BJP Politcs: ಬಿಜೆಪಿಯಲ್ಲಿ ಭಿನ್ನಮತ: ಬಿ.ವೈ.ವಿಜಯೇಂದ್ರ ಹೇಳಿದ್ದಿಷ್ಟು

*  ಭಿನ್ನಮತ ಕಟೀಲ್‌ ಸರಿಪಡಿಸುತ್ತಾರೆ
*  ನಮ್ಮದು ದೊಡ್ಡ ರಾಷ್ಟ್ರೀಯ ಪಕ್ಷ. ಕರ್ನಾಟಕದಲ್ಲೂ ನಮ್ಮ ಪಕ್ಷ ಸುಭದ್ರವಾಗಿದೆ
*  ಇಂಥ ಸಂದರ್ಭದಲ್ಲಿ ಸಣ್ಣ, ಪುಟ್ಟ ವ್ಯತ್ಯಾಸಗಳು ಇರುತ್ತವೆ
 

BY Vijayendra React on Dissent in Karnataka BJP grg

ಬೆಳಗಾವಿ(ಫೆ.09):  ಬೆಳಗಾವಿ(Belagavi) ಜಿಲ್ಲೆ​ ಬಿಜೆಪಿಯಲ್ಲಿ ಸವದಿ, ಕತ್ತಿ ವರ್ಸಸ್‌ ಜಾರಕಿಹೊಳಿ ಬ್ರದರ್ಸ್‌ ನಡುವಿನ ವೈಮನಸ್ಸನ್ನು ರಾಜ್ಯ ಬಿಜೆ​ಪಿ ಅಧ್ಯಕ್ಷ ನಳಿನ್‌ ಕುಮಾರ ಕಟೀಲ್‌(Nalin Kumar Kateel) ಸರಿಪಡಿಸುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಹೇಳಿದರು. 

ನಮ್ಮದು ದೊಡ್ಡ ರಾಷ್ಟ್ರೀಯ ಪಕ್ಷ. ಕರ್ನಾಟಕದಲ್ಲೂ(Karnataka) ನಮ್ಮ ಪಕ್ಷ ಸುಭದ್ರವಾಗಿದೆ. ಸಂಘಟನೆಯಲ್ಲೂ ಗಟ್ಟಿಯಾಗಿದೆ. ಇಂಥ ಸಂದರ್ಭದಲ್ಲಿ ಸಣ್ಣ, ಪುಟ್ಟವ್ಯತ್ಯಾಸಗಳು ಇರುತ್ತವೆ. ಇದನ್ನೆಲ್ಲ ಸರಿಪಡಿಸುವ ಕೆಲಸವನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌ ಮಾಡುತ್ತಾರೆ. ಇನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಯಡಿಯೂರಪ್ಪನವರು(BS Yediyurappa) ಸಿಎಂ ಆದ ಸಂದರ್ಭದಲ್ಲಿ ಕಾರ್ಯಕರ್ತರಿಗೆ ನೀಡಿದ್ದರು. ಬೇರೆ ಕಾರ್ಯಕರ್ತರಿಗೂ ಅವಕಾಶ ಕೊಡಬೇಕೆಂಬ ಸದುದ್ದೇಶ ಸಿಎಂ, ರಾಜ್ಯಾಧ್ಯಕ್ಷರು ಇಟ್ಟುಕೊಂಡಿದ್ದಾರೆ. ಸದ್ಯದಲ್ಲೇ ಅದು ಆಗುತ್ತೆ ಎಂಬ ಭರವಸೆ ನಮ್ಮೆಲ್ಲರಲ್ಲೂ ಇದೆ ಎಂದರು.

