ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ 30 ಸಾವಿರ ಮತಗಳಿಂದ ಗೆಲವು: ಬಿಜೆಪಿ ಎಡವಿದ್ದೆಲ್ಲಿ..?

ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸೋಣ| ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ| ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ| ಕಾರ್ಯಕರ್ತನಾಗಿ ಸದಾ ನಿಮ್ಮೊಂದಿಗಿರುವೆ| ಬಿಜೆಪಿ ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ: ಬಿ.ವೈ.ವಿಜಯೇಂದ್ರ| 

BY Vijayendra Talks Over Maski Byelection Result grg

ಬೆಂಗಳೂರು(ಮೇ.02): ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತರೂಢ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೃತೃತ್ವದಲ್ಲಿ ಸಾಕಷ್ಟು ಪ್ರಚಾರವನ್ನ ನಡೆಸಲಾಗಿತ್ತು. ಆದರೂ ಕೂಡ ಮತದಾರಪ್ರಭು ಬಿಜೆಪಿಯನ್ನ ತಿರಸ್ಕರಿಸಿದ್ದಾನೆ. ಉಪಚುನಾವಣೆಯ ಫಲಿತಾಂಶದ ಬಗ್ಗೆ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸೋಣ ಹೇಳಿದ್ದಾರೆ.

 

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಬಿ.ವೈ. ವಿಜಯೇಂದ್ರ ಅವರು, ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸೋಣ. ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ. ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕಾರ್ಯಕರ್ತನಾಗಿ ಸದಾ ನಿಮ್ಮೊಂದಿಗಿರುವೆ. ಬಿಜೆಪಿ ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ ಎಂದು ತಿಳಿಸಿದ್ದಾರೆ. 

 

ಮಸ್ಕಿಯಲ್ಲಿ ಬಿಜೆಪಿಗೆ ಹಿನ್ನಡೆ: ಮತದಾರರು ಬದಲಾವಣೆ ಬಯಸಿದ್ದಾರೆ ಎಂದ ಪ್ರತಾಪಗೌಡ ಪಾಟೀಲ್

ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಅವರು, ಮಸ್ಕಿ ಮತದಾರರೇ ತಮ್ಮ ಆಡಳಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಸ್ಪಷ್ಟವಾಗಿದೆ. ಮಸ್ಕಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೆ, ಆದರೂ ಮತದಾರರು ತಮ್ಮ ಕೈಹಿಡಿಯಲಿಲ್ಲ. ಮುಂದಿನ ಎರಡು ವರ್ಷ ಮಸ್ಕಿ ಮತದಾರರ ಪರ ಕೆಲಸ ಮಾಡುವೆ. ಸರ್ಕಾರ ಬಿಜೆಪಿಯದ್ದೇ ಇರುವುದರಿಂದ ಮತದಾರರ ಬೇಕು ಬೇಡಗಳ ಅರಿತು ಕಾರ್ಯನಿರ್ವಹಿಸುತ್ತೇನೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಹಿನ್ನಡೆಯಾಗಿದೆ ಎಂದು ಅನಿಸಿಲ್ಲ. ಮತದಾರರು ತಮ್ಮ ಮೂರು ಅವಧಿಗೆ ಬೆಂಬಲಿಸಿದ್ದು ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದ್ದರು.

ಮಸ್ಕಿ ವಿಧಾನಸಭಾ ಕ್ಷೇತ್ರವನ್ನ ಪ್ರತಿಷ್ಠೆಯ ಕಣವನ್ನಾಗಿ ಮಾಡಿಕೊಂಡಿದ್ದ ಬಿ.ವೈ.ವಿಜಯೇಂದ್ರ ಅವರು ಕ್ಷೇತ್ರದಲ್ಲೇ ಬೀಡುಬಿಟ್ಟು ಭರ್ಜರಿ ಪ್ರಚಾರವನ್ನ ನಡೆಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಗಲಿದೆ ಎಂದೇ ಹೇಳಲಾಗುತ್ತು. ಆದರೆ, ಇಂದಿನ ಫಲಿತಾಂಶವನ್ನ ಗಮನಿಸಿದರೆ ಮಸ್ಕಿ ಮತದಾರ ಪ್ರಭು ಮಾತ್ರ ಆಡಳಿತ ವಿರೋಧಿ ಅಲೆಯನ್ನ ಸ್ಪಷ್ಟವಾಗಿ ರವಾನಿಸಿದ್ದಾನೆ.

