ಚನ್ನಪಟ್ಟಣ ಬೇಡವೆಂದು ಮಂಡ್ಯಕ್ಕೆ ಹೋದ ಕುಮಾರಸ್ವಾಮಿ: ಯೋಗೇಶ್ವರ್

ಮುಖ್ಯಮಂತ್ರಿ ಆದರೂ ಅವರು ನಮ್ಮ ತಾಲೂಕಿಗೆ ಏನೇನೂ ಮಾಡಲಿಲ್ಲ ಜೆಡಿಎಸ್‌ ಮುಖಂಡರು ಈ ಬಾರಿ ಅವರ ಪರವಾಗಿ ಮತ ಕೇಳಬೇಡಿ. ಮತ ಕೇಳಿದರೆ ಅದು ನಿಮಗೆ ನೀವು ಮಾಡಿಕೊಳ್ಳುವ ದ್ರೋಹ ಎಂದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ 

Channapatna Byelection Congress Candidate CP Yogeshwar Slams Union Minister HD Kumaraswamy grg

ಚನ್ನಪಟ್ಟಣ(ನ.02): ಎರಡು ಬಾರಿ ಕ್ಷೇತ್ರದ ಶಾಸಕರಾಗಿ ಇಲ್ಲಿಂದ ಸಿಎಂ ಆದ ಕುಮಾರಸ್ವಾಮಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು, ಏನು ಮಾಡಿದ್ದೇನೆ ಎಂದು ತಮ್ಮ ಮಗನನ್ನು ತಂದು ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪ್ರಶ್ನಿಸಿದರು. 

ತಾಲೂಕು ಅತ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ಕುಮಾರಸ್ವಾಮಿ ಅವರು ಈ ತಾಲೂಕು ಬೇಡ ಎಂದು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರವಿದೆ ಇಲ್ಲಿ ಇದ್ದರೆ ನನಗೇನು ಪ್ರಯೋಜನ ಇಲ್ಲ ಎಂದು ರಾಜೀನಾಮೆ ನೀಡಿ ಮಂಡ್ಯಕ್ಕೆ ಹೋಗಿ ಅಲ್ಲಿಂದ ದೆಹಲಿಗೆ ಹೋಗಿದ್ದಾರೆ ಎಂದರು. 

ಬರೀ 17 ಕೆರೆ ನೀರು ತುಂಬಿಸಿ ವ್ಯಕ್ತಿಯನ್ನ ಭಗೀರಥ ಎನ್ನುವುದಾದರೆ 107 ಕೆರೆ ತುಂಬಿಸಿದವರಿಗೆ ಏನನ್ನಬೇಕು? ಹೆಚ್‌ಡಿಕೆ ತಿರುಗೇಟು

ಮುಖ್ಯಮಂತ್ರಿ ಆದರೂ ಅವರು ನಮ್ಮ ತಾಲೂಕಿಗೆ ಏನೇನೂ ಮಾಡಲಿಲ್ಲ ಜೆಡಿಎಸ್‌ ಮುಖಂಡರು ಈ ಬಾರಿ ಅವರ ಪರವಾಗಿ ಮತ ಕೇಳಬೇಡಿ. ಮತ ಕೇಳಿದರೆ ಅದು ನಿಮಗೆ ನೀವು ಮಾಡಿಕೊಳ್ಳುವ ದ್ರೋಹ ಎಂದು ಹೇಳಿದರು. 

