ಅಮಿತ್ ಶಾ ಆಗಮನದಿಂದ ವಿಪಕ್ಷಗಳಲ್ಲಿ ನಡುಕ: ಬಿ.ವೈ.ವಿಜಯೇಂದ್ರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದಿಂದ ವಿಪಕ್ಷಗಳಲ್ಲಿ ನಡುಕ ಹುಟ್ಟಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ನಡೆದ ಜನಸಂಪರ್ಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ‘ಅಸಾಧ್ಯ ಎನ್ನುವ ಪದ ಅಮಿತ್ ಶಾ ಡಿಕ್ಷನರಿಯಲ್ಲೇ ಇಲ್ಲ’.
ಮಂಡ್ಯ (ಡಿ.31): ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದಿಂದ ವಿಪಕ್ಷಗಳಲ್ಲಿ ನಡುಕ ಹುಟ್ಟಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ನಡೆದ ಜನಸಂಪರ್ಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ‘ಅಸಾಧ್ಯ ಎನ್ನುವ ಪದ ಅಮಿತ್ ಶಾ ಡಿಕ್ಷನರಿಯಲ್ಲೇ ಇಲ್ಲ’. ಅವರು ಕಾಲಿಟ್ಟಲ್ಲೆಲ್ಲಾ ವಿಜಯ ಶತಃಸ್ಸಿದ್ಧ. 2023ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಚಮತ್ಕಾರ ರಾಜ್ಯದಲ್ಲೂ ನಡೆಯಲಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಚಾಣಕ್ಯ ನೀತಿ ಏಳನೇ ಬಾರಿ ಗುಜರಾತ್‌ನಲ್ಲಿ ಬಿಜೆಪಿಗೆ ಗೆಲುವನ್ನು ತಂದುಕೊಟ್ಟಿದೆ.
ಇವೆಲ್ಲವೂ ವಿರೋಧ ಪಕ್ಷದವರ ಎದೆಯಲ್ಲಿ ನಡುಕ ಹುಟ್ಟಿಸಿದೆ ಎಂದರು. ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಲಾಗಿದೆ. ಕೆ.ಆರ್.ಪೇಟೆಯಿಂದ ಆರಂಭವಾಗಿರುವ ಬಿಜೆಪಿ ಗೆಲುವಿನ ವಿಜಯಯಾತ್ರೆ ಹಳೇ ಮೈಸೂರು ಭಾಗದುದ್ದಕ್ಕೂ ಮುಂದುವರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬೂಕನಕೆರೆ ಯಡಿಯೂರಪ್ಪ ಅವರನ್ನು ನಾಡಿಗೆ ಪರಿಚಯ ಮಾಡಿದ್ದು ಜಿಲ್ಲೆ ಮಂಡ್ಯ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ನಾನು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಸವಾಲು ಹಾಕಿದ್ದರು.
ಜೆಡಿಎಸ್‌ನಿಂದ ನಂಬಿಕೆ ದ್ರೋಹ: ಸಚಿವ ಅಶ್ವತ್ಥನಾರಾಯಣ
ಯಡಿಯೂರಪ್ಪ ಅವರು ಸವಾಲು ಹಾಕಿದರೆ ಏನು ಮಾಡುತ್ತಾರೆ ಎಂದು ವಿರೋಧ ಪಕ್ಷಗಳಿಗೂ ಗೊತ್ತಿದೆ ಎಂದು ಚುಚ್ಚಿದರು. ಸೂರ್ಯ, ಚಂದ್ರರಿರುವುದು ಇರೋದು ಎಷ್ಟುಸತ್ಯವೋ ಮುಂದಿನ ಚುನಾವಣೆಯಲ್ಲಿ ದುಷ್ಟ ಶಕ್ತಿಗಳು ಸೇರಿದಂತೆ ಯಾರಿಂದಲೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದ ಅವರು, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗರಿಕೆ ಕೂಡ ಚಿಗುರುವುದಿಲ್ಲ ಎನ್ನುವುದು ವಿರೋಧಪಕ್ಷದವರ ಭಾವನೆಯಾಗಿತ್ತು. ಈ ನೆಲದಲ್ಲಿ ಬಿಜೆಪಿ ಗಟ್ಟಿಯಾಗಿ ಬೇರುಬಿಟ್ಟಿದೆ. ಹೆಮ್ಮರವಾಗಿ ಬೆಳೆಯುವುದನ್ನು ಚುನಾವಣೆಯಲ್ಲಿ ಕಾಣಲಿದ್ದಾರೆ ಎಂದು ಕುಟುಕಿದರು.