Karnataka Politics: ಹಿಂದೂಗಳ ಅಭಿವೃದ್ಧಿಗೆ ಕಾಂಗ್ರೆಸ್‌ ಚಿಂತನೆ ಮಾಡಿಲ್ಲ: ವಿಜಯೇಂದ್ರ

ವಿದ್ಯಾರ್ಥಿಗಳಲ್ಲಿ ಕಾಂಗ್ರೆಸ್‌ ಪಕ್ಷ ವಿಷಬೀಜ ಬಿತ್ತುತ್ತಿದೆ: ವಿಜಯೇಂದ್ರ

ವಿದ್ಯಾರ್ಥಿಗಳಲ್ಲಿ(Students) ಕಾಂಗ್ರೆಸ್‌(Congress) ಮತೀ​ಯ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. 

ಶಾಲಾ, ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದು ಬಹಳ ದುರದೃಷ್ಟಕರ ಸಂಗತಿ. ಶಾಲಾ, ಕಾಲೇಜುಗಳಿಗೆ ಸಮವಸ್ತ್ರದಲ್ಲಿ ಹೋಗುವುದು ಮುಂಚೆಯಿಂದ ಬಂದ ಪದ್ಧತಿ. ಶಾಲಾ, ಕಾಲೇಜಿನ ಸಮವಸ್ತ್ರ ಅಂದರೆ ಏನು ಎಂಬುದು ಹೆಸರಲ್ಲೇ ಗೊತ್ತಾಗುತ್ತೆ. ಶಾಲೆಗಳಲ್ಲಿ ಎಲ್ಲರೂ ಸಮಾನವಾಗಿ ಇರಬೇಕು. ಇದರ ನಡುವೆ ಎಂದಿಗೂ ಜಾತಿ ವಿಚಾರ ಬರಬಾರದು, ಹಿಂದೂ ಮುಸ್ಲಿಂ(Hindu-Muslim) ಅನ್ನೋದು ಬರಬಾರದು. ಆದರೆ ಶಾಲಾ, ಕಾಲೇಜು ಮಕ್ಕಳಲ್ಲಿಯೂ ರಾಜಕಾರಣ ಮಾಡುವ ಪ್ರಯತ್ನವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದರಲ್ಲಿ ಯಾರೂ ಸಹ ರಾಜಕಾರಣ ಬೆರೆಸುವುದು ಸರಿಯಲ್ಲ, ವಿರೋಧ ಪಕ್ಷದವರು ಹಿಜಾಬ್‌(Hijab)  ಕುರಿತ ವಿಷಯ ಬಿಟ್ಟು, ದೂರ ಉಳಿದರೆ ಉತ್ತಮ ಎಂದರು.

ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಯತ್ನಾಳ್ ವ್ಯಂಗ್ಯ

ವಿಜಯಪುರ: ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ಪಕ್ಷ ಹಾಗೂ ಸರ್ಕಾರದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Bsanagouda Patil Yatnal) ವ್ಯಂಗ್ಯವಾಡಿದ್ದರು.  

ಜ.27 ರಂದು ನಗರದಲ್ಲಿ ಮಾತನಾಡಿದ್ದ ಅವರು, ಅಧಿಕಾರ ಸಿಗುತ್ತದೆ ಎಂಬ ಆಸೆಯೊಂದಿಗೆ ಯಾರೆಲ್ಲಾ ಕೋಟ್ ಹೊಲಿಸಿಕೊಂಡಿದ್ದಾರೋ ಗೊತ್ತಿಲ್ಲ. ಬಿಜೆಪಿಯಿಂದ (BJP) ಬಹಳ ಜನ ಹೋಗ್ತಾರೆ ಎಂಬ ಮಾತು ಕೇಳಿಬಂದಿದ್ದು ಒಳ್ಳೇದಾಯ್ತು. ಸಚಿವ ಸೋಮಶೇಖರ್ ಸೇರಿ ಹಲವರು ಪಕ್ಷ ಬಿಡುವುದಿಲ್ಲ, ಮಾಧ್ಯಮಗಳು ಅದೇ ಹೇಳಿಕೆಯನ್ನು ತೋರಿಸಿ, ಪಕ್ಷವನ್ನು ಗಟ್ಟಿ ಮಾಡುತ್ತಿವೆ ಎಂದು ತಿಳಿಸಿದ್ದರು. 

ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಅನಿವಾರ್ಯ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮಗೆ ಯಾರೂ ಅನಿವಾರ್ಯ ಅಲ್ಲ. ಬಿಜೆಪಿ ಮತ್ತೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಕುಸ್ತಿ ಇರೋದು ಡಿ.ಕೆ.ಶಿವಕುಮಾರ್ ಮೇಲೆಯೇ ಹೊರತು ನಮ್ಮ ಮೇಲೆ ಅಲ್ಲ ಎಂದು ಹೇಳಿದರು.

Karnataka Cabinet : ವಿಜಯೇಂದ್ರಗೆ ಮಂತ್ರಿ ಸ್ಥಾನ ಸಿಗುತ್ತಾ..? : ಬಿಎಸ್‌ವೈ ಉತ್ತರ

ಪ್ರಸ್ತುತ ಕಾಂಗ್ರೆಸ್​ನಲ್ಲಿರುವ ಸಿ.ಎಂ.ಇಬ್ರಾಹಿಂ ಯಾವಾಗ ಏನು ಮಾತನಾಡುತ್ತಾರೋ ಗೊತ್ತಿಲ್ಲ. ಅವರದ್ದು ಮತ್ತು ಕಾಂಗ್ರೆಸ್​ನವರದ್ದು ಏನೇನಿದೆಯೋ ನನಗೆ ಗೊತ್ತಿಲ್ಲ. ಅವರು ಒಮ್ಮೆ ದೇವೇಗೌಡರನ್ನು ಅಪ್ಪ ಎನ್ನುತ್ತಾರೆ, ಇನ್ನೊಮ್ಮೆ ಸಿದ್ದರಾಮಯ್ಯ ಅವರನ್ನು ಅಣ್ಣ ಎನ್ನುತ್ತಾರೆ. ರಾಜಕೀಯದಲ್ಲಿ ಹೀಗೆ ಅಪ್ಪ-ಅಣ್ಣ ಎನ್ನುವವರು ಭಾರೀ ಡೇಂಜರ್ ಎಂದು ಟಾಂಗ್ ಕೊಟ್ಟರು.

ಮುರುಗೇಶ್‌ ನಿರಾಣಿ ವಿರುದ್ಧ ವಾಗ್ದಾಳಿ

ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ಮತ್ತೆ ಕಿಡಿಕಾರಿದ ಯತ್ನಾಳ್, ನಿರಾಣಿ ಯಾವ ರಾಜ್ಯಕ್ಕೆ ಸಿಎಂ ಆಗ್ತಾರೆ ಪಾಕಿಸ್ತಾನಕ್ಕಾ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾರೆ. ನಿರಾಣಿ ಏನು ಗುರಾಣಿನಾ ಎಂದು ಆಕ್ರೋಶ ವ್ಯಕ್ತಡಿಸಿದರು. ಸಮುದಾಯ ಒಡೆಯುವ ನಿರಾಣಿ ಅವರ ಪ್ರಯತ್ನ ಈಡೇರುವುದಿಲ್ಲ. ಅವರು ಎಂದಿಗೂ ಉದ್ಧಾರ ಆಗಲ್ಲ, ಹೀಗೇ ಮಠಗಳನ್ನು ಕಟ್ಟುತ್ತಿದ್ದರೆ, ಧರ್ಮದ ವಿಚಾರದಲ್ಲಿ ಕೈ ಹಾಕಿದರೆ ರಾಜಕೀಯವಾಗಿ ಅಂತ್ಯವಾಗುತ್ತಾರೆ ಎಂದು ಕಿಡಿಕಾರಿರು.
 

Latest Videos
Follow Us:
Download App:
  • android
  • ios