ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಿತಿಮೀರುತ್ತಿರುವ ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಕೇಂದ್ರ ಮೇಲೆ ಗೂಬೆ ಕೂರಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.30): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಿತಿಮೀರುತ್ತಿರುವ ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಸಿಎಂ ಕಾನೂನು ಸಲಹೆಗಾರ ಎ. ಎಸ್ ಪೊನ್ನಣ್ಣ ಅವರು ಕೇಂದ್ರ ಮೇಲೆ ಗೂಬೆ ಕೂರಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮಾಡಿರುವ ಆರ್ಥಿಕ ನೀತಿಗಳೇ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಕಾರಣವಾಗಿದೆ. ನಬಾರ್ಡ್ ನಲ್ಲಿ ರಾಜ್ಯಕ್ಕೆ ಬರಬೇಕಾಗಿರುವ ಅನುದಾನ ಕಡಿತವಾಗಿದೆ. ನಬಾರ್ಡಿನಿಂದ ಹದಿನಾರುವರೆ ಲಕ್ಷ ಕೋಟಿ ಕೊಡುತ್ತಿದ್ದರು. ಅದನ್ನು ಕಡಿತ ಮಾಡಿ ಈಗ ಕೇವಲ ಎರಡುವರೆ ಲಕ್ಷ ಕೋಟಿಗೆ ಕಡಿಮೆ ಮಾಡಿದ್ದಾರೆ.
ಅದನ್ನು ಪೂರ್ತಿ ಕೊಡಿ ಎಂದು ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದೆವು. ಜೊತೆಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದೆವು. ಆದರೆ ಅವರು ಯಾವುದೇ ಸ್ಪಂದನೆ ತೋರಲಿಲ್ಲ. ನಬಾರ್ಡ್ ಅನುದಾನ ಕಡತದಿಂದ ರೈತರಿಗೆ ಸಾಲ ದೊರೆಯುವುದಿಲ್ಲ, ಅವರಿಗೆ 4 % ಬಡ್ಡಿದರದಲ್ಲಿ ದೊರೆಯುತ್ತಿದ್ದ ಸಾಲ ಇನ್ನು ಮುಂದೆ ಸಿಗದಂತೆ ಆಗುತ್ತದೆ ಎಂದು ಮನವಿ ಮಾಡಿದ್ದೆವು. ಆದರೂ ಕೂಡ ಯಾವುದೇ ರೀತಿಯಿಂದ ಪ್ರತಿಕ್ರಿಯಿಸಿಲ್ಲ. ಕೇಂದ್ರದವರು ರೈತರಿಗೆ ಕೊಡುವ ಆರ್ಥಿಕ ನೆರವನ್ನು ಕಡಿತ ಮಾಡಿದ್ದಾರೆ. ಅದರ ಮೂಲಕ ಮೈಕ್ರೋ ಫೈನಾನ್ಸ್ ಗಳಿಗೆ ಬೆಂಬಲ ಕೊಡುತ್ತಿದ್ದಾರೆ.
14 ಎಕರೆ ಭೂಮಿ ಒತ್ತುವರಿ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಪಾಲನೆ: ಎ.ಎಸ್.ಪೊನ್ನಣ್ಣ
ಹೀಗಾಗಿ ಕೇಂದ್ರ ಸರ್ಕಾರ ಮಾಡಿರುವ ಆರ್ಥಿಕ ನೀತಿಗಳು ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಾರಣವಾಗಿದೆ ಎಂದು ಮಡಿಕೇರಿಯಲ್ಲಿ ಶಾಸಕ ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಲೋಕಾಯುಕ್ತದಿಂದ ತಪ್ಪಿಸಿಕೊಳ್ಳಬಹುದು. ಆದರೆ ಇಡಿ, ಸಿಬಿಐ ನಿಂದ ತಪ್ಫಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ವಿಚಾರಕ್ಕೆ, ಬೆಜೆಪಿಯವರ ಅಂಗ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಂದು ಬಿಜೆಪಿಯವರು ಹೇಳುತ್ತಿರುವುದು ಅಲ್ಲವೇ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ ಯಾಕೆ ಬಂತು ಎನ್ನುವುದೇ ಬಿಜೆಪಿಯವರಿಗೆ ಗೊತ್ತಿಲ್ಲ.
