ಬೈಂದೂರು: ಬರಿಗಾಲಲ್ಲಿ ಓಡಾಡುವ ಬೈಂದೂರು ಬಿಜೆಪಿ ಅಭ್ಯರ್ಥಿ..!

‘ಕೆಟ್ಟದ್ದನ್ನು ನಾನೇ ಮೊದಲಾಗಿ ಮೆಟ್ಟಿ ನಿಲ್ಲುತ್ತೇನೆ’ ಎಂದು ಚಪ್ಪಲಿ ಧರಿಸುವುದನ್ನೇ ತ್ಯಜಿಸಿದ್ದಾರೆ. ಅವರು ಬರಿಗಾಲಲ್ಲೇ ಎಲ್ಲ ಕಡೆ ಓಡಾಡುತ್ತಾರೆ. ಟಿಕೆಟ್‌ ಘೋಷಣೆಯಾದ ಬಳಿಕ ಗುರುರಾಜ್‌ ಗಂಟಿಹೊಳಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಶುರುವಾಗಿದೆ. 

Byndoor Constituency BJP Candidate Gururaj Gantiholi Not Wearing Slippers grg

ಕುಂದಾಪುರ(ಏ.14):  ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಅವರಿಗೆ ಬಿಜೆಪಿ ಪುನ: ಸ್ಪರ್ಧಿಸಲು ಟಿಕೆಟ್‌ ನಿರಾಕರಿಸಿದ್ದು, ಅವರ ಬದಲಿಗೆ ಆರ್‌ಎಸ್‌ಎಸ್‌ ಕಾರ್ಯಕರ್ತ, ಗುರುರಾಜ ಗಂಟಿಹೊಳಿ ಅವರಿಗೆ ಟಿಕೆಟ್‌ ನೀಡಿದೆ.

ಆರ್‌ಎಸ್‌ಎಸ್‌ ಹಿನ್ನೆಲೆಯ ಗುರುರಾಜ್‌, ಪ್ರಚಾರಕ್‌ ಆಗಿ ಪುತ್ತೂರು, ಸುಳ್ಯದಲ್ಲಿ ಕೆಲಸ ಮಾಡಿದ್ದರು. ಈಶಾನ್ಯ ರಾಜ್ಯಗಳಲ್ಲಿ ಮತಾಂತರ, ಉಗ್ರರ ಉಪಟಳ ಹೆಚ್ಚಳವಾದ ಸಂದರ್ಭದಲ್ಲಿ ಮಣಿಪುರದ ಮಕ್ಕಳನ್ನು ಕರೆದು ತಂದು ಅವರಿಗೆ ಶಿಕ್ಷಣ ಕೊಡಿಸಿದ್ದರು. ತಮ್ಮ ಮನೆಯಲ್ಲೇ 50ಕ್ಕೂ ಹೆಚ್ಚು ಈಶಾನ್ಯ ರಾಜ್ಯದ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಅಭ್ಯರ್ಥಿ ಆಯ್ಕೆಯ ವೇಳೆ ಅಸಮಾಧಾನ ಇದ್ದದ್ದೆ: ಸುನಿಲ್‌ ಕುಮಾರ್‌

ಸಂಘದ ಕಾರ‍್ಯಕರ್ತರಾಗಿರುವ ಗುರುರಾಜ್‌, ‘ಕೆಟ್ಟದ್ದನ್ನು ನಾನೇ ಮೊದಲಾಗಿ ಮೆಟ್ಟಿ ನಿಲ್ಲುತ್ತೇನೆ’ ಎಂದು ಚಪ್ಪಲಿ ಧರಿಸುವುದನ್ನೇ ತ್ಯಜಿಸಿದ್ದಾರೆ. ಅವರು ಬರಿಗಾಲಲ್ಲೇ ಎಲ್ಲ ಕಡೆ ಓಡಾಡುತ್ತಾರೆ. ಟಿಕೆಟ್‌ ಘೋಷಣೆಯಾದ ಬಳಿಕ ಗುರುರಾಜ್‌ ಗಂಟಿಹೊಳಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಶುರುವಾಗಿದೆ. ‘ಬೈಂದೂರಿಗೆ ಬಡವರ ಮನೆ ಹುಡುಗ’, ‘ಬರಿಗಾಲಿನ ಸಂತ’, ‘ಗುರು ಅಣ್ಣ’ ಎಂದು ಜಾಲತಾಣದಲ್ಲಿ ಟ್ರೆಂಡಿಂಗ್‌ ಶುರುವಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios