Chikkamagaluru: ಬಿಜೆಪಿಯಿಂದ ನನಗೆ ಟಿಕೆಟ್ ಬೇಕೆಂದು ಟವರ್ ಏರಿ ಕುಳಿತ ವ್ಯಕ್ತಿ: ಆತ್ಮಹತ್ಯೆ ಬೆದರಿಕೆ
ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಮನನೊಂದು ಬಿಜೆಪಿ ಕಾರ್ಯಕರ್ತನೋರ್ವ ನೂರು ಅಡಿ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಒಡ್ಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.19): ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಮನನೊಂದು ಬಿಜೆಪಿ ಕಾರ್ಯಕರ್ತನೋರ್ವ ನೂರು ಅಡಿ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಒಡ್ಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ತವರಿ ಏರಿ ಆತ್ಮಹತ್ಯೆಗೆ ಮಾಡಿಕೊಳ್ಳುತ್ತೇನೆಂದು ಬೆದರಿಸಿರುವ ರಂಗಪ್ಪ ಬೋವಿ ಎಂಬ ವ್ಯಕ್ತಿಯನ್ನು ಕೆಳಗಿಳಿಸಲು ಪೊಲೀಸರು ಹಾಗೂ ಸ್ಥಳೀಯರು ಹರಸಹಾಸ ಪಡುತ್ತಿದ್ದಾರೆ. ಟಿವಿ ಅವರು ಬಂದು ಮುಖ ಹಾಗೂ ಲೋಗೋ ತೋರಿಸುವವರೆಗೂ ನಾನು ಕೆಳಗೆ ಇಳಿಯುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ. ನಾನು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿಯಿಂದಲೇ ಸ್ಪರ್ಧಿಸಬೇಕು ಎಂದು ಹೇಳುತ್ತಿದ್ದಾನೆ.
ಬಿಎಸ್ಎನ್ಎಲ್ ಟವರ್ ಏರಿ ಟಿಕೆಟ್‌ಗೆ ಪಟ್ಟು: ಎಸ್.ಸಿ-ಎಸ್, ಟಿ ಸಮಾಜಕ್ಕೆ ಮುಂದೆ ಆಗುತ್ತೆ ಎಂದು ಹೇಳುವುದಕ್ಕಿಂತ ಹಿಂದಿನಿಂದಲೂ ಕೂಡ ಅನ್ಯಾಯವಾಗಿದೆ. ದಲಿತ ಜನರಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಮೂಡಿದೆ. ನೀವೆಲ್ಲ ಸೇರಿ ನನ್ನನ್ನ ಉಳಿಸಿಕೊಳ್ಳುವುದಾದರೆ ಉಳಿಸಿಕೊಳ್ಳಿ ಇಲ್ಲವಾದರೆ ಕೆಳಗೆ ಬೀಳುತ್ತೇನೆ ಎಂದು ಹೇಳುತ್ತಿದ್ದಾನೆ. ಏಳುವರೆ ವರ್ಷದ ಹಿಂದೆ ನನ್ನ ಕರೆದರು. ನೋಡೋದಕ್ಕೆ ಒಳ್ಳೆಯ ಆಳು.
ಬಿಜೆಪಿಯು ರಾಮುಲುಗೆ ಮೂಗುದಾರ ಹಾಕಿ ಧ್ವನಿ ಎತ್ತದಂತೆ ಮಾಡಿದೆ: ಜನಾರ್ದನ ರೆಡ್ಡಿ
ನಿನ್ನನ್ನು ನೋಡಿದರೆ ಜನ ಹೆದರುತ್ತಾರೆ, ಹಣ ಕೊಡುತ್ತಾರೆ. ರೌಡಿಸಂ ಹಾಗೂ ರಿಯಲ್ ಎಸ್ಟೇಟ್ ಗೆ ಬಾ ಎಂದು ಕರೆದರು. ಆದರೆ, ನಾನು ಹೋಗಲಿಲ್ಲ. ನನಗೆ ಡಿಗ್ರಿ ಹಾಗೂ ಡಬಲ್ ಡಿಗ್ರಿ ಓದಿರುವ ಮೂವರು ಮಕ್ಕಳಿದ್ದಾರೆ.ಅವರಿಗೂ ಕೂಡ ಫೋನ್ ಆಪರೇಷನ್ ಮೂಲಕ ಕೆಲಸ ಸಿಗದಂತೆ ಮಾಡಿದ್ದಾರೆ. ನನ್ನ ಖಾತೆಯಲ್ಲಿದ್ದ ಹಣವನ್ನೂ ಹ್ಯಾಕ್ ಮಾಡಿದ್ದಾರೆ. ನಾನು ಶಿಕ್ಷಕರು, ಸೈನಿಕರು, ಆರಕ್ಷಕರಿಗೆ ತುಂಬಾ ಬೆಲೆ ಕೊಡುತ್ತೇನೆ. ನಾನು ಸತ್ತರೂ ಕೂಡ ನನ್ನ ಮಕ್ಕಳಿಗಾದರೂ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾನೆ. ನನಗಾದ ನೋವು ಬೇರೆ ಯಾವ ಸಣ್ಣ ಹಾಗೂ ಬಡ ಸಮಾಜಗಳಿಗೆ ಆಗಬಾರದು.
ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸದ ಕುಮಾರಸ್ವಾಮಿ: ಸಿ.ಪಿ.ಯೋಗೇಶ್ವರ್
ನನಗಾದ ನೋವು ಯಾವ ಸಣ್ಣ ಸಮಾಜಗಳಿಗೆ ಆಗಬಾರದು ಎಂದು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ವಿಡಿಯೋ ಸಂಭಾಷಣೆಯಲ್ಲಿ ಉದ್ಭವ ಆಂಜನೇಯ ಸ್ವಾಮಿ, ನಿರಂಜನ ಸ್ವಾಮೀಜಿಗೆ ವಂದನೆ ತಿಳಿಸಿದ್ದಾನೆ. ಆತ ನನ್ನ ಕೆಳಗಿಳಿಸಲು ಅಜ್ಜಂಪುರ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.