Asianet Suvarna News Asianet Suvarna News

ಕ್ರಿಮಿನಲ್‌ ಹಿನ್ನೆಲೆಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ?

ಕ್ರಿಮಿನಲ್‌ ಹಿನ್ನೆಲೆಯವರಿಗೆ ಟಿಕೆಟ್‌ ಬೇಡ| ಪಕ್ಷಗಳಿಗೆ ಸೂಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಚು. ಆಯೋಗ ಕೋರಿಕೆ

Candidates with criminal background should not be given tickets Election Commission tells Supreme Court
Author
Bangalore, First Published Jan 25, 2020, 9:10 AM IST
  • Facebook
  • Twitter
  • Whatsapp

ನವದೆಹಲಿ[ಜ.25]: ರಾಜಕೀಯ ಪಕ್ಷಗಳು ಅಪರಾಧ (ಕ್ರಿಮಿನಲ್‌) ಹಿನ್ನೆಲೆಯುಳ್ಳ ಸ್ಪರ್ಧಾಕಾಂಕ್ಷಿಗಳಿಗೆ ಚುನಾವಣಾ ಟಿಕೆಟ್‌ ನೀಡಬಾರದು ಎಂದು ಸೂಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಭಾರತೀಯ ಚುನಾವಣಾ ಆಯೋಗ ಮನವಿ ಮಾಡಿದೆ.

2018ರ ಸೆಪ್ಟೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ಆದೇಶವೊಂದನ್ನು ನೀಡಿ, ‘ಚುನಾವಣೆಗೆ ನಿಲ್ಲುವ ಮುನ್ನ ತಮ್ಮ ಮೇಲಿನ ಕ್ರಿಮಿನಲ್‌ ಆರೋಪಗಳು ಹಾಗೂ ಹಿನ್ನೆಲೆಯನ್ನು ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಬೇಕು ಹಾಗೂ ಟೀವಿ, ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ನೀಡಿ ಕ್ರಿಮಿನಲ್‌ ಹಿನ್ನೆಲೆಯನ್ನು ಘೋಷಿಸಿಕೊಳ್ಳಬೇಕು’ ಎಂದು ಸೂಚಿಸಿತ್ತು.

EVM ನಿರ್ವಹಣೆಯಲ್ಲಿ ಉತ್ತಮ ಸಾಧನೆಗೈದ ಕರ್ನಾಟಕಕ್ಕೆ ಪ್ರಶಸ್ತಿ..!

ಆದರೆ 2018ರಲ್ಲಿ ನೀಡಿದ ಕೋರ್ಟ್‌ನ ಈ ಆದೇಶವು ರಾಜಕೀಯದಲ್ಲಿ ಅಪರಾಧೀಕರಣ ತಗ್ಗಿಸಲು ನೆರವಾಗುತ್ತಿಲ್ಲ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ ಚುನಾವಣಾ ಆಯೋಗ, ‘ಇದರ ಬದಲು ಕ್ರಿಮಿನಲ್‌ ಹಿನ್ನೆಲೆಯಿರುವವರಿಗೆ ಟಿಕೆಟ್‌ ನೀಡಬಾರದು ಎಂದು ರಾಜಕೀಯ ಪಕ್ಷಗಳಿಗೇ ಸೂಚಿಸಬೇಕು’ ಎಂದು ಕೋರಿತು.

ಇದನ್ನು ಪರಿಗಣಿಸಿದ ನ್ಯಾ| ರೋಹಿನ್ಟನ್‌ ನಾರಿಮನ್‌ ಹಾಗೂ ನ್ಯಾ| ರವೀಂದ್ರ ಭಟ್‌ ಅವರಿದ್ದ ಪೀಠ, ‘ರಾಜಕೀಯ ಅಪರಾಧೀಕರಣ ತಡೆಯಲು ಏನು ಮಾಡಬೇಕೆಂಬ ಬಗ್ಗೆ 1 ವಾರದಲ್ಲಿ ನಿಯಮಗಳ ಚೌಕಟ್ಟು ಸಿದ್ಧಪಡಿಸಿ ನಮಗೆ ನೀಡಿ’ ಎಂದು ಸೂಚಿಸಿತು.

ಕಪಿಲ್ ಮಿಶ್ರಾ ಟ್ವೀಟ್ ಡಿಲೀಟ್ ಮಾಡಲು ಟ್ವಿಟ್ಟರ್‌ಗೆ ಆಯೋಗದ ಆದೇಶ!

Follow Us:
Download App:
  • android
  • ios