ಬಿ.ವೈ.ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆಯಾಗಲಿ: ಸಚಿವ ಕೃಷ್ಣ ಬೈರೇಗೌಡ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಬಿಜೆಪಿ ಮುಖಂಡರೇ ಆದ ಅನ್ವರ್ ಮಾಣಪ್ಪಾಡಿ 150 ಕೋಟಿ ರು. ಆಮಿಷದ ಆರೋಪ ಮಾಡಿದ್ದರೂ ಸಿಬಿಐ ಹಾಗೂ ಇಡಿ ಏನು ಮಾಡುತ್ತಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು. 

CBI should investigate BY Vijayendra Says Minister Krishna Byre Gowda gvd

ಕೋಲಾರ (ಡಿ.16): ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಬಿಜೆಪಿ ಮುಖಂಡರೇ ಆದ ಅನ್ವರ್ ಮಾಣಪ್ಪಾಡಿ 150 ಕೋಟಿ ರು. ಆಮಿಷದ ಆರೋಪ ಮಾಡಿದ್ದರೂ ಸಿಬಿಐ ಹಾಗೂ ಇಡಿ ಏನು ಮಾಡುತ್ತಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು. ನಗರದ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಕ್ಫ್ ವಿಚಾರ ಮಾತನಾಡದಂತೆ ಒತ್ತಡ ಹೇರಿ ವಿಜಯೇಂದ್ರ ೧೫೦ ಕೋಟಿ ರೂ. ಆಮಿಷವೊಡ್ಡಿದ್ದರು ಎಂಬುದಾಗಿ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ. 

ಶಾಸಕ ಬಸನಗೌಡ ಯತ್ನಾಳ ಕೂಡ ಇದೇ ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಹೀಗಾಗಿ ಸಿಬಿಐ ತನಿಖೆ ನಡೆಯಬೇಕು ಎಂದರು. ಸುಳ್ಳು ಆರೋಪಿಗಳಿಗೆಲ್ಲಾ ಇ.ಡಿ ಹಾಗೂ ಸಿಬಿಐ ಕಾಂಗ್ರೆಸ್ ಮುಖಂಡರಿಗೆ ನೋಟಿಸ್ ನೋಡುತ್ತಿವೆ. ಬಿಜೆಪಿ ಮುಖಂಡರ ಮೇಲೆ ಇಷ್ಟೆಲ್ಲಾ ಆರೋಪ ಇರುವಾಗ ತನಿಖಾ ಸಂಸ್ಥೆಗಳು ಸುಮ್ಮನೇ ಏಕೆ ಕುಳಿತಿವೆ ಎಂದು ಪ್ರಶ್ನಿಸಿದರು.

ಅಂಬರೀಷ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳಿಂದ ನನಗೆ ತೃಪ್ತ ಮನೋಭಾವ: ಸುಮಲತಾ

ಕೋವಿಡ್‌ ಹಗರಣ ತನಿಖೆ: ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಹೆಣದಲ್ಲಿ ಹಣ ಮಾಡಿದ್ದನ್ನು ಮರೆಯಬೇಕೇ, ಹೆಚ್ಚು ಹಣ ನೀಡಿ ಕಳಪೆ ಸಾಮಗ್ರಿ ತಂದು ಭ್ರಷ್ಟಾಚಾರ ಎಸಗಿದ್ದಾರೆ. ಕೋವಿಡ್‌ನಲ್ಲಿ ನೂರಾರು ಕೋಟಿ ರೂಪಾಯಿ ನುಂಗಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಜನ ಸತ್ತರೂ ಪರವಾಗಿಲ್ಲ, ದುಡ್ಡು ಮಾಡಿದರೂ ಪರವಾಗಿಲ್ಲ ಸುಮ್ಮನಿರಬೇಕು ಎಂಬ ನಿಲುವು ಬಿಜೆಪಿಯವರಿಗೆ, ಜಗದೀಶ ಶೆಟ್ಟರ್ ಅವರಿಗೆ ಸರಿ ಕಾಣಬಹುದು ಎಂದು ವ್ಯಂಗ್ಯವಾಡಿದರು.

ಡಿಕೆಶಿಗೆ ಒಳ್ಳೆಯ ಸಮಯ ಬರಲಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಒಳ್ಳೆಯ ಸಮಯ ಬರಲಿ, ಒಳ್ಳೆಯದಾಗಲಿ. ಬಹಳ ವರ್ಷದಿಂದ ಅವರು ರಾಜಕೀಯದಲ್ಲಿದ್ದಾರೆ. ಯಾರ್‍ಯಾರ ಜೀವನದಲ್ಲಿ ಏನು ಸಿಗಬೇಕು ಅದು ಸಿಕ್ಕೆ ಸಿಗುತ್ತೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಬೆಂಗಳೂರಲ್ಲಿ ಮತ್ತೊಂದು ‘ಎಲೆಕ್ಟ್ರಾನಿಕ್‌ ಸಿಟಿ’ಗೆ ಸಿದ್ಧತೆ: 1000 ಎಕರೆಯಲ್ಲಿ ‘ಸ್ವಿಫ್ಟ್‌ ಸಿಟಿ’ ನಿರ್ಮಾಣ

ಡಿ.ಕೆ.ಶಿವಕುಮಾರ್ ಅವರು ನನಗೆ ಸಮಯ ಬರುತ್ತೆ, ಒಳ್ಳೆಯದಾಗುತ್ತೆ ಎಂದು ಹೇಳಿದ್ದಾರೆ. ಅಷ್ಟೂ ಹೇಳಬಾರದು ಎಂದರೆ ಹೇಗೆ?. ಮಾತನಾಡುವಾಗ ಅಳೆದು, ತೂಗಿ ಮಾತನಾಡುವುದು ಕಷ್ಟ ಎಂದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜನಪರವಾದ ಕೆಲಸ ಮಾಡುತ್ತಿದ್ದೇವೆ‌. ಇದಕ್ಕೆ ಉಪ ಚುನಾವಣೆ ಫಲಿತಾಂಶವೇ ಸಾಕ್ಷಿ. ಕುಮಾರಸ್ವಾಮಿ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಬೊಮ್ಮಾಯಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆದ್ದಿದೆ. ಒಂದು ಕುಟುಂಬದ ವಿರುದ್ಧ ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದರು.

Latest Videos
Follow Us:
Download App:
  • android
  • ios