Asianet Suvarna News Asianet Suvarna News

ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧೆ ಮಾಡಿದರೆ, ಮೋದಿಗೆ ಸೋಲು ಖಚಿತ: ಸಂಜಯ್‌ ರಾವುತ್‌

2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದಲ್ಲಿ ಶೇಕಡಾ 63 ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಭರ್ಜರಿ ವಿಜಯ ಸಾಧಿಸಿದ್ದರು.

Lok Sabha election 2023 Priyanka Gandhi can defeat PM Modi from Varanasi  says Sanjay Raut san
Author
First Published Aug 14, 2023, 10:14 PM IST

ನವದೆಹಲಿ (ಆ.14): ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎನ್ನುವ ಪ್ರಯತ್ನದಲ್ಲಿರುವ ಐಎನ್‌ಡಿಐಎ ಮೈತ್ರಿಕೂಟ ಅದಕ್ಕಾಗಿ ಭಾರೀ ಪ್ಲ್ಯಾನ್‌ ಮಾಡುತ್ತಿದೆ. ಈ ನಡುವೆ ಐಎನ್‌ಡಿಐಎ ಮೈತ್ರಿಕೂಟದ ಭಾಗವಾಗಿರುವ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಸಂಸದ ಸಂಜಯ್‌ ರಾವುತ್‌, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೇನಾದರೂ ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಬಹುದು ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಮಾತ್ರ ಇಲ್ಲಿಯವರೆಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿಲ್ಲ.  “ಪ್ರಿಯಾಂಕಾ ಗಾಂಧಿ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡಿದರೆ, ಅವರು ಗೆಲ್ಲುವುದು ಖಚಿತ. ವಾರಣಾಸಿಯ ಜನರು ಪ್ರಿಯಾಂಕಾ ಗಾಂಧಿಯನ್ನು ಇಷ್ಟಪಡುತ್ತಾರೆ” ಎಂದು ಸಂಜಯ್‌ ರಾವುತ್‌ ಹೇಳಿದ್ದಾರೆ. ರಾಯ್‌ಬರೇಲಿ, ವಾರಣಾಸಿ ಮತ್ತು ಅಮೇಠಿ ಕ್ಷೇತ್ರಗಳ ಹೋರಾಟ ಬಿಜೆಪಿಗೆ ಕಷ್ಟಕರವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ತಮ್ಮ ಪತ್ನಿ ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿ ತುಂಬಾ ಒಳ್ಳೆಯ ಸಂಸದೆಯಾಗಿ ಇರಲಿದ್ದಾರೆ. ಕಾಂಗ್ರೆಸ್‌ ಪಕ್ಷ ಕೂಡ ಅವರಿಗಾಗಿ ಉತ್ತಮವಾಗಿರೋದನ್ನೇ ಪ್ಲ್ಯಾನ್‌ ಮಾಡಿರಲಿದೆ ಎಂದಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚುನಾವಣಾ ಕಣಕ್ಕೆ ಪ್ರವೇಶಿಸಬಹುದು ಎಂದು ವದಂತಿಗಳ ನಡುವೆಯೂ ಅವರು ಸ್ಪರ್ಧೆಗೆ ಇಳಿಯಲು ಇಷ್ಟಪಟ್ಟಿರಲಿಲ್ಲ. ಶೇ.18 ಮತಗಳನ್ನು ಪಡೆದ ಎಸ್‌ಪಿಯ ಶಾಲಿನಿ ಯಾದವ್ ಮತ್ತು ಶೇ.14 ಕ್ಕಿಂತ ಹೆಚ್ಚು ಮತಗಳನ್ನು ಪಡೆದ ಕಾಂಗ್ರೆಸ್‌ನ ಅಜಯ್ ರೈ ವಿರುದ್ಧ ಪಿಎಂ ಮೋದಿ ಅವರು ಶೇಕಡಾ 63 ಕ್ಕೂ ಹೆಚ್ಚು ಮತಗಳನ್ನು ವಾರಣಾಸಿ ಕ್ಷೇತ್ರದಲ್ಲಿ ಗಳಿಸಿದರು.

ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

2024 ರ ಲೋಕಸಭೆ ಚುನಾವಣೆಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಸರ್ಕಾರವನ್ನು ಎದುರಿಸಲು 26 ವಿರೋಧ ಪಕ್ಷಗಳು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಅಲಯನ್ಸ್ (ಇಂಡಿಯಾ) ಒಕ್ಕೂಟದ ಅಡಿಯಲ್ಲಿ ಒಗ್ಗೂಡಿವೆ.

ರಾಬರ್ಟ್‌ ವಾದ್ರಾಗೆ ಬಿಗ್‌ ರಿಲೀಫ್‌, ಡಿಎಲ್‌ಎಫ್‌ ಲ್ಯಾಂಡ್‌ ಡೀಲ್‌ನ ದಾಖಲೆಗಳು ಪ್ರವಾಹದ ನೀರಿನಿಂದ ನಾಶ!

Follow Us:
Download App:
  • android
  • ios