Asianet Suvarna News Asianet Suvarna News

ಚುನಾವಣೆಗೆ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಮಹತ್ವದ ಬದಲಾವಣೆ!

ಲೋಕಸಭಾ ಚುನಾವಣೆ, 5 ರಾಜ್ಯಗಳ ವಿಧಾನಸಭಾ ಚುನಾವಣೆಯಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಭಾರಿ ತಯಾರಿ ನಡೆಸುತ್ತಿದೆ. ಸರಣಿ ಸಭೆ, ಸಮೀಕ್ಷೆ, ಚುನಾವಣಾ ಪ್ರಚಾರ ವಿಷಯ ಸೇರಿದಂತೆ ಹಲವು ಚರ್ಚೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

Chhattisgarh assembly election BJP high command announces first list of 21 candidates ckm
Author
First Published Aug 18, 2023, 11:24 AM IST

ರಾಯ್‌ಪುರ್(ಆ.18)  ಲೋಕಸಭಾ ಚುನಾವಣೆ, ಜೊತೆಗೆ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭಾರಿ ತಯಾರಿ ನಡೆಸುತ್ತಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಇಂಡಿಯಾ ಮೈತ್ರಿ ಈ ತಿಂಗಳ ಅಂತ್ಯದಲ್ಲಿ 3ನೇ ಸಭೆ ಸೇರುತ್ತಿದೆ. ಇತ್ತ ಬಿಜೆಪಿ ಸರಣಿ ಸಭೆ ನಡೆಸಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಈ ಬೆಳವಣಿಗೆ ನಡುವೆ ಬಿಜೆಪಿ ಹೈಕಮಾಂಡ್ ಚತ್ತೀಸಘಡ ವಿಧಾನಸಭಾ ಚುನಾವಣೆಗೆ ಮೊದಲ ಅಭ್ಯರ್ಥಿ ಪಟ್ಟಿ ರಿಲೀಸ್ ಮಾಡಿದೆ. ಮೊದಲ ಪಟ್ಟಿಯಲ್ಲಿ 21 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದೆ. ದುರ್ಗ್ ಕ್ಷೇತ್ರದ ಲೋಕಸಭಾ ಸಂಸದ ವಿಜಯ್ ಭಾಘೆಲ್, ಕಾಂಗ್ರೆಸ್ ನಾಯಕ, ಹಾಲಿ ಮುಖ್ಯಮಂತ್ರಿ ಭೂಪೇಶ್ ಭಾಘೆಲ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಚತ್ತೀಸಘಡದಲ್ಲಿ ಮತ್ತೆ ಅಧಿಕಾರಕ್ಕೇರಲು ತಯಾರಿ ನಡೆಸುತ್ತಿರುವ ಬಿಜೆಪಿ ಕರ್ನಾಟಕ ಚುನಾವಣೆಯಿಂದ ಪಾಠ ಕಲಿತಿದೆ. ಕರ್ನಾಟಕದಲ್ಲಿ ಅಂತಿಮ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿ ಗೊಂದಲ ಹಾಗೂ ಸಾಕಷ್ಟು ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಚತ್ತೀಸಘಡದಲ್ಲಿ ಚುನಾವಣೆಗೆ ಇದೀಗ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 21ರ ಪೈಕಿ 16 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಚತ್ತೀಸಘಡ ಚುನಾವಣೆಯಲ್ಲಿ ಭಾರಿ ಬದಲಾವಣೆ ತರಲು ಬಿಜೆಪಿ ಪ್ರಯತ್ನಿಸಿದೆ.

ಲೋಕಸಭೆಗೆ ಶೀಘ್ರವೇ ಬಿಜೆಪಿಯ ಆಕಾಂಕ್ಷಿಗಳ ಪಟ್ಟಿ: ಯಡಿಯೂರಪ್ಪ

ಐವರು ಮಾಜಿ ಶಾಸಕರಿಗೆ ಟಿಕೆಟ್ ನೀಡಿದ್ದರೆ. 21 ಅಭ್ಯರ್ಥಿಗಳ ಪೈಕಿ 5 ಮಹಿಳಾ ನಾಯಕಿಯರಿಗೆ ಟಿಕೆಟ್ ನೀಡಲಾಗಿದೆ. ಇನ್ನು 10 ಮೀಸಲು ಕ್ಷೇತ್ರಗಳಾದ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗೆ ನೀಡಲಾಗಿದೆ. ವಿಜಯ್ ಭಾಘೇಲ್ ಈ ಬಾರಿ ಪಠಾಣ್ ಕ್ಷೇತ್ರದಿಂದ ಸ್ಪರ್ದಿಸುತ್ತಿದ್ದಾರೆ. ಇದು ಹಾಲಿ ಸಿಎಂ ಭೂಪೇಶ್ ಭಾಘೆಲ್ ಕ್ಷೇತ್ರವಾಗಿದೆ. ಭಾಘೆಲ್ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ಗೆ ಠಕ್ಕರ್ ನೀಡಲು ಸಂಸದ ವಿಜಯ್ ಭಾಘೆಲ್ ಕಣಕ್ಕಿಳಿಯುತ್ತಿದ್ದಾರೆ. 2008ರಲ್ಲಿ ಭೂಪೇಶ್ ಭಾಘೆಲ್ ಮಣಿಸಿದ್ದ  ವಿಜಯ್ ಭಾಘೆಲ್ 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. 

ಮಧ್ಯ ಪ್ರೇದಶ ಹಾಗೂ ಚತ್ತೀಸಘಡ ರಾಜ್ಯಗಳಲ್ಲಿ ನವೆಂಬರ್‌ ತಿಂಗಳಲ್ಲಿ ಚುನಾವಣೆ ನಡೆಯಬೇಕಿದ್ದು, ಅದಕ್ಕಿನ್ನೂ ದಿನಾಂಕ ಘೋಷಣೆಯಾಗಿಲ್ಲ. ಆದರೂ 4 ತಿಂಗಳು ಮೊದಲೇ ಮೊದಲ ಪಟ್ಟಿಬಿಡುಗಡೆ ಮೂಲಕ ಬಿಜೆಪಿ ಹೋರಾಟದ ಕಣಕ್ಕೆ ಧುಮುಕಿದೆ. ಚುನಾವಣೆ ಘೋಷಣೆಗೂ ಮುನ್ನ ಬಿಜೆಪಿ ಪಟ್ಟಿಬಿಡುಗಡೆ ಮಾಡುತ್ತಿರುವುದು ಇದೇ ಮೊದಲು. 

ಕಳೆದ ಕರ್ನಾಟಕ ಚುನಾವಣೆಯಲ್ಲಿ ಅಧಿಸೂಚನೆ ಪ್ರಕಟ ಆದರೂ ಬಿಜೆಪಿ ಟಿಕೆಟ್‌ ಘೋಷಿಸದೆ ಸಾಕಷ್ಟುವಿಳಂಬ ಮಾಡಿತ್ತು. ಕೆಲವು ಟಿಕೆಟ್‌ಗಳನ್ನು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಮುನ್ನ ಪ್ರಕಟಿಸಿತ್ತು. ಇದು ಅಭ್ಯರ್ಥಿಗಳಿಗೆ ಚುನಾವಣೆಗೆ ಸಿದ್ಧರಾಗಲು ಸಮಸ್ಯೆ ಆಗಿತ್ತು. ಇದನ್ನು ಮನಗಂಡ ಬಿಜೆಪಿ, 3 ತಿಂಗಳ ಮೊದಲೇ ಟಿಕೆಟ್‌ ಘೋಷಿಸಿದೆ. ಛತ್ತೀಸ್‌ಗಢದಲ್ಲಿ ಹಾಲಿ ಕಾಂಗ್ರೆಸ್‌ ಸರ್ಕಾರ ಇದ್ದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದೆ.

ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧೆ ಮಾಡಿದರೆ, ಮೋದಿಗೆ ಸೋಲು ಖಚಿತ: ಸಂಜಯ್‌ ರಾವುತ್‌

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಕಳೆದ ಬುಧವಾರ ನಡೆಸಿದ್ದ ಸಭೆಯಲ್ಲಿ ಈ ಪಟ್ಟಿಸಿದ್ದಪಡಿಸಲಾಗಿದೆ.

Follow Us:
Download App:
  • android
  • ios