ಪ್ರಶಂಸಿಸಿದ್ದ  ನಟ ಅಂಬರೀಶ್: 

ಕ್ಷೇತ್ರಕ್ಕೆ ನೀರಾವರಿ ಯೋಜನೆ ತಂದು ಕೆರೆಗಳನ್ನು ತುಂಬಿಸಿದ್ದೆ. ಆಗ ಇಲ್ಲಿಗೆ ಬಂದಿದ್ದ ಅಂಬರೀಶ್ ನನ್ನ ಥರ ಸಿನಿಮಾ ಮಾಡಿಕೊಂಡು ಇದ್ದವನು ರಾಜಕೀಯಕ್ಕೆ ಬಂದು ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದೀಯಾ. ಅದನ್ನು ಮುಂದುವರಿಸು ಎಂದಿದ್ದರು. ಆದರೆ, ಮುಂದುವರಿಸಲು ಆಗದಂತೆ ನಮ್ಮ ಕ್ಷೇತ್ರದ ಜನ ನನ್ನನ್ನು ಸೋಲಿಸಿಬಿಟ್ಟರು. ಹಾಗಾಗಿ ಇವತ್ತು ಈ ಊರಿನ ಕೆರೆ ಒಣಗಿಹೋಗಿದೆ. ನಾನು ಶಾಸಕನಾಗಿ ದ್ವಿದ್ದರೆ ನಮ್ಮೂರ ಕೆರೆಗಳು ತುಂಬಿತುಳುಕುತ್ತಿತ್ತು ಎಂದು ಯೋಗೇಶ್ವರ್ ಹೇಳಿದರು. 

ದೇವರು ನೀಡಿದ ಅವಕಾಶ: 

ನನ್ನ ಅದೃಷ್ಟ ಮತ್ತೊಂದು ಉಪಚುನಾ ವಣೆ ಬಂದಿದೆ. ನನಗೆ ಮತ್ತೆ ಜನ ಆಶಿರ್ವಾದ ಮಾಡಲು ದೇವರು ಒಂದು ಅವಕಾಶ ನೀಡಿದ್ದಾನೆ. ಇನ್ನು ಮೂರುವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ. ನೂರಾರು ಕೋಟಿ ಹಣ ತಂದು ಅಭಿವೃದ್ಧಿ ಮಾಡಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಅಭಿವೃದ್ಧಿ ಪಟ್ಟಿ ಮಾಡಿ: ಈ ಮಣ್ಣಿಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವ ಶಕ್ತಿ ಇದೆ. ಕುಮಾರಸ್ವಾಮಿ ಏನೋ ಮಾಡಿಬಿಡ್ತಾರೆ ಅಂತ ಎರಡು ಬಾರಿ ಗೆಲ್ಲಿಸಿದರು. ಕುಮಾರಸ್ವಾಮಿ ಏನು ಅಭಿವೃದ್ಧಿ ಮಾಡಿದ್ದಾರೆ. ಯೋಗೇಶ್ವರ್‌ನು ಅಭಿವೃದ್ಧಿ ಮಾಡಿದ್ದಾರೆ 

ಕುಮಾರಸ್ವಾಮಿ ಸುಳ್ಳು ಹೇಳೋದು, ಕಣ್ಣೀರು ಹಾಕೋದು ಅಷ್ಟೇ ಕೆಲಸ, ಈಗಲಾದರೂ ಈ ಬಗ್ಗೆ ಜನ ಎಚ್ಚೆತ್ತು ಕೊಳ್ಳಬೇಕು. ಆತ್ಮಸಾಕ್ಷಿ ಇಟ್ಟುಕೊಂಡು ಮತನೀಡಿ, ನೀರಾವರಿ ಅಭಿವೃದ್ಧಿ ಮಾಡಿದ್ದು ಯಾರು. ಈಗ ಬಂದು ನಮ್ಮಪ್ಪ ಮಾಡಿದ್ದು, ಅಂತ ಹೇಳಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಒಂದು ಬಸ್ ಸ್ಟ್ಯಾಂಡ್ ಮಾಡಲಿಲ್ಲ. ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದೆ ಅಂತ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಜನರ ಕಣ್ಣೀರು ನೋಡೊರು ಯಾರಪ್ಪ ಎಂದು ಪ್ರಶ್ನಿಸಿದರು. ಅತ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮಾಡಿದ ಚುನಾವಣಾ ಪ್ರಚಾರದಲ್ಲಿ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್, ಎಂಎಲ್‌ಸಿ ರವಿ, ಮಾಜಿ ಶಾಸಕ ಎಂ.ಸಿ. ಅಶ್ವಸ್ಟ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಮುಖಂಡ ವೀರೇಗೌಡ ಹಲವರಿದ್ದರು.

