ್ಟವಾಗಿ ತಾವು ಹಾಕುವುದಿಲ್ಲ ಎನ್ನದಿರುವುದು ಕುತೂಹಲವನ್ನು ಮುಂದುವರೆಯುವಂತೆ ಮಾಡಿದೆ.

ನಿಮ್ಮ ಮಿತ್ರಪಕ್ಷದಿಂದ ಮೇಕೆದಾಟು, ಮಹದಾಯಿ ಬಗೆಹರಿಸಿ: ಸಿದ್ದು, ಅಶೋಕ್ ಜಟಾಪಟಿ

ಸಮಿತಿ ಪುನರ್ ರಚನೆ, ಸರ್ಕಾರಕ್ಕೆ ಬಿಟ್ಟ ವಿಷಯ: ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಅಭಿವೃದ್ಧಿಗೆ ಈವರೆಗೆ ಕೇವಲ ಏಳು ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ, ಅದನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಕಳಪೆ ಕಾಮಗಾರಿ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದರು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ರಾಜಕೀಯ ಉದ್ದೇಶದಿಂದ ನಿಲ್ಲಿಸದೆ, ಹಂತ ಹಂತವಾಗಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು. ಮಲ್ಲಂದೂರು ಮತ್ತು ಗಾಣದಾಳು ವಿದ್ಯುತ್  ವಿತರಣಾ ಉಪ ಕೇಂದ್ರಗಳಿಗೆ ಈ ತಿಂಗಳಿನಲ್ಲಿ ಇಂಧನ ಸಚಿವರು ಅಡಿಗಲ್ಲು ಹಾಕಲಿದ್ದಾರೆ ಎಂದರು. ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ದತ್ತ ಜಯಂತಿ ನಡೆಯಲಿದ್ದು, ವ್ಯವಸ್ಥಾಪನಾ ಸಮಿತಿ ಬದಲಾವಣೆ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

Follow Us:
Download App:
  • android
  • ios