ಡ್ರಗ್ಸ್ ಮಾಫಿಯಾ: ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್ ಮುಖಂಡ ಸಿಸಿಬಿ ವಶಕ್ಕೆ
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ದಿನೇ-ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು ರಾಜಕೀಯಕ್ಕೆ ಅಂಟಿಕೊಂಡಿದೆ.
ಹುಬ್ಬಳ್ಳಿ, (ಸೆ.13): ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಕಾರ್ಯಾಚರಣೆ ಮುಂದುವರೆದಿದ್ದು, ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ನಟಿ ರಾಗಿಣಿ ಮೊಬೈಲ್‌ನಲ್ಲಿ ಮಾಜಿ ಸಚಿವರೊಬ್ಬರ ಆಪ್ತನೆಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಫೋಟೋ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗಿರೀಶ್ ಗದಿಗೆಪ್ಪಗೌಡರ ಅವರನ್ನು ವಶಕ್ಕೆ ಪಡೆದ ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಡ್ರಗ್ಸ್ ಕೇಸ್‌ಗೆ ಪಾಲಿಟಿಕಲ್ ಲಿಂಕ್: ತನಿಖೆ ವೇಳೆ ರಾಜಕಾರಣಿಗಳ ಹೆಸ್ರು ಬಾಯ್ಬಿಟ್ಟ ನಟಿಮಣಿಯರು..
2020 ಮಾರ್ಚ್‌ನಲ್ಲಿ ಇದೇ ಗಿರೀಶ್ ಗದಿಗೆಪ್ಪಗೌಡ ಅವರು ಪಣಜಿಯಲ್ಲಿ ತಮ್ಮ ಕ್ಯಾಸಿನೋವನ್ನ ರಾಗಿಣಿ ದ್ವಿವೇದಿ ಅವರಿಂದ ಉದ್ಘಾಟನೆ ಮಾಡಿಸಿದ್ದರು.
ಈ ಹಿಂದೆ ನಟಿ ರಾಗಿಣಿ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಗಿರೀಶ್ ಗದಿಗೆಪ್ಪಗೌಡರ ಅಪ್ಲೋಡ್ ಮಾಡಿದ್ದರು.
ಡ್ರಗ್ಸ್ ಕೇಸ್ನಲ್ಲಿ ರಾಗಿಣಿ ಬಂಧನವಾಗುತ್ತಿದ್ದಂತೆ ಆ ಎಲ್ಲ ಫೋಟೋಗಳನ್ನು ಗಿರೀಶ್ ಡಿಲೀಟ್ ಮಾಡಿದ್ದಾರೆ. ಆದರೆ ರಾಗಿಣಿ ಮೊಬೈಲ್‌ನಲ್ಲಿ ಇವರ ಫೋಟೋ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಗಿರೀಶ್ರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.