ನಿಖಿಲ್ ನಿಲ್ಲಿಸಿರೋದು ಷಡ್ಯಂತ್ರ ಅಲ್ಲವೆ? 

ಚನ್ನಪಟ್ಟಣ: ಯೋಗೇಶ್ವರ್ ಅವರಿಗೆ ಎರಡು ಬಾರಿ ಮೋಸ ಆಗಿದೆ. ಅವರು ಈ ಬಾರಿ ಮತ್ತೆ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲ ಇದೆ. ಹೀಗಾಗಿ ಯೋಗೇಶ್ವರ್ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಇದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. 

ತಾಲೂಕಿನ ಸುಳ್ಳೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕಣ್ಣೀರಿಗೆ ಡಿ.ಕೆ.ಬ್ರದರ್ಸ್ ಕಾರಣ ಎಂಬ ಹಚ್‌ಡಿಕೆ ಹೇಳಿಕೆಗೆ, ಕುಮಾರಸ್ವಾಮಿ ಅವರು ಯಾಕೆ ಈ ಹೇಳಿಕೆ ಕೊಟ್ಟರೋ ಗೊತ್ತಿಲ್ಲ ಕುಮಾರಸ್ವಾಮಿ ಮಗ, ದೇವೇಗೌಡರ ಮೊಮ್ಮಗೆ ಅನ್ನೋದಕ್ಕೆ ನಿಖಲ್‌ನ ರಾಜ್ಯದ ಜನ ಗುರುತಿಸುತ್ತಿದ್ದಾರೆ. ಅದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಅವರ ಗುರುತಿನಿಂದ ಅವರಿಗೆ ಎಷ್ಟು ಅನನುಕೂಲ ಆಗಿದೆ. ಅನುಕೂಲ ಎಷ್ಟಾಗಿದೆ ಆಗಿದೆ ಅನ್ನೋದಕ್ಕಿಂತ ಆ ಹೆಸರೆ ನಿಖಿಲ್‌ಗೆ ಶಕ್ತಿಯಾಗಿದೆ ಎಂದರು. 

ನಿಖಿಲ್ ಕುಮಾರಸ್ವಾಮಿ ಇವತ್ತಿನ ಪರಿಸ್ಥಿತಿಗೆ ಸುರೇಶ್ ಕಾರಣ ಎಂಬ ವಿಚಾರಕ್ಕೆ ನಿಖಿಲ್ ಅಳುವಿಗೆ ಡಿ.ಕೆ. ಸಹೋದರರುಕಾರಣ ಅಂತಾ ಕುಮಾರಸ್ವಾಮಿ ಹೇಳುತ್ತಿದ್ದಾರೆ. ನಿಖಿಲ್ ಮಂಡ್ಯದಲ್ಲಿ ಸ್ಪರ್ಧೆ ಮಾಡಿದರು. ಆಗ ಮಂಡ್ಯ ಜನರು ನಿಖಿಲ್‌ನ ತಿರಸ್ಕಾರ ಮಾಡಿದರು. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದರು. ಅವರಿಗೆ ಅವಶ್ಯಕತೆ ಇತ್ತೋ ಇಲ್ಲೋ ಗೊತ್ತಿಲ್ಲ. ಮಂಡ್ಯಕ್ಕೆ ಹೋಗಿ ಮಗನನ್ನ ಸೋಲಿಸಿದಿರಿ, ನನಗೆ  ಕೇಳಿದರು. ಮಗನನ್ನ ನಿಲ್ಲಿಸೋ ಬದಲು ಅವರು ಹೋಗಿ ಲಾಭ ಪಡೆದುಕೊಂಡಿದ್ದಾರೆ. ಇಲ್ಲಿ ಬಂದು ಮಗನನ್ನು ಸೋಲಿ ಸಿದರು ಅಂತಾರೆಂದು ಸುರೇಶ್ ಆರೋಪ ಮಾಡಿದರು. 

