ಲಕ್ನೋ, (ಅ.29):  ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ ಮರು ದಿನವೇ ಬಹುಜನ ಸಮಾಜವಾದಿ ಪಕ್ಷದ 7 ಶಾಸಕರನ್ನು  ಪಕ್ಷದಿಂದ ಅಮಾನತು ಮಾಡಿದ ಅಧ್ಯಕ್ಷೆ ಮಾಯಾವತಿ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸಭಾ ಚುನಾವಣೆ ವೇಳೆ ಅಭ್ಯರ್ಥಿ ರಾಮ್ ಜಿ ಗೌತಮ್ ಅವರ ಉಮೇದುವಾರಿಕೆಯನ್ನು ವಿರೋಧಿಸಿ ಬಿಎಸ್‌ಪಿಯ 7 ಶಾಸಕರು ಬಂಡಾಯವೆದ್ದಿದ್ದರು.

ಅಲ್ಲದೇ ಬುಧವಾರ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಈ ಹಿನ್ನೆಲೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ಅಧ್ಯಕ್ಷೆ ಮಯಾವತಿ ಅವರು ಆ 7 ಶಾಸಕರನ್ನು ಅಮಾನತು ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ನಿಧನ: ಸಿಎಂ ಯಡಿಯೂರಪ್ಪ ಸಂತಾಪ...!

 ಚೌಧರಿ ಅಸ್ಲಾ ಆಲಿ, ಹಕೀಂ ಲಾಲ್ ಬಿಂದ್, ಮೊಹಮದ್ ಮುಜ್ ತಬಾ ಸಿದ್ಧಿಕಿ, ಅಸ್ಲಾ ರೈನಿ, ಸುಷ್ಮಾ ಪಟೇಲ್,ಹರ್ ಗೋವಿಂದ್ ಭಾರ್ಗವ ಮತ್ತು ಬಂದಾನ ಸಿಂಗ್ ಅಮಾನತುಗೊಂಡ ಶಾಸಕರು.

ಬಿಎಸ್‌ಪಿಯಿಂಂದ ಸಸ್ಪೆಂಡ್ ಆದ ಈ 7 ಶಾಸಕರು ಸಮಾಜವಾದಿ ಪಕ್ಷ ಸೇರಲಿದ್ದಾರೆ ಎನ್ನಲಾಗಿದ್ದು,  ಉತ್ತರಪ್ರದೇಶ ರಾಜ್ಯ ರಾಜಕೀಯ ಗರಿಗೆದರಿದೆ.

ಪಕ್ಷದ 7 ಶಾಸಕರು ಬಿಎಸ್ಪಿಗೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿ ರಾಮಜಿ ಗೌತಮ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ.

ಉತ್ತರಪ್ರದೇಶದಲ್ಲಿ ನಡೆದ 10 ರಾಜ್ಯಸಭಾ ಚುನಾವಣೆ 8 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ತಮ್ಮ ಅಭ್ಯರ್ಥಿಗಳನ್ನು ಗೆಲವು ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿದರೂ ಅದು ಸಾಧ್ಯವಾಗಿರಲಿಲ್ಲ.

ನಾಲ್ವರು ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಇಬ್ಬರು ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಹಾಗೂ 7ಮಂದಿ ಬಿಜೆಪಿ ಅಭ್ಯರ್ಥಿಗಳು ಹಾಗೂ ಓರ್ವ ಕಾಂಗ್ರೆಸ್ ಅಭ್ಯರ್ಥಿ ರಾಜ್ಯಸಭಾ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು.