Asianet Suvarna News Asianet Suvarna News

ಜೂ.12ರಂದು ಆಂಧ್ರ ಮುಖ್ಯಮಂತ್ರಿ ಆಗಿ ನಾಯ್ಡು ಪ್ರಮಾಣ; ಉಪಮುಖ್ಯಮಂತ್ರಿ ಆಗ್ತಾರಾ ಪವನ್ ಕಲ್ಯಾಣ?

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 12 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಭರ್ಜರಿಯಾಗಿ ಜಯಗಳಿಸಿರುವ ಜನಸೇನಾ ಪಕ್ಷದ ಪವನ್ ಕಲ್ಯಾಣಗೆ ಯಾವ ಖಾತೆ ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ.

Chandrababu naidu to take oath as Andhra CM on June 12 at Amaravati rav
Author
First Published Jun 8, 2024, 8:48 AM IST

ಅಮರಾವತಿ (ಆಂಧ್ರಪ್ರದೇಶ): ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 12 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

‘ಜೂನ್ 12 ರಂದು (ಬುಧವಾರ) ಬೆಳಗ್ಗೆ 11:27 ಕ್ಕೆ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಈ ಮುನ್ನ ಜೂ.9ರಂದು ಅವರು ಶಪಥಕ್ಕೆ ಉದ್ದೇಶಿಸಿದ್ದರು. ಆದರೆ ಅಂದು ಪ್ರಧಾನಿ ಆಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿರುವ ಕಾರಣ ತಮ್ಮ ಪ್ರಮಾಣ ರದ್ದು ಮಾಡಿದ್ದರು.

 

ದೆಹಲಿ ಏರ್‌ಪೋರ್ಟ್‌ನಲ್ಲಿ ಚಂದ್ರಬಾಬು ನಾಯ್ಡು ಭೇಟಿ ಮಾಡಿದ ಇಂಡಿಯಾ ಕೂಟದ ಸ್ಟಾಲಿನ್

Latest Videos
Follow Us:
Download App:
  • android
  • ios