ಬೂತ್‌ಮಟ್ಟದಲ್ಲಿ ಅಧಿಕ ಮತಗಳಿಸುವ ಕಾರ್ಯವಾಗಲಿ: ಮುಂದೆ ಬರಲಿರುವ ಚುನಾವಣೆಯಲ್ಲಿ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ 50 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲ್ಲಬೇಕು ಎಂಬ ಗುರಿಯಿಟ್ಟು ನಾವು ಚುನಾವಣೆಗೆ ಹೋಗುತ್ತಿದ್ದೇವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು. ಇಲ್ಲಿಗೆ ಹತ್ತಿರದ ತೊಗರ್ಸಿ ಗ್ರಾಮದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕಾರ್ಯಕರ್ತರು ಈ ಹಿಂದೆಯೂ ಸಾಕಷ್ಟುಅಂತರದಿಂದ ಗೆಲ್ಲಿಸಿರುವ ನೀವೆಲ್ಲರೂ ಈ ಬಾರಿ ಪ್ರತಿಯೊಂದು ಬೂತ್‌ಮಟ್ಟದಲ್ಲಿ ಹೆಚ್ಚು ಮತ ಗಳಿಸುವ ಕಾರ್ಯವಾಗಬೇಕಿದೆ. ಕಾರ್ಯಕರ್ತರು ಪಕ್ಕದ ಬೂತ್‌ನಲ್ಲಿ ಏನು ಆಗುತ್ತಿದೆ ಎಂದು ತಲೆಕೆಡಿಸಿಕೊಳ್ಳುವ ಬದಲು ನಮ್ಮ ಬೂತಲ್ಲಿ ಹೆಚ್ಚು ಮತ ಬರಲು ಗಮನ ಹರಿಸಬೇಕು ಎಂದರು.
ಜೆಡಿಎಸ್‌ನಿಂದ ಜಿಲ್ಲೆಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ: ಸಿ.ಪಿ.ಯೋಗೇಶ್ವರ್
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗಳಿಸಿ ಪಕ್ಷ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಈಗಾಗಲೇ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಅಧಿಕಾರಕ್ಕೆ ಬರುವದಾಗಿ ಹಗಲು ಕಣಸು ಕಾಣುತ್ತಿರುವ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಹೀನಾಯ ಸೋಲು ಅನುಭವಿಸಲಿದೆ. ಮುಂಬರುವ ದಿನಗಳಲ್ಲಿಯೂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಕೇಂದ್ರದ ನಾಯಕರು ನನಗೆ ರಾಜ್ಯದ ಉಪಾಧ್ಯಕ್ಷ ಸ್ಥಾನ ನೀಡಿ, ಉಪಚುನಾವಣೆಯಲ್ಲಿ ಕೆಲಸ ಮಾಡಲು ಹೇಳಿದರು. ಕೆ.ಆರ್. ಪೇಟೆಯಲ್ಲಿ ಈ ಹಿಂದೆ ಎಂದು ಬಿಜೆಪಿ ಗೆದ್ದಿರಲಿಲ್ಲ. ಹಾಗೆಯೇ ಶಿರಾ ಕ್ಷೇತ್ರದಲ್ಲಿ ಗೆಲ್ಲದ ಪಕ್ಷವನ್ನು ಗೆಲ್ಲಿಸಿದ್ದೇನೆ ಎಂದರು.