ಮಸ್ಕಿ ಸೋಲಿಗೆ ಬಿಜೆಪಿ ವಲಯದಲ್ಲಿ ಗಂಭೀರ ಚರ್ಚೆ

ಉಪಚುನಾವಣೆಯಲ್ಲಿ ಸೋಲು ಸ್ಪಷ್ಟವಾಗುತ್ತಿದ್ದಂತೆ ಮಸ್ಕಿ ಸೋಲಿಗೆ ಬಿಜೆಪಿ ವಲಯದಲ್ಲಿ ಗಂಭೀರವಾದ ಚರ್ಚೆ ಆರಂಭವಾಗಿದೆ. ಸಾಮೂಹಿಕ ನಾಯಕತ್ವದಡಿ ಹೋರಾಟ ಮಾಡಿದರೂ ಸ್ಥಳೀಯ ನಾಯಕತ್ವದ ಕಿತ್ತಾಟ ಮುಂದುವರಿದ ಹಿನ್ನೆಲೆ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಬದಲಾಯ್ತು ಟ್ರೆಂಡ್‌, ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ!

ಬಿಜೆಪಿ ಸೋಲಿಗೆ ಕಾರಣಗಳು

ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ರ ಸಾಂಪ್ರದಾಯಿಕ ಓಟ್ ಬ್ಯಾಂಕ್ ಮುನಿಸಿಕೊಂಡಿರುವುದು.
ಸ್ಥಳೀಯ ನಾಯಕರ ಜೊತೆಗೆ ಇತ್ತೀಚೆಗೆ ಪ್ರತಾಪಗೌಡ ಉತ್ತಮ ಸಂಪರ್ಕ ಇಟ್ಟುಕೊಂಡಿಲ್ಲದೇ ಇರುವುದು..
ದೇವದುರ್ಗ ಶಾಸಕ ಶಿವನಗೌಡ ನಾಯಕ್ ಮತ್ತು ಪ್ರತಾಪಗೌಡ ಮಧ್ಯೆ ಮುನಿಸು
ಸ್ಥಳೀಯ ನೀರಾವರಿ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದ್ದು
ಕಳೆದ ಒಂದು ವರ್ಷದ ಅವಧಿಯಿಂದ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಪ್ರತಾಪಗೌಡ ಪಾಟೀಲ್
ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಪ್ರಚಾರಕ್ಕೆ ಬರದಿರುವುದು
ಕೊನೆಯ ಹಂತದಲ್ಲಿ ಪ್ರತಾಪಗೌಡ ಅವರಿಗೆ ಕೋರೋನಾ ಪಾಸಿಟಿವ್ ಆಗಿರುವುದು..
ಎರಡು ಚುನಾವಣೆಯಲ್ಲಿ ಪಕ್ಷಾಂತರ ಮಾಡಿದ ಬಗ್ಗೆ ಆಕ್ಷೇಪ
ಪಕ್ಷದ ಹುದ್ದೆ ನೀಡುವಾಗ ಪ್ರಬಲ ಮೇಲ್ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದು

ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲು ಕಾರಣಗಳು

ಚುನಾವಣಾ ಪೂರ್ವದಲ್ಲೇ ಅಭ್ಯರ್ಥಿಯ ಘೋಷಣೆ ಮಾಡಿದ ಕಾಂಗ್ರೆಸ್
ಸಿದ್ದರಾಮಯ್ಯ ಮತ್ತು ಡಿಕೆಶಿ ಜಂಟಿಯಾಗಿ ನಿರಂತರ ಪ್ರಚಾರ ಮಾಡಿದ್ದು
ಜಾತಿ ಸಮೀಕರಣದ ಸೂತ್ರ ಜಾರಿ ಮಾಡಿದ್ದ ಸಿದ್ದರಾಮಯ್ಯ
ಸ್ಥಳೀಯ ಕೈ ನಾಯಕರ ಜೊತೆಗೆ ಪಕ್ಷದ ರಾಜ್ಯ ನಾಯಕರ ನಿಯೋಜನೆ
ಬಸನಗೌಡ ತುರವಿಹಾಳ ಪರ ಇದ್ದ ಅನುಕಂಪದ ಅಲೆಯನ್ನು ಬಳಕೆ ಮಾಡಿಕೊಂಡಿದ್ದು ಕಾಂಗ್ರೆಸ್‌ ಗೆಲುವಿಗೆ ಕಾರಣಗಳಾಗಿವೆ.

"

Latest Videos
Follow Us:
Download App:
  • android
  • ios