ಕಾಫಿನಾಡಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ, ಕಮಲದತ್ತ ಹೊರಟ ಕೈ ನಾಯಕರು!

ವಿಧಾನಸಭಾ ಚುನಾವಣಾಗೆ ಕೆಲ ತಿಂಗಳು ಬಾಕಿ ಇರುವಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ. ಕಾಂಗ್ರೇಸ್ ನಿಂದ ಬಿಜೆಪಿಯುತ್ತ ಮುಖ ಮಾಡಿದ ನೂರಾರು ಕಾರ್ಯಕರ್ತರು, ಶೃಂಗೇರಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಟಿ ಡಿ ರಾಜೇಗೌಡರ ಅಪ್ತ ಬಿಜೆಪಿಗೆ ಸೇರ್ಪಡೆ.

Chikkamagaluru  congress members shifted to BJP gow

ಚಿಕ್ಕಮಗಳೂರು (ಆ.6): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇದೆ. ಇದರ ನಡುವೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು ಕಾಂಗ್ರೇಸ್ ಮುಖಂಡರು ಬಿಜೆಪಿ ಪಕ್ಷದತ್ತ ಮುಖಮಾಡಿದ್ದು ಅದರಲ್ಲೂ  ಶೃಂಗೇರಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಟಿ ಡಿ ರಾಜೇಗೌಡರ ಅಪ್ತ ಬಿಜೆಪಿಗೆ ಸೇರ್ಪಡೆಯಾಗಿರುವುದು ಕ್ಷೇತ್ರದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿರುವ ಕ್ಷೇತ್ರ. ಹಲವು ಘಟಾನುಘಟಿ ರಾಜಕೀಯ ನಾಯಕರನ್ನು ರಾಜಕಾರಣಕ್ಕೆ ನೀಡಿದ ಕೀರ್ತಿಯನ್ನು ಪಡೆದಿಕೊಂಡಿದೆ. ಗೋವಿಂದಗೌಡರು, ಶಾಮಣ್ಣ, ಸೇರಿದಂತೆ ಡಿ ಬಿ ಚಂದ್ರಗೌಡರು ಕೂಡ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಾಂಗ್ರೇಸ್ , ಜೆಡಿಎಸ್ ಭದ್ರೆಕೋಟೆಗೆ ಬಿಜೆಪಿ ಲಗ್ಗೆ ಇಟ್ಟು ಮೂರು ಭಾರೀ  ಬಿಜೆಪಿ ಶಾಸಕರಾಗಿ ಡಿ ಎನ್ ಜೀವರಾಜ್ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸದ್ಯ ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕರಾಗಿ ಟಿ ಡಿ ರಾಜೇಗೌಡ ಆಯ್ಕೆಯಾಗಿದ್ದಾರೆ. ಹಾಲಿ ಶಾಸಕರ ಅಪ್ತರಾಗಿದ್ದ ತಾಲ್ಲೂಕ್ ಪಂಚಾಯಿತಿಯ ಮಾಜಿ ಸದಸ್ಯ, ಕಾಂಗ್ರೇಸ್ ಪಕ್ಷದ ಪ್ರಭಾವಿ ಮುಖಂಡ ಕಲ್ಲಮಕ್ಕಿ ನಾಗೇಶ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೇಸ್ ನಿಂದ ಬಿಜೆಪಿಯುತ್ತ ಮುಖಮಾಡಿರುವುದು ಕ್ಷೇತ್ರದಲ್ಲಿ ಭಾರೀ ಸಂಚಲವನ್ನೇ ಮೂಡಿಸಿದೆ. 

ಮಾಜಿ ಸಚಿವ ಡಿ ಎನ್ ಜೀವರಾಜ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಯಲ್ಲಿ ತಾಲ್ಲೂಕ್ ಪಂಚಾಯಿತಿಯ ಮಾಜಿ ಸದಸ್ಯ, ಕಾಂಗ್ರೇಸ್ ಪಕ್ಷದ ಪ್ರಭಾವಿ ಮುಖಂಡ ಕಲ್ಲಮಕ್ಕಿ ನಾಗೇಶ್ ತಮ್ಮ 250ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ಬಾಳೆಹೊನ್ನೂರಿನ ಗಣಪತಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಡಿ ಎನ್ ಜೀವರಾಜ್  ಕಲ್ಲಮಕ್ಕಿ ನಾಗೇಶ್ ಅವರನನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತ ಮಾಡಿದರು.

80 ದಾಟಿರುವ ಖರ್ಗೆಗೆ ಯಾರು ದುಃಖಿಸುವವರೇ ಇಲ್ಲ: ವ್ಯಂಗ್ಯವಾಡಿದ ಬಿಜೆಪಿ

ಕಲ್ಲಮಕ್ಕಿ ನಾಗೇಶ್ ಸೇರಿದಂತೆ ಅವರ ಬೆಂಬಲಿಗರಿಗೆ ಬಿಜೆಪಿ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ತದನಂತರ ಮಾತಾಡಿದ ಡಿ ಎನ್ ಜೀವರಾಜ್ ಕ್ಷೇತ್ರದ ಶಾಸಕರಾದ ಟಿ ಡಿ ರಾಜೇಗೌಡರು ವಿರುದ್ದ ವಾಗ್ದಳಿ ನಡೆಸಿದರು. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಅತೀ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು ಆದ್ರೆ ಅತಿವೃಷ್ಟೀ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿದರು. ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಹಾಲಿ ಶಾಸಕರು ಸಮಪರ್ಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. 

ಮೋಸಕ್ಕೆ ಮತ್ತೊಂದು ಹೆಸರೇ ಬಿಜೆಪಿ: ಡಿಕೆಶಿ ಕಿಡಿ

ಕ್ಷೇತ್ರದಲ್ಲಿ ರೈತರ ಬದುಕು ಕಷ್ಟದಾಯಕವಾಗಿದ್ದು ಭ್ರಷ್ಟಚಾರ ಎಲ್ಲೇಮೀರಿದೆ. ಕ್ಷೇತ್ರದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಇದರ ಪರಿಣಾಮ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಕಾಂಗ್ರೇಸ್ ಬಿಂದ ಬಿಜೆಪಿಗೆ ಇಂದು ಸೇರ್ಪೆಡೆ ಆಗಿರುವುದು ಆರಂಭವಷ್ಟೇ ಶಾಸಕರ ಕಾರ್ಯವೈಖರಿ ವಿರುದ್ದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರುವರಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios