Chikkamagaluru Election Results 2023: ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ: ಎಸ್.ಎಲ್.ಭೋಜೇಗೌಡ
ಸಿ.ಟಿ.ರವಿ ಬುದ್ಧಿವಂತರಿದ್ದು, ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು, ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು ಎಂದು ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.
ಚಿಕ್ಕಮಗಳೂರು (ಮೇ.14): ಸಿ.ಟಿ.ರವಿ ಬುದ್ಧಿವಂತರಿದ್ದು, ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು, ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು ಎಂದು ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿ, ಎಚ್.ಡಿ.ತಮ್ಮಯ್ಯ ವಿರುದ್ಧ ಸೋತ ಬೆನ್ನಲೇ ಭೋಜೇಗೌಡ ಸಿ.ಟಿ.ರವಿಯನ್ನ ಸೋಲಿಸಿ ಹಾಡಿ ಹೊಗಳಿದ್ದಾರೆ. ಟೀಕೆಗಳು ತಪ್ಪಲ್ಲ, ಆದರೆ, ಅದಕ್ಕೊಂದು ಇತಿಮಿತಿ ಇರುತ್ತಿತ್ತು. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ ಎಂದರು.
ಸಿ.ಟಿ.ರವಿ ಸದನದ ಒಳಗೆ-ಹೊರಗೆ ಎರಡೂ ಕಡೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಟೀಕೆ ಮಾಡುವಾಗ ವ್ಯಕ್ತಿತ್ವ, ರಾಜಕೀಯ ಮುತ್ಸದ್ದಿತನವನ್ನ ಯೋಚನೆ ಮಾಡಬೇಕು. ಯಾರನ್ನೋ ಮೆಚ್ವಿಸಲು, ಕ್ಷಣಿಕ ಸುಖಕ್ಕೆ, ಕಾರ್ಯಕರ್ತರ ಮೆಚ್ಚಿಸಲು ವೈಯಕ್ತಿಕ ಟೀಕೆ ಸರಿಯಲ್ಲ. ದೇವೇಗೌಡರಿಗೆ ಸಾಬರಾಗಿ ಹುಟ್ಲಿ ಅನ್ನೋದು, ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಅನ್ನೋದು. ಸಿ.ಟಿ.ರವಿ ಯಾರನ್ನ ಬಿಟ್ಡಿದ್ದಾರೆ, ಯಾರನ್ನೂ ಬಿಟ್ಟಿಲ್ಲ. ಟೀಕೆ ಮಾಡುವಾಗಲು ರಾಜಕೀಯ ಸ್ಟ್ಯಾಂಡರ್ಡ್‌ನಲ್ಲಿ ಟೀಕೆ ಮಾಡಬೇಕು ಎಂದು ಹೇಳಿದರು.
ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು, ಜನಾದೇಶಕ್ಕೆ ತಲೆ ಬಾಗುತ್ತೇನೆ: ಸಿ.ಟಿ.ರವಿ
ಕುಲದ ಕುತ್ತಿಗೆ ಉದ್ದ ಸರ್... ಅಷ್ಟು ಸುಲಭ ಇಲ್ಲ. 'ಬ್ಲಡ್ ಇಸ್ ಥಿಕ್ಕರ್ ದೆನ್ ವಾಟರ್'. ಕುಲದ ಬಗ್ಗೆ ಮಾತನಾಡುವಾಗ ಜನ ಆತನ ಹಮ್ಮಿನ ಬಗ್ಗೆ ಯೋಚಿಸ್ತಾರೆ. ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ. ದುರಾಡಳಿತ, ದುರಾಂಕಾರ, ನಾಲಿಗೆ ಎಲ್ಲವೂ ಸೇರಿ ಕೂಡಿ ಸೋಲಿಸಿವೆ ಎಂದು ವಾಗ್ದಾಳಿ ನಡೆಸಿದರು.