ಸುಳ್ಳಿಗೆ ಮಿತಿ ಇದೆ: 

ಇದರಲ್ಲಿ ಅನ್ಯಾಯ ಏನ್ ಇದೆ, ಸುಳ್ಳನ್ನ ಹೇಳೋಕೆ ಒಂದು ಇತಿಮಿತಿ ಇದೆ. ಮಗನ ಸೋಲಿಗೆ ಕುಮಾರಸ್ವಾಮಿ ಕಾರಣ, ಕುಮಾರಸ್ವಾಮಿಯೇ ಮಗನ ಸೋಲಿನ ಲಾಭ ಪಡೆಯುತ್ತಿದ್ದಾರೆ. ಇದರಲ್ಲಿ ಬೇರೆಯವರ ಪಾತ್ರ ಏನಿದೆ. ನಾನು ಕೂಡ ಸೋತಿದ್ದೇನೆ. ಅದಕ್ಕೆ ನಾನು ಆರೋಪ ಮಾಡೋಕೆ ಆಗುತ್ತಾ?. ಜನರು ತೀರ್ಪು ಕೊಟ್ಟಿದ್ದಾರೆ. ನಾನು ಸ್ವಾಗತ ಮಾಡಬೇಕು. ಪ್ರಜಾಪ್ರಭುತ್ತ ವ್ಯವಸ್ಥೆಗೆ ಗೌರವ ಕೊಡಬೇಕು ಅಷ್ಟೇ ಎಂದರು. 

ರಾಮನಗರದಂತೆ ಚನ್ನಪಟ್ಟಣದಲ್ಲಿ ಪಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಆರೋಪ ಮಾಡಿ ನಿಖಿಲ್ ಚುನಾವಣೆಗೆ ನಿಲ್ಲಿಸಿರೋದು ಕುಮಾರಸ್ವಾಮಿ ಹಾಗೂ ದೇವೇಗೌಡರು. ಯೋಗೇಶ್ವರ್ ಆಚೆ ಓಡಿಸಿ ಮಗನನ್ನ ನಿಲ್ಲಿಸಿ ಪಡ್ಯಂತ್ರ ಮಾಡಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನ ನಿಲ್ಲಿಸಿ ಗೆಲ್ಲಿಸಬೇಕಾಗಿತ್ತು ಎಂದು ಹೇಳಿದರು. 

ಚನ್ನಪಟ್ಟಣ ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಕೋಳಿ, ಕಂಡು, ಸೀರೆ, ಪಂಜೆ ಕೊಟ್ಟು ಅಂತ ಚನ್ನಪಟ್ಟಣ ಜನರು ಹೇಳುತ್ತಿದ್ದಾರೆ. ಇದನ್ನ ಚುನಾವಣಾ ಆಯೋಗ ಗಮನಿಸಬೇಕು ಅಂತ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ಯೋಗಿ ಗೆಲ್ಲಿಸೋದೆ ಗುರಿ 

ಚನ್ನಪಟ್ಟಣ: ಚನ್ನಪಟ್ಟಣ ಉಪ ಉಚುವಾಣೆ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಡಿ.ಕೆ.ಸುರೇಶ್, ಚೆಲುವರಾಯಸ್ವಾಮಿ ಜತೆ ನಾನು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಈ ಉಪ ಚುನಾವಣೆ ಗೆಲ್ಲುವುದೇ ನಮ್ಮ ಪಕ್ಷದ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್‌ಗೆ ಅವರದ್ದೇ ಆದ ಮತ ಬ್ಯಾಂಕ್ ಇದೆ. ಅವರು ಯಾವುದೇ ಪಕ್ಷಕ್ಕೆ ಹೋದರು ಜನಸಂಪರ್ಕ ಚೆನ್ನಾಗಿದೆ. ಕಳೆದ ಚುನಾವಣೆಯಲ್ಲಿ 85 ಸಾವಿರ ಮತಗಳಲ್ಲಿ ಕೇವಲ 21 ಸಾವಿರ ಮತಗಳ ವ್ಯತ್ಯಾಸ ಇತ್ತು. ಜನ ಯೋಚನೆ ಮಾಡಿ ಮತ ಹಾಕಿದರೆ ಯೋಗಿ ಬಹುಮತಗಳಿಂದ ಗೆಲ್ಲುವ ಎಲ್ಲಾ ಅವಕಾಶಗಳು ಇವೆ ಎಂದು ತಿಳಿಸಿದರು. 

ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಕೆಲ ಮಹಿಳೆಯರು ಕರೆ ಮಾಡಿ ನಮಗೆ ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುವ ಶಕ್ತಿ ಇದು, ಹಾಗಾಗಿ ನಮಗೆ ಉಚಿತ ಬಸ್ ಪ್ರಯಾಣ ಬೇಡ ಅಂತಾ ಹೇಳಿದ್ದಾರೆ. ಈ ವಿಚಾರವನ್ನು ಶಿವಕುಮಾರ್ ಪ್ರಸ್ತಾಪಿಸಿ, ಶಕ್ತಿ ಯೋಜನೆ ರಾಜ್ಯದಲ್ಲಿ ಇನ್ನು 8.5 ವರ್ಷ ಇರಲಿದೆ. ನಮ್ಮ ಸರ್ಕಾರದ ಈ ಅವಧಿಯ 1.5 ವರ್ಷ ಹಾಗೂ ಮುಂದಿನ ಅವಧಿ 5 ವರ್ಷ ಇರುತ್ತದೆ. ಶಕ್ತಿ ಯೋಜನೆಯಡಿ 118 ಕೋಟಿ ಜನ ಪ್ರಯಾಣಿಸಿದ್ದಾರೆ. ಗೃಹ ಜ್ಯೋತಿ 1.20 ಕೋಟಿ ಜನ ಆನ್‌ಲೈನ್‌ನಲ್ಲಿ ಪ್ರಯೋಜನ ಪಡೆದಿದ್ದಾರೆ. ಗೃಹ ಲಕ್ಷ್ಮಿಗೆ 1.41 ಕೋಟಿ ಫಲಾನುಭವಿಗಳಿದ್ದಾರೆ. ಶಕ್ತಿ ಯೋಜನೆ ಬೇಡ ಎನ್ನುವ ವರು ಬಹಳ ಕಡಿಮೆ. ಸಮಾಜದಲ್ಲಿ ಉಳ್ಳವರು ಅದರಲ್ಲೂ ಯಾರೋ ಬೆನ್ ಓಡಾಡುವವರು ವಿರೋಧ ಕಾರಿನಲ್ಲಿ ಮಾಡುತ್ತಾರೆ ಎಂದು ತಿಳಿಸಿದರು. 

ಶಕ್ತಿ ಯೋಜನೆ ಪರಿಷ್ಕರಣೆ ಬೈ ಎಲೆಕ್ಸನ್ ಮೇಲೆ ಎಫೆಕ್ಟ್ ಆಗೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ-ಜೆಡಿಎಸ್ ಬಡವರಿಗೆ ಏನಾದರೂ ಕಾರ್ಯಕ್ರಮ ಕೊಟ್ಟಿದಾರಾ. ನಾವು ಕೊಟ್ಟ ಕಾರ್ಯಕ್ರಮ ಅವರು ಸಹಿಸಲ್ಲ, ನಾವು ಬಡವರಿಗೆ ಕೆಜಿ ಅಕ್ಕಿ ಕೊಟ್ಟಾಗ ಎಲ್ಲರನ್ನ ಸೋಂಬೇರಿ ಮಾಡ್ತಾರೆ ಅಂದಿದ್ದರು. 50 ವರ್ಷಗಳ ಹಿಂದೆ ಜನರನ್ನ ಜನರಾಗಿ ನೋಡುತ್ತಿದ್ದರಾ? ಜನರನ್ನ ಮೇಲೆತ್ತುವ ಕೆಲಸ ಕಾಂಗ್ರೆಸ್ ಹೊರತು ಬೇರೆ ಯಾರು ಮಾಡಿಲ್ಲ ಎಂದು ಸಚಿವರು ಹೇಳಿದರು. 

