ನೀವೂ ಬೇಡ, ನಿಮ್ಮ ಹೆಣವೂ ಬೇಡ: ಸಿದ್ದರಾಮಯ್ಯರ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ಟಾಂಗ್
ಸಿದ್ದರಾಮಯ್ಯನವರೇ, ಬಿಜೆಪಿ ಪಕ್ಷ ನಿಮ್ಮಂಥವರಿಗೆ ಅಲ್ಲ, ಬಿಜೆಪಿಗೆ ಸೇರುತ್ತೇನೆ ಅಂತಾ ಸ್ವತಃ ನೀವೇ ಬಂದರೂ, ಬಿಜೆಪಿ ಸೇರಿಸಿಕೊಳ್ಳಲ್ಲ. ಯಾಕೆಂದರೆ ನೀವೆಲ್ಲ ಕಲುಷಿತ ಮನಸಿನ ಜನರು. ಬಿಜೆಪಿಯಲ್ಲಿ ನಿಮ್ಮಂಥವರಿಗೆ ಜಾಗ ಇಲ್ಲ ಎಂದು ಕಿಡಿಕಾರಿದರು.

ಬೆಂಗಳೂರು (ಜ.30) : 'ಸಿದ್ದರಾಮಯ್ಯರ ಶವ ಇಲ್ಲಿಗೆ ಯಾಕೆ ಬರುತ್ತೆ? ಬೇರೆ ಕಡೆ ಹೋಗಲಿ ನಮ್ಮ ಪಕ್ಷ ಶವಾಗಾರ ಅಲ್ಲ' ಬಿಜೆಪಿಗೆ ನನ್ನ ಹೆಣವೂ ಹೋಗಲ್ಲ ಎಂದ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಛಲವಾದಿ ನಾರಾಯಣಸ್ವಾಮಿ.
ಸಿದ್ದರಾಮಯ್ಯ ಶವದ ಬಗ್ಗೆ ಯಾಕೆ ಮಾತಾಡ್ತಾರೋ ಗೊತ್ತಿಲ್ಲ. ಬಹುಶಃ ಬುದ್ಧಿಭ್ರಮಣೆ ಆಗಿದೆ. ಕೋಲಾರದಲ್ಲಿ ಅವರ ರಾಜಕೀಯ ಅಂತ್ಯಸಂಸ್ಕಾರ ಕಾಣ್ತಿರಬಹುದು. ಹಾಗಾಗಿ ಅವರಿಗೆ ಶವದ ನೆನಪಾಗಿದೆ ಎಂದು ಲೇವಡಿ ಮಾಡಿದರು.
ನನ್ನ ಹೆಣವೂ ಬಿಜೆಪಿ, ಆರೆಸ್ಸೆಸ್‌ಗೆ ಹೋಗಲ್ಲ: ಸಿದ್ದರಾಮಯ್ಯ
ನನಗೆ ಅನಿಸ್ತಿದೆ ಈ ಚುನಾವಣೆಯೇ ಕೊನೆಯ ಚುನಾವಣೆ ಅಂತಿದ್ರು ಅದಕ್ಕಾಗಿ ಶವದ ಹೇಳಿಕೆ ನೀಡಿರಬಹುದು. ಬಿಜೆಪಿ ಪಕ್ಷ ಹಾಗು ಮುಖಂಡರ ಬಗ್ಗೆ ಕೆಟ್ಟದಾಗಿ ಮಾತನಾಡ್ತಿದ್ದಾರೆ. ಸಿದ್ದರಾಮಯ್ಯರೇ ಈ ರಾಜ್ಯದ ಮಾಜಿ ಮುಖ್ಯಮಂತ್ರಿ ಆಗಿದ್ದವರು ನೀವು. ನಿಮ್ಮ ಬಗ್ಗೆ ನಮಗೆ ಗೌರವ ಇದೆ. ನಿಮ್ಮನ್ನ ಕೆಟ್ಟದಾಗಿ ತೋರಿಸಲು ನಮಗೆ ಇಚ್ಛೆ ಇಲ್ಲ. ನಿಮ್ಮ ಗೌರವ ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯನವರೇ, ಬಿಜೆಪಿ ಪಕ್ಷ ನಿಮ್ಮಂಥವರಿಗೆ ಅಲ್ಲ, ಬಿಜೆಪಿಗೆ ಸೇರುತ್ತೇನೆ ಅಂತಾ ಸ್ವತಃ ನೀವೇ ಬಂದರೂ, ಬಿಜೆಪಿ ಸೇರಿಸಿಕೊಳ್ಳಲ್ಲ. ಯಾಕೆಂದರೆ ನೀವೆಲ್ಲ ಕಲುಷಿತ ಮನಸಿನ ಜನರು. ಬಿಜೆಪಿಯಲ್ಲಿ ನಿಮ್ಮಂಥವರಿಗೆ ಜಾಗ ಇಲ್ಲ ಎಂದರು.
ಸಮಾಜದ ಸುಧಾರಣೆ ಮಾಡೋದು ನೋಡಿ. ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳು ಸೇರ್ಪಡೆ ಆಗಲಿದ್ದಾರೆ. ವಾಸು ನನ್ನ ಸ್ನೇಹಿತ, ಅವರ ಮಗ ಕವೀಶ್ ನಮ್ಮ ಪಕ್ಷಕ್ಕೆ ಸೇರಿದ್ದಾರೆ. ತಂದೆ ಕಾಂಗ್ರೆಸ್ ಆದ್ರೂ, ಬಿಜೆಪಿ ತತ್ವದ ಸಿದ್ಧಾಂತದ ಮೇಲೆ ಬಿಜೆಪಿ ಬರ್ತಿರೋದಾಗಿ ಅವರ ಮಗ ಹೇಳಿದ್ದಾರೆ. ಆದರೆ ಬಿಜೆಪಿಗೆ ನೀವೂ ಬೇಡ, ನಿಮ್ಮ ಹೆಣವೂ ಬೇಡ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸಿದ್ಧರಾಮಯ್ಯಗೆ ಹಿಂದೂಗಳ ಕಂಡರೆ ಭಯ, ಜಿಹಾದಿಗಳ ಕಂಡರೆ ಪ್ರೀತಿ ಯಾಕೆ?: ಉಡುಪಿಯಲ್ಲಿ ಕುಯಿಲಾಡಿ ಪ್ರಶ್ನೆ
ಮಾಜಿ ಸಿಎಂ ಸಿದ್ದರಾಮಯ್ಯರವರು ಮಾಗಡಿ ಪಟ್ಟಣದಲ್ಲಿ ಮಾತಾಡುವ ವೇಳೆ, ಬಿಜೆಪಿಗೆ ದ್ವೇಷವೇ ರಾಜಕಾರಣವಾಗಿದೆ.ಇಂಥ ಪಕ್ಷದಲ್ಲ ನನಗೆ ರಾಷ್ಟ್ರಪತಿ ಇಲ್ಲವೇ, ಪ್ರಧಾನ ಮಂತ್ರಿ ಮಾಡುತ್ತೇವೆ ಅಂದರೂ ನನ್ನ ಹೆಣ ಕೂಡ ಬಿಜೆಪಿ-ಆರ್‌ಆರ್‌ಎಸ್‌ಗೆ ಹೋಗಲ್ಲ ಎಂದು ಕಟುವಾಗಿ ಟೀಕಿಸಿದ್ದರು.