ಯಾವುದಾದರೂ ಅಪರಾಧದಿಂದ ಬಂದ ಹಣ ಕೈಗೆ ಸಿಗುತ್ತಿರಲಿಲ್ಲ. ಆರೋಪಿಗೆ ಶಿಕ್ಷೆ ಆದರೂ ಅಪರಾಧದಿಂದ ಬಂದ ಹಣದಿಂದ ಖರೀದಿಸಿದ ಆಸ್ತಿಗಳು ಕೈಗೆ ಸಿಗುತ್ತಿರಲಿಲ್ಲ. ಹೀಗಾಗಿ ಗಮನಿಯೇ ಇದನ್ನು ಜಾರಿಗೆ ತಂದಿದ್ದೇ ನಮ್ಮ ಸರ್ಕಾರ, ಸಚಿವ ಪಿ.ಚಿದಂಬರಂ. ಆದರೆ ಅದನ್ನು ಬಳಸಿಕೊಂಡು ಇವರು ಏನೆಲ್ಲಾ ಮಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಅಪರಾಧ ಎಲ್ಲಿ ಆಗಿದೆ. ಮೊದಲು ಅಪರಾಧ ಸಾಬೀತಾಗಬೇಕಲ್ಲವೇ. ಅಂದಿನ ಮುಡಾ ಆಯುಕ್ತ ನಟೇಶ್ ಅವರ ಮೇಲೆ ಸರ್ಚ್ ಗೆ ಸೆಕ್ಷನ್ 15 ರ ಅಡಿ ನೊಟೀಸ್ ನೀಡಲಾಯಿತು. ಎರಡು ಘಟನೆಯಲ್ಲಿ ಹೈಕೋರ್ಟ್ ಇಡಿ ನಡೆ ಕಾನೂನು ಬಾಹಿರ ಅಂತ ಹೇಳಿದೆ. ಎಲ್ಲೆಲ್ಲೆಲ್ಲಿ ಬಿಜೆಪಿಯೇತರ ಸರ್ಕಾರ ಇದೆಯೋ ಅಲ್ಲಿ ಇಡಿ ಹುಟ್ಟಿಕೊಂಡಿದೆ. ಹೈಕೋರ್ಟ್ ಕೂಡ ಎಲ್ಲಾ ವರದಿಗಳನ್ನು ಸರಿಯಾಗಿ ನೋಡುತ್ತಿದೆ.
ಸಾಲ ವಸೂಲಿಗಾಗಿ ಜನರಿಗೆ ಕಿರುಕುಳ ನೀಡಿದ್ರೆ ಸುಮೊಟೋ ಕೇಸ್: ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ
ಎಡಿಜಿಪಿ, ಐಜಿಪಿಯಿಂದ ತನಿಖೆ ಆಗಬೇಕೆಂದು ಕೋರ್ಟ್ ನಿರ್ದೇಶಿಸಿದೆ. ಆ ಪ್ರಕರಣದ ತನಿಖೆ ಅಲ್ಲಿ ಬಾಕಿ ಇರುವಾಗಲೇ, ಇದರ ನಡುವೆ ನಗರಾಭಿವೃದ್ಧಿ ಸಚಿವರಿಗೆ ಮತ್ತು ಸಿಎಂ ಪತ್ನಿಗೆ ಇಡಿ ನೊಟೀಸ್ ಕೊಟ್ಟಿದೆ. ಇದರ ಅರ್ಥವೇನು ಎಂದು ಪೊನ್ನಣ್ಣ ಪ್ರಶ್ನಿಸಿದರು. 14 ನಿವೇಶನಗಳನ್ನು ಯಾವಾಗ ಹಂಚಿಕೆ ಮಾಡಲಾಗಿದೆ. ಆ ವೇಳೆ ಸಿಎಂ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದವರು ಯಾರು.? ಅವರಿಗೆ ಯಾಕೆ ನೊಟೀಸ್ ಕೊಟ್ಟಿಲ್ಲ, ಇಡಿ ಸಂಪೂರ್ಣ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರ್ಕಾರಗಳ ವಿರುದ್ಧ ಇದೆ ಎಂದರು. ಸರ್ವೋಚ್ಚ ನ್ಯಾಯಾಲಯವೂ ಕೂಡ ಇಡಿಯ ನಡೆಯನ್ನು ಸರಿಯಿಲ್ಲ ಎಂದಿದೆ. ಆದರೂ ಇಡಿ ಅಧಿಕಾರಿಗಳು ಮೇಲಿನ ಒತ್ತಡದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ, ಇಡಿ ಮತ್ತು ಸಿಬಿಐ ವಿರುದ್ಧ ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.