ನಿಖಿಲ್ ಕಣ್ಣೀರಿಗೆ ಎಚ್ಚಿಕೆ ಕಾರಣ 

ಚನ್ನಪಟ್ಟಣ: ನಿವಿಲ್ ಕಣ್ಣೀರಿಗೆ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಕಾರಣ. ಮಂಡ್ಯದಲ್ಲಿ ನಿಖಿಲ್ ಸೋಲಿನ ಅನುಕಂಪದ ಲಾಭ ಪಡೆದು ಕುಮಾರ ಸ್ವಾಮಿ ಗೆದ್ದರು. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಕೆಲಸ ಮಾಡದೇ ನಿಖಿಲ್‌ ಸೋತರು ಎಂದು ಮಾಜಿ ಸಂಸದ ಸುರೇಶ್‌ ವಾಗ್ದಾಳಿ ನಡೆಸಿದರು. 

ಸಿ.ಪಿ.ಯೋಗೇಶ್ವರ್‌ಗೆ ಅವರದ್ಧೇ ಆದ ಮತ ಬ್ಯಾಂಕ್ ಇದೆ: ಸಚಿವ ರಾಮಲಿಂಗಾರೆಡ್ಡಿ

ತಾಲೂಕು ಅಕ್ಕೂರು ಜಿಪಂ ವ್ಯಾಪ್ತಿಯಲ್ಲಿ ಯೋಗಿ ಪರ ಪ್ರಚಾರದ ವೇಲೆ ಮಾತನಾಡಿ, ಕುಮಾರಸ್ವಾಮಿ ಅವರ ಕಣ್ಣೀರಿಗೆ ಡಿಕೆ ಸಹೋದರರು ಕಾರಣ ಅಂತಾರೆ. ಆದರೆ ನಿಮ್ಮ ಪಾಪದ ಕೊಡದಿಂದ ನೀವು ಸೋತಿರೋದು. ನಮ್ಮ ಮೇಲೆ ದೂಷಣೆ ಮಾಡುವ ಅವಶ್ಯಕತೆ ಏನಿದೆ. ನಿಮ್ಮ ಮಗನ ಸೋಲಿಗೆ ನೀವ ಕಾರಣ, ನಿಮ್ಮ ಕುಟುಂಬದವರೇ ಕಾರಣ ಎಂದು ಆರೋಪಿಸಿ, ಕ್ಷೇತ್ರದಿಂದ ಆಯ್ಕೆಯಾದ ಮೇಲೆ ಕುಮಾರಸ್ವಾಮಿ ಒಂದು ದಿನವೂ ಕ್ಷೇತ್ರಕ್ಕೆ ಬರಲಿಲ್ಲ. ಈಗ ಮಗನನ್ನ ನಿಮ್ಮ ಮಡಿಲಿಗೆ ಹಾಕಿದ್ದೇನೆ ಅಂದರೆ ಹೇಗೆ? ಎಂದು ಪ್ರಶ್ನಿಸಿದರು. 

ನಿಮ್ಮ ತಾಲೂಕಿನ ಯಣ ತೀರಿಸುವ ವ್ಯಕ್ತಿಗೆ ಆಶೀರ್ವಾದ ಮಾಡಿ, ಕ್ಷೇತ್ರದ ಅಭಿವೃದ್ಧಿಗೆ ಯೋಗೇಶ್ವರ್ ಜೊತೆಗೆ ನೆನಾವೆಲ್ಲಾ ನಿಮ್ಮೊಂದಿಗಿದ್ದು, ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡೇವೆ ಎಂದು ಸುರೇಶ್ ಹೇಳಿದರು.

Latest Videos
Follow Us:
Download App:
  • android
  • ios