Asianet Suvarna News Asianet Suvarna News

ಸಿದ್ದು ಸಂಪುಟಕ್ಕೆ ಸರ್ಜರಿ: ನಿರೀಕ್ಷಿತ ಸಾಧನೆ ತೋರದ ಸಚಿವರ ತಲೆದಂಡ?

ವರದಿಯ ಪ್ರಕಾರ ಸುಮಾರು 10 ಸಚಿವರು ನಿರೀಕ್ಷಿತ ಸಾಧನೆ ತೋರಿಲ್ಲ. ಇದರಿಂದ ಸಾರ್ವಜನಿಕ ವಲಯದಲ್ಲಿ ರಾಜ್ಯ ಸಚಿವ ಸಂಪುಟದ ಇಮೇಜ್ ಉತ್ತಮವಾಗಿಲ್ಲ. ಇದನ್ನು ಸರಿಪಡಿಸಿಕೊಳ್ಳಲು ಸಾಧನೆ ತೋರದ ಸಚಿವರ ಪೈಕಿ ಕನಿಷ್ಠ 4-5 ಸಚಿವರ ಬದಲಾವಣೆ ಮಾಡಬೇಕು ಎಂದು ಶಿಫಾರಸು ಮಾಡಿದೆ. ಇದರ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಒಂದೆರಡು ತಿಂಗಳೊಳಗೆ ಸಂಪುಟಕ್ಕೆ ಪುಟ್ಟ ಸರ್ಜರಿ ಮಾಡುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡುವ ಸಾಧ್ಯತೆಯಿದೆ. 

Change of at least 4 to 5 ministers who did not perform as expected on siddaramaiah cabinet grg
Author
First Published Aug 4, 2024, 8:21 AM IST | Last Updated Aug 5, 2024, 11:22 AM IST

ಬೆಂಗಳೂರು(ಆ.04):  ರಾಜ್ಯ ರಾಜಕಾರಣದಲ್ಲಿನಡೆದಿರುವ ವಿಪ್ಲವಗಳ ನಡುವೆಯೇ ಮುಂದಿನ ಒಂದೆರಡು ತಿಂಗಳೊಳಗೆ ಸಂಪುಟಕ್ಕೆ ಪುಟ್ಟದೊಂದು ಸರ್ಜರಿಯಾಗುವ ಸಾಧ್ಯತೆಗಳು ಮೂಡಿವೆ. ಇದಕ್ಕೆ ಕಾರಣ ರಾಜ್ಯದ ಸಚಿವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಪಡೆದುಕೊಂಡಿರುವ ಆಂತರಿಕ ವರದಿ. ಖಾಸಗಿ ಸಂಸ್ಥೆಯೊಂದರಿಂದ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಸಚಿವರ ಕಾರ್ಯವೈಖರಿ ಹಾಗೂ ಸಾಧನೆ ಕುರಿತು ವರದಿಯನ್ನು ಪಡೆದಿದೆ.

ಈ ವರದಿಯ ಪ್ರಕಾರ ಸುಮಾರು 10 ಸಚಿವರು ನಿರೀಕ್ಷಿತ ಸಾಧನೆ ತೋರಿಲ್ಲ. ಇದರಿಂದ ಸಾರ್ವಜನಿಕ ವಲಯದಲ್ಲಿ ರಾಜ್ಯ ಸಚಿವ ಸಂಪುಟದ ಇಮೇಜ್ ಉತ್ತಮವಾಗಿಲ್ಲ. ಇದನ್ನು ಸರಿಪಡಿಸಿಕೊಳ್ಳಲು ಸಾಧನೆ ತೋರದ ಸಚಿವರ ಪೈಕಿ ಕನಿಷ್ಠ 4-5 ಸಚಿವರ ಬದಲಾವಣೆ ಮಾಡಬೇಕು ಎಂದು ಶಿಫಾರಸು ಮಾಡಿದೆ. ಇದರ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಒಂದೆರಡು ತಿಂಗಳೊಳಗೆ ಸಂಪುಟಕ್ಕೆ ಪುಟ್ಟ ಸರ್ಜರಿ ಮಾಡುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡುವ ಸಾಧ್ಯತೆಯಿದ್ದು, ಈಗಾಗಲೇ ಇಂತಹದೊಂದು ಸುಳಿವನ್ನು ರಾಜ್ಯ ನಾಯಕತ್ವಕ್ಕೆ ನೀಡಲಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ಸಚಿವ ಸಂಪುಟ ನಿರ್ಧಾರ

ಈ ಬೆಳವಣಿಗೆಯ ನಡುವೆ ಭಾನುವಾರ ನಗರಕ್ಕೆ ಆಗಮಿಸಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಅವರು ನಡೆಸಲಿರುವ ಸಚಿವರ ಸಭೆಯಲ್ಲಿಯೂ ಈ ವರದಿ ಬಗ್ಗೆ ಚರ್ಚಿಸಲಿದ್ದು, ಸಮರ್ಪಕವಾಗಿ ಕೆಲಸ ಮಾಡದ ಸಚಿವರಿಗೆ ಕೊನೆಯ ಎಚ್ಚರಿಕೆ ಯನ್ನು ನೀಡಲಿದ್ದಾರೆ ಎಂದು ಈ ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios